ಹಮ್ ಹೋಂಗೆ ಕಾಮಯಾಬ್...
ಹಮ್ ಹೋಂಗೆ ಕಾಮಯಾಬ್...
ನಾವ್ ಬಂದೇ ಬರ್ತೇವೇ
ನಾವ್ ಬಂದೇ ಬರ್ತೇವೇ
ನಾವ್ ಬಂದೇ ಬರ್ತೇವ್ ನಿಮ್ಮುಂದೇ
ಓಹೋ ಮತದಾರರೇ,
ವೋಟು ಕೇಳೋಕೇ
ನಾವ್ ಬಂದೇ ಬರ್ತೇವ್ ನಿಮ್ಮುಂದೇ|
ಕಾಸೇನೂ ಬೇಕಿಲ್ಲಾ
ಕಾರಣಾನೂ ಬೇಕಿಲ್ಲಾ
ಭರವಸೆ ಕೊಡೊಕೇನಂತೇ
ಓಹೋ ನಾಚಿಕೆ ಬಿಟ್ಟೂ,
ಮಾನ ಮರ್ಯಾದೆ ಬಿಟ್ಟೂ
ನಾವ್ ಬಂದೇ ಬರ್ತೇವ್ ನಿಮ್ಮುಂದೇ|
ದೂರ್ ಹೇಳೋಕೇನಂತೇ
ಸಾವಿರಾನೂ ಹೇಳ್ತಾರೇ
ಚಿಂತೆಬಿಡಿ ವಿರೋಧಿಗಳ್ದೂ
ಆಹಾ ನಿಮ್ಗೇ ಗೊತ್ತಿದೇ,
ಅವ್ರ್ನಮ್ಗಿಂತ್ ದೊಡ್ಡ್ ಕಳ್ರೂ
ಆದ್ರಿಂದ್ ಬಂದೇ ಬರ್ತೆವ್ ನಿಮ್ಮುಂದೇ|
ಮತದಾರ ಬಾರಪ್ಪಾ
ನಿಂಗೇನ್ಬೇಕ್ ಕೇಳಪ್ಪಾ
ಕೇಳಿದ್ನೆಲ್ಲಾ ಕೊಡಿಸ್ತೀನ್ ಕಾಣಪ್ಪಾ
ಹ್ಞೂಂ ಅನ್ನೋಕೇನಂತೇ,
ಎಲೆಕ್ಷನ್ ಮೂರ್ ದಿನ
ಆಮೇಲ್ ನೀನ್ಯಾರಂತ ಕೇಳೋರ್ ಯಾರ್ತಂದೇ?
ಎಲೆಕ್ಷನ್ ಆಗೋಯ್ತು
ಎಲ್ರೀಗ್ ಸೀಟ್ ಕಡಿಮೆ ಆಯ್ತೂ
ಹಾಗಂತ ಕೈಕಟ್ಟ್ ಕೂಡೋದುಂಟೇ
ಓಹೋ ಶತ್ರೂ ಪಕ್ಷಕ್ಕೇ
ಹೆಗಲ್ ಕೊಡ್ತೀವೀ
ಆದ್ರೂ ಸರ್ಕಾರಂತು ನಡೆಸೇನಡೆಸ್ತೀವೀ|
ಕೊನೆಯಲ್ಲಿ ಕೈ ಕೊಟ್ರೂ
ಒಪ್ಪಂದ ಮುರಿದೋಯ್ತೂ
ಮಂತ್ರಿಗಿರಿ ಕೈ ಬಿಟ್ಟೋದ್ರೇನಂತೇ
ಯಾಕೇ ನೀನೇನ್ ಸತ್ತೋದ್ಯಾ,
ಕೇಳೋ ಮತದಾರ
ಮತ್ತೆ ಬಂದೇ ಬರ್ತೀವ್ ನಿನ್ಮುಂದೇ||
-ವಿಶ್ವನಾಥ್.ಡಿ.ಎ