ಹೀಗೊಂದು ಗಝಲ್

ಹೀಗೊಂದು ಗಝಲ್

ಕವನ

ಬೆತ್ತಲೆ ದೇಹಗಳ ನಡುವೆಯೇ ಹಾಳಾದವರು ಹಲವರು

ಸುತ್ತಲೂ ಹೇಸಿಗೆಯ ಮೆಟ್ಟಿಲುಗಳ ತುಳಿದವರು ಹಲವರು

 

ಜಾತಿ ಮತ ಅಂತಸ್ತುಗಳು ಯಾವತ್ತಿಗೆ ಸಾಯುವುದೋ ಇಲ್ಲಿ

ನಾರಿಯರ ಮಾನವನ್ನು ಹರಾಜು ಹಾಕಿದವರು ಹಲವರು

 

ಹಿಂಸೆಯೊಂದೇ ಈ ನೆಲದೊಳಗೆ ಶಾಶ್ವತ ಮಿತ್ರನಾಯಿತೇ ಹೇಗೆ

ಮಹಾತ್ಮನ ಅಹಿಂಸೆಯ ತತ್ವಗಳನ್ನೇ ಜರೆದವರು ಹಲವರು

 

ಯುದ್ಧಗಳ ನಡುವೆಯೇ ಕೋಮಲೆಯರ ಹೀಗೆಯೇ ಸುಡುವುದೆ 

ದೇಹಗಳ ಮೃದುವಾದ ಭಾವನೆಗಳ ಮುಕ್ಕಿದವರು ಹಲವರು

 

ದೇವತೆಗಳ ದೇಶದಲಿ ದೆವ್ವಗಳು ಸೋಲದೆ ತಿರುಗುತ್ತಿವೆ ಈಶಾ

ಕೂಗಿನ ಎಡೆಯಲ್ಲಿಯೆ ಅಳುವನ್ನು ನೋಡದವರು ಹಲವರು

 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್