ಹನಿಗಳೊಂದಿಗೆ ಗಝಲ್
ಕವನ
ಪ್ರಯೋಗಗಳ
ನಡುವೆಯೇ ಚಿಗುರಿ
ಹೆಮ್ಮರವಾಗು !
***
ಪ್ರಯೋಗವದು
ಇರದೊಡೆ ಸಾಹಿತ್ಯ
ನಿಂತ ನೀರದು !
***
ಬರೆದಂತೆಯೇ
ಕವಿಯಾಗಲಾರನು
ಕಲಿಯಬೇಕು !
***
ಮೀಟರ್ ಬೇಕು
ಎಂದವರ ಸಾಹಿತ್ಯ
ಸೊರಗಿಹುದು !
***
ಗುಲ್ ಮೊಹರಿನ
ನಡುವೆ ಕನ್ನಡವು
ಕಾಣೆ ಗೆಳೆಯಾ !
***
ಉರ್ದು ಗುಣವ
ಇಟ್ಟು ಬರೆದ ಗಝಲ್
ಕನ್ನಡ ಸ್ವತ್ತಲ್ಲ !
***
ಕಾವ್ಯನಾಮವು
ಕವಿ ಕಾವ್ಯದ ಸೊತ್ತು
ತೆಗಳ ಬೇಡ !
***
ಗಝಲ್
ಒಮ್ಮೆಯೆನ್ನ ಅಪ್ಪಿಬಿಡೆ ಮುದ್ದು ಮುಖದ ಮೋಹಿನಿ
ಸೌಖ್ಯವಿಹುದು ಬಾಳಿನಲ್ಲಿ ಒಲುಮೆ ಸುಖದ ಮೋಹಿನಿ
ಜೀವದೊಲುಮೆ ತಾಣದಲ್ಲಿ ಪ್ರೀತಿ ಅರಳಿ ನಿಂತಿದೆ
ತನುವಿನಾಳ ಚೆಲುವು ಮೂಡೆ ಪ್ರೇಮ ಮನದ ಮೋಹಿನಿ
ಕನಸಿನಾಳ ನನಸು ಇರಲಿ ಕುಶಿಯ ತರಲಿ ಕಂಗಳು
ಚತುರನಾಟ ಸನಿಹ ಸಿಹಿಯು ಚೈತ್ರ ತನದ ಮೋಹಿನಿ
ಚಿತ್ರದೊಳಗೆ ಬಿಡಿಸಿದಂತ ಕಮಲದೊಳಗೆ ಸೊಬಗಿದೆ
ನಗುವಿನೊಳಗೆ ಬೆಸುಗೆ ಬರಲಿ ಮೈತ್ರಿ ಸೊಗದ ಮೋಹಿನಿ
ಈಶ ಬದುಕಿನೊಳಗೆ ಇರಲು ಸುತ್ತ ಹರುಷ ಚೆಲ್ಲಿದೆ
ತಂಪಿನೊಸರು ಸ್ನೇಹದೊಳಗೆ ಸೇರಿ ಸವಿದ ಮೋಹಿನಿ
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್