ಹಳಸಲುಗಳು ಸಾರ್ ಹಳಸಲುಗಳು !

ಹಳಸಲುಗಳು ಸಾರ್ ಹಳಸಲುಗಳು !

’ಹೊಸತನ’, ’ತಾಜಾತನ’, ’ನವನವೀನ’ ಅಂತ ’ನ’ಗಳನ್ನೇ ಹೇಳ್ಕೊಂತಾ ಜೀವ’ನ’ ಸಾಗಿಸೋ ಮಾ’ನ’ವ ನಿಜಕ್ಕೂ ಹಳಸಲು ಕಣ್ರೀ ನಾವು!

ಅಂಕುರಿಸಿದ ದಿನದಿಂದ ನವ ಮಾಸಗಳ ನಂತರ ಕಾಣಿಸಿಕೊಂಡಾಗಲೂ, ’ನವ’ಜಾತ ಅನ್ನಿಸಿಕೊಳ್ಳೋ ಹಳಸಲು ಹೊಸಬಾಡಿಗಳು ನಾವು !

ಎಂದೋ ನೂಲು ತೆಗೆದು, ಮತ್ತೆಂದೋ ಸಿದ್ದ ಮಾಡಿದ ಉಡುಪನ್ನೇ ಹೊಚ್ಚಹೊಸಾ ದಿರಿಸು ಎಂಬಂತೆ ತೊಟ್ಟು ಮೆರೆಯೋ ಹಳಸಲು ನಾವು !

ಎಂದೋ ಬೆಳೆದದ್ದನ್ನು ಕೊರೆಯೋ ಪೆಟ್ಟಿಗೆಯಿಂದ ತೆಗೆದು, ಇಂದೇ ಬೆಳೆಸಿದ್ದು ಅನ್ನೋ ಹಾಗೆ ತಿನ್ನೋ ಹಳಸಲು ’ಕೂಲ್’ಬಾಡಿಗಳು ನಾವು !

ಪದಾರ್ಥ ವ್ಯರ್ಥವಾಗದಿರಲಿ ಎಂದೋ, ಸಮಯದ ಅಭಾವವೋ ಒಟ್ಟಿನಲ್ಲಿ ತಂಗಳು ಪೆಟ್ಟಿಗೆಯ ಆಹಾರ ತಿನ್ನೋ ಹಳಸಲುಗಳು ನಾವು !

ಹದಿನಾರು ವಯಸ್ಸಿಗೇ ಸಿದ್ದವಾಗಿಯೂ ಮೂವತ್ತಕ್ಕೆ ಮದುವೆಯಾಗುತ್ತ ’ನವ’ ವಧು/ವರ ಅಂತ ಕರೆಸಿಕೊಳ್ಳೋ ಹಳಸಲು ಹಳೇಬಾಡಿಗಳು ನಾವು !

ಸತ್ತಿದ್ದನ್ನೇ ಸುಟ್ಕೊಂಡ್, ಬೇಯಿಸ್ಕೊಂಡ್, ಕರ್ಕೊಂಡ್ ತಿಂದು ತಾಜಾತನ ತೋರಿಸ್ಕೊಂಡ್ ತಿರುಗಾಡೊ ಹಳಸಲು ಹಾಟ್-ಬಾಡಿಗಳು ನಾವು !

ಕೊನೆಗೊಂದು ದಿನ ವ್ಯಾಪಾರ ಮುಗಿಸಿಯೂ, ಹೂವಿನ ಕೆಳಗೇ ಗಂಟೆ ಗಟ್ಟಲೆ ಬಿದ್ಗೊಂಡ್, ಮೇಲ್ ಹೋಗೋ ಹಳಸಲು ಡೆಡ್-ಬಾಡಿಗಳು ನಾವು !

ಹೋದ್ ಮೇಲೂ ಇರುವವರಿಗೆ ಶುಭ ತಂದು, ಮೇಲಿನ್ ಲೋಕದ ಬಾಗಿಲು ತಟ್ಟೋಕ್ಕೆ ಹದಿನೈದು ದಿನ ತೊಗೊಳ್ಳೋ ಹಳಸಲು ಪ್ರೇತಗಳು ನಾವು !

ಬಂದದ್ದು, ಇದ್ದದ್ದು, ಹೋಗಿದ್ದೆಲ್ಲ ಹಳಸಲು ಎಂದು ಸೂಚಿಸೋ ಹಾಗೆ, ಹೋದ್ ಮೇಲೂ ಹೆಸರಲ್ಲೇ ಹಳಸಲು ಎಂದೇ ತೋರೋ Late ಬಾಡಿಗಳು ನಾವು !

ಹಳಸಲುಗಳು ಸಾರ್ ನಾವ್ ಹಳಸಲುಗಳು !!

 

Comments

Submitted by kavinagaraj Wed, 04/16/2014 - 08:44

ಭಲ್ಲೆಯವರೇ, ನಾವುಗಳೂ ಹಳಬರೇ. ಇಂದಿನವರಲ್ಲ. ಆಗಿನ ಹಳಬರು ಇಂದಿನ ಹೊಸಬರು, ಅಷ್ಟೆ. [ಪುನರಪಿ ಜನನಮ್ . . .] ಉತ್ತಮ ವಿಡಂಬನಾತ್ಮಕ ಬರಹಕ್ಕೆ ಅಭಿನಂದನೆ.

Submitted by ಗಣೇಶ Sun, 04/20/2014 - 19:01

ಭಲ್ಲೇಜಿ,
ರಾಜಕಾರಣಿಗಳು/ ಆಶ್ವಾಸನೆಗಳ ಬಗ್ಗೆ ಬರೆದಿದ್ದೀರಿ ಅಂದು ನೋಡಿದರೆ...ನಮ್ಮನ್ನೇ ಹಳಸಲು ಮಾಡಿದಿರಲ್ಲಾ ಶಿವಾ!

Submitted by harshakdn Fri, 05/09/2014 - 10:52

ಒಟ್ಟಿನಲ್ಲಿ ಹುಟ್ಟಿನಿಂದ ಸಾಯೋವರಗೆ ನಾವೆಲ್ಲಾ ಹಳಸುಗಳು ಎಂದು ಚೆನ್ನಾಗಿ ಬಿಂಬಿಸಿದ್ದೀರ.

ಧನ್ಯವಾದಗಳು ಭಲ್ಲೆಜಿ

Submitted by bhalle Fri, 05/09/2014 - 23:24

In reply to by harshakdn

ಹಳಸುತನದಲ್ಲೇ ಹುಟ್ಟಿ ಹಳಸುತನದಲ್ಲೇ ಬೆಳೆದಿದ್ದರಿಂದ ಅದನ್ನು ಅರ್ಥಮಾಡಿಕೊಳ್ಳುವುದಕ್ಕೆ ಇಷ್ಟು ದಿನ ಬೇಕಾಯ್ತು !!!
ಧನ್ಯವಾದಗಳು ಹರ್ಷ!