ಹೀಗೊಂದು ಕಥೆ
ಬರಹ
ಹೀಗೊಂದು ಕಥೆ
ಕೇಳುವ ಮುನ್ನ ಒಂದು ಅರಿಕೆ
ಕೇಳಿದ ಮೇಲೆ ಬೇಡ ಬೇಸರಿಕೆ
ವಿವಾಹೊತ್ಸವಡಿ ನಡೆದ ನೈಜ ಘಟನೆ
ಅಲ್ಲಿಲ್ಲ ಯಾವ ಯಾರ ನಟನೆ
ಸಿಂಗರಿಸಿದ ಮಂಟಪ
ಸಾವಿರಾರು ಜನ ಮದು ಮಗ
ನವವಧು ರೇಷ್ಮೆ ಓಡಾಟ
ಅದ್ಯಾವುದು ಬೇಕಿಲ್ಲ
ಕಣ್ಸೆಳೆದದ್ದು ಒಂದೇ
ಅದು ವಸ್ತುವಲ್ಲ
ವಾಸ್ತವ ಚೆಲುವು
ಕಂಡಾಗಲೇ ಹುಟ್ಟಿತೆ ಒಲವು
ಹತ್ತು ಜನರ ನಡುವೆ ಮನಸೆಳೆವ ನಿಲುವು
ಮಾತಿಲ್ಲ ಬರಿಯ ನಗು
ಮುಗ್ಧ ಮಧುರ ನಗು ತಿಂಗಳ ಕಂಗಳ ಚೆಲುವು
ತಿಳಿಹಸಿರ ಧಿರಿಸು
ಅದಕೊಪ್ಪುವ ಕೈಬಳೆಯ ಹೊಳಪು
ಕಾಲ್ಗೆಜ್ಜೆಯ ಮಿದು ನಾದ
(ನನಗಂತೂ ಅದೇ ವೇದ)
ತುಟಿಗೊಪ್ಪುವ ಕಿರು ಲಜ್ಜೆ
ನಿಜದಿ ಇವಳು ಮೆನಕಾತ್ಮಜೆ
ಮುಂದೆ-----
ಮುಂದೇನು ?
ನಾ ಅವಳ ಹಿಂದೆ ಅವಳು ನನ್ನ ಮುಂದೆ
ಮತ್ತೆ-----------
ಮತ್ತೇನು ?
ಬಂದಳು ನನ್ನೆದುರಲ್ಲಿ
ನಿಂತಳು ನನ್ನೆದೆಯಲ್ಲಿ
ಸಿಕ್ಕಳೆ?-------
ತಾಳು ಏಕೀ ಆತುರ
ಕಥೆ ಅತಿ ಮಧುರ
ನಿನಗಾಗಿಯೇ ನಾನು
ನನಗಾಗಿಯೇ ನೀನು ಎಂದೆ .
ಬಾ ಎನ್ನರಸಿ
ಬಾ ನನ್ನ ಪ್ರೀತಿಸೆಂದೆ
ನಿಜದಿ ಕೈಗೆ ಸಿಕ್ಕಳು
ನನ್ನಕ್ಕ ಪುಟ್ಟ ಮಗಳು