ಹಾಳು ಹರಟೆ

ಹಾಳು ಹರಟೆ

ಕವನ

ಸಮಯವ ಕಳೆಯಲು ಹಾಳು ಹರಟೆ

ಸತ್ಫಲವಿಲ್ಲದೇ ಬರೀ ಕಾಡು ಹರಟೆ

 

ಗಡಿಯಿಲ್ಲದ ಗಡಿಯಾರ ಸುತ್ತುವಂತೆ

ಸಾಗುತ್ತದೆ ಮಾತುಗಳ ಅಂತೆ- ಕಂತೆ

 

ಭತ್ತದ ತೌಡನ್ನು ಒನಕೆಯಿಂದ ಕುಟ್ಟುವಂತೆ

ಉದರದುರಿಯ ಮಾತನ್ನು ಕಕ್ಕುವರಂತೆ

 

ಗಾಳಿಯಲ್ಲಿ ತೇಲುವ ವ್ಯರ್ಥವಾದ ಸಮಯ

ಅಪಥ್ಯ ಮಾತಿಗಲ್ಲಿ ಇರಲಿಲ್ಲ ಯಾವ ನಿಯಮ.

***

ಬಾಳು ಬೆಳಗು

ಅರಿತರೇ ಜೀವನದ ಸಾರ

ಬದುಕಾಗದು ಎಂದೂ ಭಾರ

 

ಬದುಕಿಹುದು ಮೂರ್ದಿನದ ಸಂತೆ

ಅರಿತವರಿಗಿಲ್ಲ ಎಂದು ಚಿಂತೆ...

 

ಬೊಮ್ಮನ ಮಹಾ ವಿಧಿಯಾಟದಲ್ಲಿ

ಪಾತ್ರ, ಪಾತ್ರವು ಅವನ ಸೂತ್ರದಲಿ

 

ಅರಿವಿರಲಿ ಜೀವನವಿದು ಬಂಗಾರ

ಮಾಡಿ ಕೊಳ್ಳೊಣ ಬಾಳು ಸಿಂಗಾರ.

 

-ವೀಣಾ ಕೃಷ್ಣಮೂರ್ತಿ, ದಾವಣಗೆರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ

 

ಚಿತ್ರ್