ಹನಿಹನಿ ಮಾತು..

ಹನಿಹನಿ ಮಾತು..

ಕವನ

 

* ಹುಡುಗಿ ಹೊಡೆದಳು ಕಣ್ಣು

ನಾ ಹತ್ತಿದೆ ಬೆನ್ನು

ಅವಳು ಅಂದಳು ಚಿನ್ನು

ಬಾ ಹೋಗೋಣ ಶಾಪಿಂಗ ಇನ್ನು..

 

 * ಕದ್ದು ನೋಡ್ಯಾಳ ಕನ್ನಡಿಯಾಗಿಂದ

ಮುದ್ದು ಮಾಡ್ಯಾಳ ಕನಸಾಗಿಂದ

ನಕ್ಕು ನಾಚ್ಯಾಳ ಮೊಗದಾಗಿಂದ

ಪ್ರೀತಿ ಮಾಡ್ಯಾಳ ಹೃದಯಾಗಿಂದ..

 

 * ಸ್ನೇಹದ ಬಲ್ಲಿ ಬೆಳೆದು

ಮನದಲಿ ಮನೆ ಮಾಡಿದೆ

ಪ್ರೀತಿಯ ಹೂ ಆಗಿ ಹುಟ್ಟಿ

ನನ್ನ ಮನದಲಿ ಅರಳಿದೆ..

 

 * ಮದುವೆ ನಂತರ ಅವಳು

ನನ್ನ ಅರ್ಧಾಂಗಿನಿ

ಹೇಗೆ ಉಡುವುದು ಇನ್ನು

ಅರ್ಧ ಸೀರೆ-ಅರ್ಧಅಂಗಿ?

 

 * ಅವಳು ಕೊಟ್ಟಿದಳು ಮುತ್ತು

ಎನಿಸಿದಳು ಮುತ್ತು ಹತ್ತು

ಹೇಳಿದ ಕೊಡಲೆ ಇನ್ನು ಕತ್ತು

ಸಾಕು ನನ್ನ ನಾಯಿ ಇವತ್ತು..

 

* ನಾ ಮುದ್ದಾಡಿದೆ ನಿನ್ನ ನಲ್ಲೆ

ನೀ ಮುತ್ತಿಡಲು ಅಂದೆ ಒಲ್ಲೆ

ನಾ ಮುತ್ತಿ ಮುದ್ದಾಡಲೆ ಚೆಲ್ವೆ

ನಿ ಸಿಟ್ಟಲಂದೆ ಹೋಗು ತರಲೆ..

 

 * ಪುಟ್ಟ ಮನಸಿನ ಕನಸು

ಚಿಗುರುವ ಹೊತ್ತಿಗೆ ಬಾಡಿತು

ನೋವಿನ ಮೋಡದ ದುಃಖದ ಮಳೆ

ಚಿಂತೆಯೆಂಬ ಚಿತೆಯಲಿ ಭಸ್ಮವಾಯಿತು..

 

 * ಹೇಳದೆ ಕಾರಣ

ಕಾದೇನು ಗೆಳೆಯ

ಕಾಣದ ಪ್ರೀತಿಯಾ

ಭಾವಿಸಿದೆ ಇನಿಯ..