ಹಾ. ಮ. ಸತೀಶರ ಶಾಯರಿಗಳ ಲೋಕ
ಶಾಯಿರಿ- ೧
ಮತ್ತೆ ಮಳೆ ಬಕ್ಕೂ ಹೇಳಿ
ಎನ್ನ ಹತ್ತರೆ ಬರೆಡ ಕೂಸೆ
ಕಾರಣವೂ ಇಲ್ಲದಿಲ್ಲೆ !
ಆನಿಗಾಗಲೇ ಮದುವೆಯಾಗಿ
ನಾಲ್ಕು ಮಕ್ಕಳ ಅಪ್ಪ
ಹಾಂಗೆ ಕೈಯ ಹಿಡಿದಿಲ್ಲೆ !!
*
ಶಾಯರಿ-೨
ಮುಸುಡು ತಿರುಗಿಸ್ಯೊಂಡು ಇಪ್ಪಲೂ
ಒಂದು ಹೊತ್ತು ಗೊತ್ತು ಗತ್ತು
ಇದ್ದಲ್ಲದಾ ಕೂಸೆ !
ಹಸೆ ಮಣೆಲಿ ಕೂಬಾಗಲಾದರೂ
ಕೋಪ ಮಾಡ್ಯೊಂಬಲಾಗ ಆತಾ ?
ನೋಡಲೆ ಮುದ್ದಾಗಿದ್ದೆ ಕೂಸೆ !!
*
ಶಾಯರಿ-೩
ಕೆಲವು ಜನ ಹೀಂಗೆಯೇ
ಹೇಂಗೆ ಹೇಳಿರೆ
ಲಸಿಕೆ ಹಾಕ್ಸ್ಯೊಂಬಲೆ ಪ್ರಾಯ ಆಯಿದಡ !
ಆದರೆ ? ರಾಜ್ಯಸಭೆಯ ಕುರ್ಚಿಲಿ ಕೂಬಲೆ
ಪ್ರಾಯ ಆಯಿದೇ ಇಲ್ಲೆ
ಇನ್ನೂ ಆ ವಿಷಯಲ್ಲಿ ಜವ್ವನಿಗರಡ !!
*
ಶಾಯರಿ-೪
ದೂರ ಅಪ್ಪವರ ಒಟ್ಟಿಂಗೆ
ಒಂಟಿಯಾಗಿ ಹೋಗೆಡಿ
ಸುಮ್ಮನೆ ದಾರಿಯ ದೂಳು ಹಾರ್ಸ್ಯೊಂಡು ಹೋವ್ತವು !
ಮಾತಿಲ್ಲೆ ಕತೆಯಿಲ್ಲೆ, ಎಂತಗೆ ? ವ್ಯಥೆ ಸುಮ್ಮನೆ ! ಅದರ ಬದಲು
ಮನೆಯ ಮೂಲೆಲಿ ಚಾಪೆ ಹಾಕ್ಯೊಂಡು ಮನುಗುವುದು ಒಳ್ಳೆಯದು
ಕಾರಣ ? ಹೋಪವು ಇಂದಲ್ಲ ನಾಳೆ ಬಿಟ್ಟಿಕ್ಕಿ ಹೋಗೇ ಹೋವ್ತವು !!
*
ಶಾಯರಿ-೫
ಗುಲಾಬಿ ಗಿಡಕ್ಕೂ ಕೂಸಿಂಗೂ,
ಹತ್ತರೆಯ ಸಂಬಂಧ ಇದ್ದು
ಹೂವಿನ ಎಸಳಿನ ಹಾಂಗೇ ಹೆರ ಮನಸ್ಸು !
ಮೃದುವಾಗಿದ್ದರೂ ಹಲವರಲ್ಲಿ
ಮುಳ್ಳಿನಾಂಗಿಪ್ಪ ವರ್ತನೆ
ಕಾಂಬಲೆ ಒಳ ಮನಸ್ಸು !!
*
ಶಾಯರಿ-೬
ಎನ್ನ ಹೃದಯದ ಒಳ
ನೀನು ಸೇರಿದ್ದೆ ಅಂದು ,
ಎನಗೆ ಗೊಂತಾತು ಕೂಸೆ !
ಅದಕ್ಕೇಳಿ ಕಾಣ್ತು ? ಈಗೀಗ
ಉದಿ ಅಯೆಕ್ಕಾರೇ ನೀ ಬಂದೇ ಹೇಳಿ
ಹೆದರಿಕೆಲಿ ಜೋರಿಲಿ ಬಡುಕೊಳ್ತು ಕೂಸೆ !!
-ಹಾ ಮ ಸತೀಶ, ಬೆಂಗಳೂರು
