ಹನಿಹನಿ ಹಣತೆ!

ಹನಿಹನಿ ಹಣತೆ!

ಕವನ
ಮಾತಿಗೆ ಬೆಲೆ ಇದೆ ಎಂದು ತಿಳಿದದ್ದು, ಮೊನ್ನೆ ಮೊಬೈಲ್ ಗೆ ಹಾಕಿಸಿದ ಕರೆನ್ಸಿ ಹತ್ತು ನಿಮಿಷದಲ್ಲಿ ಖಾಲಿಯಾದಾಗ ¤ ¤ ¤ ಎದುರುಮನೆಯ ಬೀದಿಜಗಳದ ಮಾತಿಗೆ ಎದುರುಜವಾಬು ನೀಡಲಾಗದಾಗ ಆ ಪ್ರಸಿದ್ದ ಉಪನ್ಯಾಸಕನಿಗೆ ತನ್ನ ಪ್ರಸಿದ್ದಿಯ ಬಗ್ಗೆ ಅನುಮಾನ ಮೂಡಿತು ¤ ¤ ¤ ಪರಿಸರಜಾಗೃತಿ ಶಿಬಿರದ ಯಶಸ್ಸಿಗೆ ಚದುರಿ ಬಿದ್ದ ಪ್ಲಾಸ್ಟಿಕಲೋಟಗಳು ಸಾಕ್ಷಿಯಾಗಿದ್ದವು ¤ ¤ ¤ ಯಾರ ತಪ್ಪಿಗೆ ಯಾರಿಗೋ ಶಿಕ್ಷೆ.ಚಳಿ ತಂದಿದ್ದು ತಂಗಾಳಿ ಬೂದಿಯಾಗಿದ್ದು ಮಾತ್ರ ಕಟ್ಟುಬೀಡಿ ¤ ¤ ¤