ಹೀಗೊಂದು ಬಿಟ್ಟಿ ಕೂಳಿನ ಪ್ರಸಂಗ

ಹೀಗೊಂದು ಬಿಟ್ಟಿ ಕೂಳಿನ ಪ್ರಸಂಗ

ಬರಹ

ಎರಡು ವರುಷಗಳಿಂದ, ನಾವು ಬಾಡಿಗೆಗಿರುವ ಮನೆಯ ಮಾಲಿಕನ 6 ವರುಷದ ಮಗಳು ಸತತವಾಗಿ ಮನೆಯ ಪಕ್ಕದಲ್ಲೇ ಇರುವ ಮದುವೆ ಛತ್ರಕ್ಕೆ ಸರಿಯಾಗಿ ಊಟದ ವೇಳೆಗೆ ಭೇಟಿ ನೀಡುತ್ತಿದ್ದುದು, ಅವಳು ಸುಂದರವಾಗಿ ಅಲಂಕರಿಸಿಕೊಂಡು ನಮಗೆ ತಿಳಿಯದಂತೆ ಕಳ್ಳ ಬೆಕ್ಕಿನ ಹಾಗೆ ಮೆಲ್ಲಗೆ ಹೆಜ್ಜೆ ಹಾಕುತಿದ್ದುದು ನಿಜಕ್ಕೂ ಸಖತ್ ಮಜ ನೀಡುತ್ತಿತ್ತು. ಕಾಲೇಜಿನ ಪ್ರಾಧ್ಯಪಕರ, ಅನುಕೂಲಸ್ಥ ಮನೆತನದ ಮಗಳೊಬ್ಬಳು ಈ ರೀತಿ ಜಾತಕ ಪಕ್ಷಿಯ ಹಾಗೆ ಬಿಟ್ಟಿ ಕೂಳಿಗೆ ಹಾತೊರೆಯುವುದು ನಿಜಕ್ಕೂ ನಾಚೀಕೆಗೇಡು. ಇದನ್ನೆಲ್ಲ ಗಮನಿಸುತ್ತಿದ್ದ ನಮ್ಮ ಮನೆಯವರು, ಹೇಗಾದರು ಮಾಡಿ ನಮಗೆ ವಿಷಯ ತಿಳಿದಿದೆಯೆಂದು ಗೊತ್ತುಪಡಿಸಲೋಸುಗ, ರಾತ್ರಿ ಎಂಟು ಗಂಟೆಗೆ ಮನೆಯ ಮುಂದಿನ ಅಂಗಳದ ದೀಪ ಹಾಕಿ, ಅಲ್ಲೇ ಎಲ್ಲರು ಹರಟೆ ಹೊಡೆಯುತ್ತ ಕುಳಿತುಕೊಳ್ಳುವ ಪ್ಲಾನ್ ಮಾಡಿದರು, ಹಾಗೇಯೆ, ನಾವೆಲ್ಲಾ ಆ ಹುಡುಗಿಯ ದಾರಿ ಕಾಯುತ್ತ ಕುಳಿತೆವು. 7.30ಕ್ಕೆ ದಿಬ್ಬಣ ಬಂತು, ಗಂಡಿನ ಮೆರವಣಿಗೆ ಛತ್ರದ ಒಳಗೆ ನೆಂಟರಿಷ್ಟರೊಂದಿಗೆ ದಾಂಗುಡಿ ಇಟ್ಟಾಯಿತು. ಹೆಣ್ಣಿನ ಕಡೆಯವರು ಧಾವಂತದಲ್ಲಿ ವರನ ಕಡೆಯವರಿಗೆ ಕುಡಿಯಲು ಜ್ಯೂಸ್ ಕೊಟ್ಟಾಯಿತು. ಇದನ್ನೆಲ್ಲಾ ಮಹಡಿ ಮನೆಯಿಂದ ಆ ಹುಡುಗಿ ಗಮನಿಸರಬೇಕು. ಇನ್ನೇನೂ ಊಟ ಪ್ರಾರಂಭವಾಗುತ್ತದೆ ಅನ್ನೋ ಸೂಚನೆ ದೊರೆತೊಡನೆ, ಹೊರಡಲುನುವಾದ ಹುಡುಗಿಗೆ ಪಾಪ, ಕೆಳಗೆ ನಾವು ಪೋಲಿಸರಂತೆ ಹೊಂಚು ಹಾಕಿ ಕುಳಿತಿರುವುದರ ಬಗ್ಗೆ ಲವ-ಲೇಷವೂ ತಿಳಿದಿರಲಿಕ್ಕಿಲ್ಲ. ಗಂಡಿನ ಕಡೆಯವರ ಹಾಗೆ ಠಾಕು ಠೀಕಾಗಿ ಮೆಟ್ಟಿಲುಗಳ ಮೇಲೆ ಮೆಲ್ಲಗೆ ಹೆಜ್ಜೆ ಹಾಕಿ, ಕೆಳಗೆ ಇಣುಕಿದಳು. ನಮ್ಮ ಮನೆಯ ಅಂಗಳದ ದೀಪ ಉರಿಯುತ್ತಿರುವುದನ್ನು ಕಂಡು, ಅಲ್ಲೇ ಕೆಲ ಕ್ಷಣ ನಿಂತಳು. ನಾವು ಆ ರಾತ್ರಿ 10 ಗಂಟೆಯವರೆಗೆ ಹೊರಗೆ ಕುಳಿತ್ತಿದ್ದೆವು. ಆಕೆ ಮಾತ್ರ ಕೆಳಗೆ ಇಳಿಯಲೇ ಇಲ್ಲ. ನಮ್ಮ ಮನೆಯವರು, ಏನೋ ಸಾಧೀಸಿದ ಹಾಗೆ, ಬೀಗುತ್ತಿದ್ದರು. ಇನ್ನೆನೂ ಆ ಹುಡುಗಿಗೆ ಮನೆಯ ಊಟವೇ ಗತಿ ಎಂದು ಕುಹಕವಾಡಿಕೊಂಡು ನಾವಿಲ್ಲರೂ ಮನೆಯ ಒಳಗೆ ಹೊರೆಟಿವು. 5 ನಿಮಿಷಗಳ ನಂತರ, ಗೇಟಿನ ಸದ್ದಿಗೆ, ಹೊರಗೋಡಿ ನೋಡಿದರೆ ಆ ಹುಡುಗಿ ಓಡಿ ಹೋಗುತ್ತಿದ್ದು ಕಂಡು ಬಂತು. ಕೊನೆಗೂ ಬಿಟ್ಟಿ ಕೂಳಿನ ಖಯಾಲಿ, ಬಾಯಿ ಚಪಲವೇ ಗೆದ್ದಿತು.

ಮನೆಯ ಆಸುಪಾಸಿನಲ್ಲಿ, ಯಾವುದೇ ಸಮಾರಂಭಗಳಲ್ಲಿ, ಊಟದ ವ್ಯವಸ್ಥೆಯಿದ್ದರು, ಈ ಹುಡುಗಿಯ ಹಾಜರಿ ತಪ್ಪುತ್ತಿರಲಿಲ್ಲ.

ಇತ್ತೀಚೆಗೆ, ಒಂದು ಸಮಾರಂಭ ನಡೆಯಿತು, ಒಂದು ಪಂಗಡದವರು ಅವರ ಜಾತೀಯವರಿಗೆ ಕಮಿಟಿ ಒತಿಯಿಂದ ಕೂಟವೊಂದನ್ನು ಆಯೋಜಿಸಿದ್ದರು, ಅಲ್ಲಿ ಊಟದ ವ್ಯವಸ್ಥೆಯಿತ್ತು. ಎಂದಿನಂತೆ ಆ ಹುಡುಗಿ ಹೊರಟು ನಿಂತಳು. ಈಗೆಲ್ಲಾ ನಾವು ನೋಡುತ್ತೇವೆಂಬ ಬಯವಿಲ್ಲ. ರಾಜರೋಷವಾಗಿ ನಮ್ಮ ಮುಂದೇಯೆ ಹೊರಟಿದ್ದಾಯಿತು. ಆದರೆ, ಪಾಪ ತಟ್ಟೆಯಿಲ್ಲ ಎಂದು, ವಾಪಸು ಬಂದು ತಟ್ಟೆ ತೆಗೆದು ಕೊಂಡು ಹೋದಳು, ಅಷ್ಟೊತ್ತಿಗೆ ಊಟ ಖಾಲಿ. ಹಲ್ಲಿ ಲೊಚುಗುಟ್ಟುವ ಹಾಗೇ ಲೊಚುಗುಟ್ಟುತ್ತ ಹ್ಯಾಪ್ ಮೊರೆ ಹಾಕಿಕೊಂಡು ಹಿಂದಿರುಗಿದಳು. ಇದನ್ನೆಲ್ಲಾ ನೋಡುತ್ತಿದ್ದ ನಾವು ಹೀಗೂ, ಉಳ್ಳವರು ತಮ್ಮ ಮಕ್ಕಳನ್ನು ಬಿಟ್ಟಿ ಊಟಕ್ಕೆ ಕಳುಹಿಸಿ ಉಳಿಸುವುದುಂಟ ಅಂದುಕೊಂಡೆವು.

--- ಕವಿತ ಪ್ರಶಾಂತ ----