ಹನಿಗಳೊಂದಿಗೆ...
ಕವನ
ಕಾಲಾಯ ತಸ್ಮೈನಮಃ!
ಒಂದು ಕಾಲಕೆ
ಆ ನಗರದ
ಫುಟ್ಪಾತಲಿ
ಕಷ್ಟಪಟ್ಟು,ನೊಂದು
ಇಡ್ಲಿಯನು
ತಿಂದವರು...
ಇಂದು
ಅವರೇ
ಈ ರಾಜ್ಯದ
ನಲಿಯುತಿರುವ
ನಗರಾಭಿವೃದ್ಧಿ
ಸಚಿವರು!
***
ವೀಕೆಂಡ್ ವಿತ್ ರಮೇಶ್...
ಭೇಷ್ 'ಜೀ' ಟಿ ವಿ !
ನೂರೊಂದು
ಸಿನಿಮಾಗಳಲಿ
ಅಭಿನಯಿಸಿ
ರಂಜಿಸುತ್ತಿದ್ದರು;
ಭ್ರಮಾಲೋಕದ
ಸಿನಿಮಾ ರೀಲುಗಳು...
ಈಗ 'ವೀಕೆಂಡ್
ವಿತ್ ರಮೇಶ್'
ಎಂಬ ಷೋನಲಿ
ತೋರಿಸುತಿರುವರು
ನಿಜ ಜೀವನದಲಿ
ನಡೆದ ಏಳುಬೀಳು!
***
ಬಲಾಢ್ಯರ ಸ್ಥಿತಿ...
ಮಹಾ ಬಲಾಢ್ಯ
ಕುಸ್ತಿ ಪಟುಗಳ
ಮನವಿಗೇ
ಮಣಿಯದ
ನಮ್ಮ ಕೇಂದ್ರ
ಸರ್ಕಾರ...
ನಮ್ಮಂತಹ
ಬಲಹೀನ
ಬಡಕಲು ದೇಹಿಗಳ
ಮನವಿಗೆ
ಮಾಡುವುದೇ
ಪುರಸ್ಕಾರ?
***
ಉರಗ ತಜ್ಞ
ಅಲ್ಲಲ್ಲಿ
ಹಾವ
ಹಿಡಿಯಲು
ನೀ
ಪೊಗದಿರೆಲೊ
ರಂಗ...
ಹಿಡಿದು
ಮನೆಯಲಿ
ಇಟ್ಟು
ಕೊಂಡರೆ
ನೀನಾದೀಯ
ಮಂಗ!
-ಕೆ ನಟರಾಜ್, ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
