ಹಾಯ್ ಪ್ರಿಯತಮಾ !

ಹಾಯ್ ಪ್ರಿಯತಮಾ !

ಬರಹ

ನನಗೆ, ’ಪ್ರಿಯತಮ ”, ಅಷ್ಟೇನು ಹೊಸಬರೂ ಅಲ್ಲ. ಅಥವಾ ಅವರ ಮುಂದೆ ನಿಂತು ಗೊತ್ತೆಂದು ಹೇಳಿಕೊಳ್ಳುವಷ್ಟು ಪರಿಚಯಸ್ತನೂ ಅಲ್ಲಾ. ಆದರೆ, ಅವರು ನನಗೆ ಗೊತ್ತು, ಎಂದು ಮಾತ್ರ ಹೇಳಬಲ್ಲೆ. ಪ್ರತಿಮಂಗಳವಾರ ಅವರ ಕಾಲಂ ತಪ್ಪದೆ ಓದುತ್ತಾ ಬಂದಿದ್ದೇನೆ. ಆದರೆ ಅವರಿಗೆ ನನ್ನ ಪರಿಚಯವಿಲ್ಲ ! ಇದು ವಾಸ್ತವ ಸಂಗತಿ.

ನಾನೂ ’ಹಾಯ್’ ಎಂದಾಗ ಪ್ರಿಯತಮ, ತಮ್ಮ ಪ್ರಿಯತಮೆ ಡೆ ತಿರುಗಿ, 'ಸ್ವಲ್ಪ ಬರ್ತೆನೆ, ಇರಿ,'  ಎಂದು ಹೇಳಿದವರೇ ನನ್ನ ಕಡೆ ಮುಗುಳ್ನಕ್ಕು, ಹೊರಟೇ ಹೋದರು ! 

ಈಗ, ನನ್ನ ಮುಂದೆ, ಲಕ್ಷಣವಾದ ಮಧ್ಯವಯಸ್ಸಿನ ಮಹಿಳೆ, ನಿಂತಿದ್ದಾರೆ. ’ಇದೇನೂ ಹೊರಟೇ ಹೋದರಲ್ಲಾ’ ಅಂದಾಗ,ಪ್ರಿಯತಮೆಯವರು, 'ನೀವು ಕಾಳಜಿಮಾಡುವುದು ಬೇಡ,' 'ಅವರು ಯಾವಾಗಲೂ ಹೀಗೆಯೇ ಗಡಿಬಿಡಿ ಮನುಷ್ಯ ! ಮಂಡ್ಯದಿಂದ ಪ್ರಕಾಶಕರು, ಬೆಳಿಗ್ಯೆ ಪೋನ್ ಮಾಡಿದೃ. ಈಗ ಇವರಿಗೆ ಕಾಯ್ತಾ ಹೊರಗೆ ನಿಂತಿದಾರೆ. ಅದಕ್ಕೆ ಅವರಕಡೆಗೆ ಹೋಗಿದ್ದಾರೆ. ಬರ್ತಾರೆ,  ಇಲ್ಲೇ ಕೂಡಿ. ಏನಿತ್ತು ಕೆಲ್ಸಾ ಅವರೊಟ್ಟಿಗೆ' ?

ವೆಂಕಟೇಶ್ :
ಒಕೆ. ಮೊದ್ಲು ನಾನ್ಯಾರು ಅಂತ ಮೊದ್ಲು ಹೇಳ್ಬಿಡ್ತೀನಿ,  ತಾಳಿ. ನಾನು ಯಾವ ’ಪತ್ರಿಕಾ ಪ್ರತಿನಿಧಿ’ಯೂ ಅಲ್ಲ ! ಪ್ರಿಯತಮರ ಪರಮಪ್ರಿಯರಲ್ಲೊಬ್ಬನು. ’ಓಹ್  ಸಾರಿ’ ’ನಿಮಗಿಂತ ಹೆಚ್ಚು ಅಲ್ಲವೇ ಅಲ್ಲ’. ನಿಮ್ಮಮುಂದೆ ನಾನು ಈ ಮಾತನ್ನು ಹೇಳಬಾರದಾಗಿತ್ತು.
’ಪ್ರಿಯತಮೆ’ :
ಬಿಡಿ ಪರವಾಗಿಲ್ಲ. ಈತರಹದ ಮಾತ್ನ, ನಾನು ಸುಮಾರ್ ದಿನಗಳಿಂದಲೂ ಕೇಳ್ಸ್ಕೊಳ್ತಿದೀನಿ. ಬರವಣಿಗೆ,  ಓದು,  ಅಂದ್ರೆ ಸಾಕು. ಆಘೋಯ್ತು ನೋಡಿ,  ಒಮ್ಮೆಮ್ಮೆ ನಾನಿರೋದೂ ಅವರ್ಗೆ ಕಾಣ್ಸೊದಿಲ್ಲ.  ಹಿಂದಿ, ಮರಾಠಿ ಭಾಷೆಗಳ ಕಥೆಗಳ್ನ ಕನ್ನಡಕ್ಕೆ ತರ್ತಾರೆ.  ’ಮನುಕುಲ’ ಅನ್ನೋ ಪ್ರಕಾಶನ ಸಂಸ್ಥೆ ಹೆಸೃ ಕೇಳಿದಿರೇನೋ ! ಅದೊಂದು  ತ್ರೈಮಾಸಿಕ ಪತ್ರಿಕೆ ಅವರ್ದೆ. ಪತ್ರಿಕೆ  ಸರಿಯಾಗ್ ಓಡ್ದೆ ಕೈಸುಟ್ಕೊಂಡ್ರಪ್ಪ. ಆಮೇಲೆ ಅದೂ ಇದೂ ಅಂತಹೇಳಿ ಅದೇ ಪ್ರಕಾಶನದಿಂದ ೧೦-೧೫ ಕೃತಿಗಳ್ನ ಹೊರಕ್ ತಂದಿದಾರೆ. ನಮ್ ಮನೆ ಭಾಷೆ, ಕೊಂಕಣಿ !
೫೦ ವರ್ಷ್ದಿಂದ ಒಂದಲ್ಲ ಒಂದ್ ಬರೀತಾನೇ ಇದಾರಪ್ಪ. ಓಟ್ಟು ೧೬ ಕೃತಿಗಳು ಬೆಳಕಿಗೆ ಬಂದಿದೆ ಅಂತ್ ಕಾಣ್ಸತ್ತೆ. ನೋಡಿ, ೪ ಕಥಾ ಸಂಕಲನ, ೧೦ ಹಾಸ್ಯಕ್ ಸಂಬಂದ್ಸಿದ್ದು. ಮತ್ತೆ ಅದು ಇದು ಅಂತ ೨ ಇರ್ಬೋದು. ನಾವು ಸ್ವಲ್ಪ ರೆಷ್ಟ್ ತೊಗೊಳಿ, ಬೇಕಾದಷ್ಟ್ ಬರ್ದಿದ್ದಾಗಿದೆ.  ಈ ವಯಸ್ ನಲ್ಲಿ ಯಾಕ್ ಇವೆಲ್ಲಾ , ನೀವ್ ಬರ್ದಿದ್ ಸಾಕು’ ಅಂದ್ರೆ ಕೇಳ್ಬೇಕಲ್ಲ. ಮನೇಲೂ ಅಷ್ಟೆ ಹಾಸ್ಯಾಂದ್ರೆ ಪ್ರಾಣ !
ಅದೇ ಹೇಳಿದ್ನಲ್ಲ ನಿಮಗ್ ಗೊತ್ತಲ್ಲ. ಮಂಡ್ಯದಲ್ಲಿ ’ಅಡ್ವೈಸರ್’ ಅಂತ ಯಾವ್ದೋ ’ಪ್ರಕಾಶನದ ಸಂಸ್ಥೆ’ ಇದೆ. ಅವೃ ಯಾವಾಗ್ಲೂ ಫೋನ್ ಮಾಡ್ತಾನೇ ಇರ್ತಾರೆ. ಇವ್ರು ಬರ್ದಿರೋ ’ಅಂತರಂಗ-ಬಹಿರಂಗ’(ಕಥಾಸಂಕಲನ), ’ಹಿಕ್ಮತ್ತು’, ’ಕರಾಮತ್ತು’, ’ಮಲಾಮತ್ತು’ (ಹಾಸ್ಯ ಕಥೆಗಳ ಸಂಕಲನ) ಆಮೇಲೆ ’ತಾರಾಂಕಿತ’ ಅನ್ನೋ, ’ಪ್ರಿಯಾ ತೆಂದುಲ್ಕರ್’ ರವರ ’ಮಿನಿ ಕಾದಂಬರಿ’ಯ  ಅನುವಾದ, ಮತ್ತು ಕೊನೆಯದಾಗಿ, ಪುಸ್ತಕ ಗಳ್ನ ಒಟ್ಟು ೫ ಪುಸ್ತಕ ಗಳು, ’ಕುಂದಾಪುರದ ಪುಸ್ತಕ ನಿಧಿ’ಯಿಂದ  ’ಅಪರಾಧಿಕಥೆಗಳು’ ಮತ್ತು, ’ಅನುವಾದಿತ ಕಥೆಗಳು, ಪ್ರಕಟ್ಸಿದಾರೆ. ಇನ್ನೂ ಮೂರೋ, ನಾಕೋ, ಬುಕ್ಸ್ ಗಳ್ನ ಇನ್ನೂ  ಬರೀತಾನೇ ಇದಾರಪ್ಪ ನನಗೆ ಹೆಚ್ಗೆ ಗೊತ್ತಿಲ್ಲ. ಕೆಲ್ಸ ಇನ್ನೂ ಪೂರ್ತಿ ಮುಗ್ದಿಲ್ಲ.
ವೆಂಕಟೇಶ್ :
ನಾನು ಅವರ್ನ ’ಅಭಿನಂದ್ಸೋಣ ಅಂತ್ ಬಂದೆ’. ನಾನು ಅದೋ ಇದೋ ’ಸಂಪದ ಅನ್ನೋ ಕನ್ನಡದ್ ಸೈಟ್’ ನಲ್ಲಿ ಬರೀತಾಬಂದಿದೀನಿ ನೀವೂ ಓದಿರ್ಬೋದು.
’ಪ್ರಿಯತಮೆ’ : 
ಏನ್ ಹೆಸ್ರು, ಎಲ್ಲೋ ನಿಮ್ಮ ಮುಖ ನೋಡಿದ್ ಗ್ಯಾಪ್ಕ ! 
ನಾನು ’ಕರ್ನಾಟಕ್ ಸಂಘದ್ ಕಾರ್ಯಕ್ರಮ’ಗಳ್ಗೆ, ತಪ್ದೆ ಬರ್ತಿದ್ದೆ. ಯಾವ್ದೋ ಕತೆ ಬರ್ದಿದ್ರಲ್ಲಪ್ಪಾ, ’ಸೀಕರ‍್ಣೆ ಕತೆ ಹೇಳಿ ಅಜ್ಜಿ,’ ಅಲ್ವಾ ? ಅದ್ ನನ್ಗೆ ತುಂಬಾ ಹಿಡಿಸ್ತು.
ವೆಂಕಟೇಶ್ :
ಈಗ ನೋಡಿ ಕಾಲ್ ನೋವು ಹೆಚ್ಚಾಗಿದೆ. ಬಸ್ ನಲ್ಲಿ ಹತ್ತೋದ್ ಕಷ್ಟ ಇಳ್ಯೋದ್ ತೊಂದ್ರೆ. ಇನ್ನೇನ್ ಲೋಕಲ್ ಟ್ರೇನ್ ವಿಚಾರ ಕೇಳ್ಬೇಡಿ. ’ಅದೇನ್ ನೂಕ್ತಾರ್ರಿ,’ ’ಇಳ್ಯೋವಾಗ್ಲಂತೂ ತುಂಬಾ ತೊಂದ್ರೆ’. 
ವೆಂಕಟೇಶ್ :
ಹೌದು. ನಾವ್ ಬಸ್ಸು ರೈಲ್ ನಲ್ಲಿ ಹೋಗ್ ಅದೆಷ್ಟೋ ತಿಂಗ್ಳೇ ಆಗಿವೆ.
’ಪ್ರಿಯತಮೆ’ : 
ಅಗೋ ಬಂದೃ ನೋಡಿ.
’ಪ್ರಿಯತಮ’ :
ಏನಿವ್ರೆ,  ಹೇಗಿದೀರಿ. ಮನೇಲೆಲ್ಲಾ ಸೌಖ್ಯನಾ ? 
ಹೌದು ಸಾರ್ ಎಲ್ಲಾ ಸೌಖ್ಯ ! ಏನ್ ಬಂದಿದ್ದು ಮತ್ತೆ ?
ವೆಂಕಟೇಶ್ :
ಅದೇ ಸಾರ್ ನಿಮ್ ಹುಟ್ ಹಬ್ಬ ಇವತ್ತು,  ೧೮ ನೇ ತಾರೀಕು ಅಂತ ಓದಿದ್ದೆ. ತಮ್ಗೆ ’ಹುಟ್ಟಿದಹಬ್ಬದ ಶುಭಾಷಯಗಳನ್ನು ಹೇಳಿಹೋಗೋಣಾ ಅಂತ ಬಂದಿದ್ದೆ. ಪ್ರಿಯತಮರ ಭೇಟಿ ಆಗ್ಲಿಲ್ಲ. "ಆದ್ರ‍ೇ ಆದದ್ದು ಅವರ ಪ್ರಿಯತಮೆಯವರ  ಭೆಟ್ಟಿ".!
’ಪ್ರಿಯತಮ’ : 
ಹೋ ಹೋ ಒಳ್ಳೇದ್ ಮಾಡಿದ್ರಿ. ಯಾವಾಗ್ಲೂ ಮನೇಲಿ ಇದೇ ವಿಚಾರದಲ್ಲಿ  ನಮ್ ಪರಿವಾರ್ದೋರ್ ಮಧ್ಯೆ ಭಿನ್ನಾಭಿಪ್ರಾಯ ಇದೆ. "ಹೀಗೇ ಏನೋ ಬರೀತೀನಪ್ಪ ; ನೀವೆಲ್ಲಾ ಒಳ್ಳೆಜನ ; ಮೆಚ್ಕೊಂಡಿದೀರಿ. ಒಂದ್ ಒಳ್ಳೇ ಮಾತಾಡ್ತೀರಿ, ಪತ್ರಿಕೇಲಿ  ಬರಿತೀರಿ. 
ಏನೂ ಇಲ್ದೇ,  ನಮ್ಮ ಮನೇ ತನ್ಕಾ ನೀವೆಲ್ ಬರ್ತಿದ್ರಿ. "ಹೌದೋ ಇಲ್ಲೋ ಹೇಳ್ರಿ ಮತ್ತ" ?
ಸರಿಯಾಗ್ ಹೇಳಿದ್ರಿ ಸಾರ್.
ವೆಂಕಟೇಶ್ :
"ಈಗ ನಾವ್ ಮಾತಾಡಿದ್ನ ಅಂದ್ರೆ, ಇವೇ ಒಂದೆರ್ಡ್ ಮಾತ್ನ ನಮ್ಮ ’ಸಂಪದ’ದಲ್ಲಿ ಬರಿಯೋಣ ಅಂತ ಇದೀನಿ.  ಬ್ಯಾಸರ ಇಲ್ಲೇನ್ರಿ".
’ಪ್ರಿಯತಮ’ :
"ಬರೀರಿ ನಾನೂ ಓದ್ತೀನಿ. ನಾನೂ ಇನ್ಮೇಲೆ ಇಂಟರ್ ನೆಟ್ ನಲ್ಲಿ ಬರ್ಯೋಣ ಅಂತಿದೀನಿ".
’ಪ್ರಿಯತಮೆ’ : 
ಸರಿಹೋಯ್ತು. ಅದೊಂದ್ ಬಾಕಿಇತ್ತು ನೋಡ್ರಿ.
ವೆಂಕಟೇಶ್ :
ಬರ್ತೀನ್ರಿ. ಅತ್ಗೆ (ವೈನಿಯವ್ರೆ) ಅವ್ರೆ, ನಮಸ್ಕಾರ. 
ನಿಮ್ಮ ಬಗ್ಗೆ ಈಗಾಗ್ಲೆ ವಿಕಿಪೀಡಿಯದಲ್ಲಿ ಬರ್ದಿದೀನಿ. ಈಗ್ ನೀವು ಪ್ರಕಟ್ಸೊ ೫ ಪುಸ್ತಕ ದ್ ಹೆಸೄ ಸೇರಿಸ್ತೀನಿ. 
ಸರಿ ನಾನಿನ್ನೂ ಓದಿಲ್ಲ.
ನನಿಗೆ ಅವ್ರ ಹೆಸೃ ಗೊತ್ತು. ಶೆಣೈ ಅಂತ. ಕಾವ್ಯನಾಮ ಪ್ರಿಯತಮ ಅಂತ ಇಟ್ಕೊಂಡಿದಾರೆ.
’ಪ್ರಿಯತಮ’ : 
ಕಟ್ಟಿ ಒಂದ್ ಲೇಖನ ಬರ್ದಿದೃ, ಅಲ್ಲಿ. ಅದನ್ನೇ ನಾನು ಎಡಿಟ್ ಮಾಡಿ ಅದ್ರಲ್ಲಿ ಇಳ್ಸಿದೀನಿ ಅಷ್ಟೆ. 
ಧನ್ಯವಾದಗಳು ವೆಂಕಟೇಶ್ ನೋರ್ಗೆ !
(೧೬ ವರ್ಷದಿಂದ ಪ್ರಕಟವಾಗುತ್ತಿರುವ ಕರ್ನಾಟಕ ಮಲ್ಲ ದೈನಂದಿಕದಲ್ಲಿ ’ಮುಖಾಂತರ,’ ಅಂಕಣ ಜನಪ್ರಿಯ ಉತ್ತಮ ಅಂಕಣಕಾರ, ಕಥೆಕಾರ, ಹಾಸ್ಯಲೇಖನಕಾರ.)
-ಇದೊಂದು ಕಾಲ್ಪನಿಕ ಸಂದರ್ಶನ. ಪ್ರಿಯತಮರ ಅನುಮತಿ ಕೋರಿ, ಹೇಗೋ ಧರ್ಯಮಾಡಿ, ಪ್ರಕಟಿಸುತ್ತಿದ್ದೇನೆ 
(೧೮-೧೨-೧೯೩೭)  ೭೭ ರ ಹರೆಯದ ಸಂಭ್ರಮ.

ವೆಂಕಟೇಶ್ :

ನಮಸ್ಕಾರ. ವೈನಿಯವರೆ, ನಾನು ಘಾಟ್ಕೊಪರ್ ನಿಂದ ಬಂದಿದೇನೆ. ’ಪ್ರಿಯತಮ’ ರನ್ನು ಭೆಟ್ಟಿಯಾಗ್ಬೇಕಿತ್ತು !     'ಒಕೆ. ನಾನ್ಯಾರು ಅಂತ ಮೊದ್ಲು ಹೇಳ್ಬಿಡ್ತೀನಿ,  ತಾಳಿ. ನಾನು ಯಾವ ’ಪತ್ರಿಕಾ ಪ್ರತಿನಿಧಿ’ಯೂ ಅಲ್ಲ ! ಪ್ರಿಯತಮರ ಪರಮಪ್ರಿಯರಲ್ಲೊಬ್ಬನು. ’ಓಹ್  ಸಾರಿ’ ’ನಿಮಗಿಂತ ಹೆಚ್ಚು ಅಲ್ಲವೇ ಅಲ್ಲ’. 'ನಿಮ್ಮಮುಂದೆ ನಾನು ಈ ಮಾತನ್ನು ಹೇಳಬಾರದಾಗಿತ್ತು'.


’ಪ್ರಿಯತಮೆ’ :

ನಮಸ್ಕಾರ.
'ಬಿಡಿ ಪರವಾಗಿಲ್ಲ. ಈತರಹದ ಮಾತ್ನ, ನಾನು ಸುಮಾರ್ ದಿನಗಳಿಂದಲೂ ಕೇಳ್ಸ್ಕೊಳ್ತಿದೀನಿ'. ಬರವಣಿಗೆ,  ಓದು, ಅಂದ್ರೆ ಸಾಕು. ಆಘೋಯ್ತು ನೋಡಿ,  ಒಮ್ಮೆಮ್ಮೆ ನಾನಿರೋದೂ ಅವರ್ಗೆ ಕಾಣ್ಸೊದಿಲ್ಲ.  ಹಿಂದಿ, ಮರಾಠಿ ಭಾಷೆಗಳ ಕಥೆಗಳ್ನ ಕನ್ನಡಕ್ಕೆ ತರ್ತಾರೆ.  ’ಮನುಕುಲ’ ಅನ್ನೋ ಪ್ರಕಾಶನ ಸಂಸ್ಥೆ ಹೆಸೃ ಕೇಳಿದಿರೇನೋ ! ಅದೊಂದು 'ತ್ರೈಮಾಸಿಕ ಪತ್ರಿಕೆ' ಅವರ್ದೆ. ಪತ್ರಿಕೆ  ಸರಿಯಾಗ್ ಓಡ್ದೆ ಕೈಸುಟ್ಕೊಂಡ್ರಪ್ಪ. ಆಮೇಲೆ ಅದೂ ಇದೂ ಅಂತಹೇಳಿ ಅದೇ ಪ್ರಕಾಶನದಿಂದ ೧೦-೧೫ ಕೃತಿಗಳ್ನ ಹೊರಕ್ ತಂದಿದಾರೆ. ನಮ್ ಮನೆ ಭಾಷೆ, ಕೊಂಕಣಿ '!


'೫೦ ವರ್ಷ್ದಿಂದ ಒಂದಲ್ಲ ಒಂದ್ ಬರೀತಾನೇ ಇದಾರಪ್ಪ. ಓಟ್ಟು ೧೬ ಕೃತಿಗಳು ಬೆಳಕಿಗೆ ಬಂದಿದೆ ಅಂತ್ ಕಾಣ್ಸತ್ತೆ. ನೋಡಿ, ೪ ಕಥಾ ಸಂಕಲನ, ೧೦ ಹಾಸ್ಯಕ್ ಸಂಬಂದ್ಸಿದ್ದು. ಮತ್ತೆ ಅದು ಇದು ಅಂತ ೨ ಇರ್ಬೋದು. ನಾವು ಸ್ವಲ್ಪ ರೆಷ್ಟ್ ತೊಗೊಳಿ, ಬೇಕಾದಷ್ಟ್ ಬರ್ದಿದ್ದಾಗಿದೆ. ಈ ವಯಸ್ ನಲ್ಲಿ ಯಾಕ್ ಇವೆಲ್ಲಾ , ನೀವ್ ಬರ್ದಿದ್ ಸಾಕು’ ಅಂದ್ರೆ ಕೇಳ್ಬೇಕಲ್ಲ. ಮನೇಲೂ ಅಷ್ಟೆ ಹಾಸ್ಯಾಂದ್ರೆ ಪ್ರಾಣ !ಅದೇ ಹೇಳಿದ್ನಲ್ಲ ನಿಮಗ್ ಗೊತ್ತಲ್ಲ. ಮಂಡ್ಯದಲ್ಲಿ ’ಅಡ್ವೈಸರ್’ ಅಂತ ಯಾವ್ದೋ ’ಪ್ರಕಾಶನದ ಸಂಸ್ಥೆ’ ಇದೆ. ಅವೃ ಯಾವಾಗ್ಲೂ ಫೋನ್ ಮಾಡ್ತಾನೇ ಇರ್ತಾರೆ.

'ಇವ್ರು ಬರ್ದಿರೋ ’ಅಂತರಂಗ-ಬಹಿರಂಗ’(ಕಥಾಸಂಕಲನ), ’ಹಿಕ್ಮತ್ತು’, ’ಕರಾಮತ್ತು’, ’ಮಲಾಮತ್ತು’ (ಹಾಸ್ಯ ಕಥೆಗಳ ಸಂಕಲನ) ಆಮೇಲೆ ’ತಾರಾಂಕಿತ’ ಅನ್ನೋ, ’ಪ್ರಿಯಾ ತೆಂದುಲ್ಕರ್’ ರವರ ’ಮಿನಿ ಕಾದಂಬರಿ’ಯ ಅನುವಾದ, ಮತ್ತು ಕೊನೆಯದಾಗಿ, ಪುಸ್ತಕ ಗಳ್ನ ಒಟ್ಟು ೫ ಪುಸ್ತಕ ಗಳು, ’ಕುಂದಾಪುರದ ಪುಸ್ತಕ ನಿಧಿ’ಯಿಂದ ’ಅಪರಾಧಿಕಥೆಗಳು’ ಮತ್ತು, ’ಅನುವಾದಿತ ಕಥೆಗಳು, ಪ್ರಕಟ್ಸಿದಾರೆ. ಇನ್ನೂ ಮೂರೋ, ನಾಕೋ, ಬುಕ್ಸ್ ಗಳ್ನ ಇನ್ನೂ  ಬರೀತಾನೇ ಇದಾರಪ್ಪ ನನಗೆ ಹೆಚ್ಗೆ ಗೊತ್ತಿಲ್ಲ. ಕೆಲ್ಸ ಇನ್ನೂ ಪೂರ್ತಿ ಮುಗ್ದಿಲ್ಲ'.


ವೆಂಕಟೇಶ್ :


'ನಾನು ಅವರ್ನ ’ಅಭಿನಂದ್ಸೋಣ ಅಂತ್ ಬಂದೆ’. 'ನಾನು ಅದೋ ಇದೋ ’ಸಂಪದ ಅನ್ನೋ ಕನ್ನಡದ್ ಸೈಟ್’ ನಲ್ಲಿ ಬರೀತಾಬಂದಿದೀನಿ ನೀವೂ ಓದಿರ್ಬೋದು'.


’ಪ್ರಿಯತಮೆ’ : 


'ಏನ್ ಹೆಸ್ರು, ಎಲ್ಲೋ ನಿಮ್ಮ ಮುಖ ನೋಡಿದ್ ಗ್ಯಾಪ್ಕ' ! 'ನಾನು ’ಕರ್ನಾಟಕ್ ಸಂಘದ್ ಕಾರ್ಯಕ್ರಮ’ಗಳ್ಗೆ, ತಪ್ದೆ ಬರ್ತಿದ್ದೆ.' ' ಯಾವ್ದೋ ಕತೆ ಬರ್ದಿದ್ರಲ್ಲಪ್ಪಾ', ’ಸೀಕರ‍್ಣೆ ಕತೆ ಹೇಳಿ ಅಜ್ಜಿ,’ ಅಲ್ವಾ ? 'ಅದ್ ನನ್ಗೆ ತುಂಬಾ ಹಿಡಿಸ್ತು.'


ವೆಂಕಟೇಶ್ :


'ಈಗ ನೋಡಿ ಕಾಲ್ ನೋವು ಹೆಚ್ಚಾಗಿದೆ. ಬಸ್ ನಲ್ಲಿ ಹತ್ತೋದ್ ಕಷ್ಟ ಇಳ್ಯೋದ್ ತೊಂದ್ರೆ. ಇನ್ನೇನ್ ಲೋಕಲ್ ಟ್ರೇನ್ ವಿಚಾರ ಕೇಳ್ಬೇಡಿ'. ’ಅದೇನ್ ನೂಕ್ತಾರ್ರಿ,’ ’ಇಳ್ಯೋವಾಗ್ಲಂತೂ ತುಂಬಾ ತೊಂದ್ರೆ’. 

’ಪ್ರಿಯತಮೆ’ :


'ಹೌದು. ನಾವ್ ಬಸ್ಸು ರೈಲ್ ನಲ್ಲಿ ಹೋಗ್ ಅದೆಷ್ಟೋ ತಿಂಗ್ಳೇ ಆಗಿವೆ.
ಅಗೋ ಬಂದೃ ನೋಡಿ'.


’ಪ್ರಿಯತಮ’ :


'ಏನಿವ್ರೆ,  ಹೇಗಿದೀರಿ. ಮನೇಲೆಲ್ಲಾ ಸೌಖ್ಯನಾ '?  'ಏನ್ ಬಂದಿದ್ದು ಮತ್ತೆ '?


ವೆಂಕಟೇಶ್ :

'ಹೌದು ಸಾರ್ ಎಲ್ಲಾ ಸೌಖ್ಯ' .'ಅದೇ ಸಾರ್ ನಿಮ್ ಹುಟ್ ಹಬ್ಬ ಇವತ್ತು, ೧೮ ನೇ ತಾರೀಕು ಅಂತ ಓದಿದ್ದೆ. ತಮ್ಗೆ ’ಹುಟ್ಟಿದಹಬ್ಬದ ಶುಭಾಷಯಗಳನ್ನು ಹೇಳಿಹೋಗೋಣಾ ಅಂತ ಬಂದಿದ್ದೆ'. ಪ್ರಿಯತಮರ ಭೇಟಿ ಆಗ್ಲಿಲ್ಲ. "ಆದ್ರ‍ೇ ಆದದ್ದು ಅವರ 'ಪ್ರಿಯತಮೆ' ಯವರ  ಭೆಟ್ಟಿ"!


’ಪ್ರಿಯತಮ’ : 


'ಹೋ ಹೋ ಒಳ್ಳೇದ್ ಮಾಡಿದ್ರಿ.'  'ಯಾವಾಗ್ಲೂ ಮನೇಲಿ ಇದೇ ವಿಚಾರದಲ್ಲಿ  ನಮ್ ಪರಿವಾರ್ದೋರ್ ಮಧ್ಯೆ ಭಿನ್ನಾಭಿಪ್ರಾಯ ಇದೆ'. "ಹೀಗೇ ಏನೋ ಬರೀತೀನಪ್ಪ ; ನೀವೆಲ್ಲಾ ಒಳ್ಳೆಜನ ; ಮೆಚ್ಕೊಂಡಿದೀರಿ. ಒಂದ್ ಒಳ್ಳೇ ಮಾತಾಡ್ತೀರಿ, ಪತ್ರಿಕೇಲಿ  ಬರಿತೀರಿ. 'ಏನೂ ಇಲ್ದೇ, ನಮ್ಮ ಮನೇ ತನ್ಕಾ ನೀವೆಲ್ ಬರ್ತಿದ್ರಿ'. "ಹೌದೋ ಇಲ್ಲೋ ಹೇಳ್ರಿ ಮತ್ತ" ?

ವೆಂಕಟೇಶ್ :


ಸರಿಯಾಗ್ ಹೇಳಿದ್ರಿ ಸಾರ್.

"ಈಗ ನಾವ್ ಮಾತಾಡಿದ್ನ ಅಂದ್ರೆ, ಇವೇ ಒಂದೆರ್ಡ್ ಮಾತ್ನ ನಮ್ಮ ’ಸಂಪದ’ದಲ್ಲಿ ಬರಿಯೋಣ ಅಂತ ಇದೀನಿ.  ಬ್ಯಾಸರ ಇಲ್ಲೇನ್ರಿ".


’ಪ್ರಿಯತಮ’ :


"ಬರೀರಿ ನಾನೂ ಓದ್ತೀನಿ. ನಾನೂ ಇನ್ಮೇಲೆ ಇಂಟರ್ ನೆಟ್ ನಲ್ಲಿ ಬರ್ಯೋಣ ಅಂತಿದೀನಿ".


’ಪ್ರಿಯತಮೆ’ : 


ಸರಿಹೋಯ್ತು. ಅದೊಂದ್ ಬಾಕಿಇತ್ತು ನೋಡ್ರಿ.


ವೆಂಕಟೇಶ್ :


ಬರ್ತೀನ್ರಿ. ಅತ್ಗೆ (ವೈನಿಯವ್ರೆ) ಅವ್ರೆ, ನಮಸ್ಕಾರ. ಸರ್, ನಿಮ್ಮ ಬಗ್ಗೆ ಈಗಾಗ್ಲೆ 'ವಿಕಿಪೀಡಿಯ' ದಲ್ಲಿ ಬರ್ದಿದೀನಿ. ಈಗ್ ನೀವು ಪ್ರಕಟ್ಸೊ ೫ ಪುಸ್ತಕ ದ್ ಹೆಸೄ ಸೇರಿಸ್ತೀನಿ. 

’ಪ್ರಿಯತಮ’ : 

ಸರಿ ನಾನಿನ್ನೂ ಓದಿಲ್ಲ.
ಕರ್ನಾಟಕ ಸಂಘದಿಂದ 'ನಮ್ಮ ಶ್ರೀನಿವಾಸ ಜೋಕಟ್ಟೆ', ಒಂದ್ ಲೇಖನ ಬರ್ದಿದೃ,  'ಧನ್ಯವಾದಗಳು ವೆಂಕಟೇಶ್ ನೋರ್ಗೆ' !


(೧೬ ವರ್ಷದಿಂದ ಪ್ರಕಟವಾಗುತ್ತಿರುವ, 'ಕರ್ನಾಟಕ ಮಲ್ಲ ದೈನಂದಿಕ' ದಲ್ಲಿ ’ಮುಖಾಂತರ,’ ಅಂಕಣವನ್ನು 'ಪ್ರಿಯತಮ' ಬರೆದುಕೊಂಡು ಬಂದಿದ್ದಾರೆ.  ಜನಪ್ರಿಯ ಉತ್ತಮ ಅಂಕಣಕಾರ, ಕಥೆಕಾರ, ಹಾಸ್ಯಲೇಖನಕಾರ.ಅವ್ರ ಹೆಸೃ ಗೊತ್ತು. ’ಅಲೆವೂರ್ ಹರಿದಾಸ  ಶೆಣೈ' ಅಂತ. ಕಾವ್ಯನಾಮ 'ಪ್ರಿಯತಮ' ಅಂತ ಇಟ್ಕೊಂಡಿದಾರೆ. )


-ಇದೊಂದು 'ಕಾಲ್ಪನಿಕ ಸಂದರ್ಶನ'. 'ಪ್ರಿಯತಮ'ರ ಅನುಮತಿ ಕೋರಿ, ಹೇಗೋ ಧರ್ಯಮಾಡಿ, ಪ್ರಕಟಿಸುತ್ತಿದ್ದೇನೆ.

 
(೧೮-೧೨-೧೯೩೭), ’ಪ್ರಿಯತಮ ’ರ ೭೭ ರ ಹರೆಯದ ”ಹುಟ್ಟುಹಬ್ಬದ ಸಂಭ್ರಮ’ ದ ದಿನದಂದು, ಪ್ರಕಟಿಸಿದ್ದು.)