ಹೀಗೊಮ್ಮೆ ನಕ್ಕು ಬಿಡು ಗೆಳತಿ
ಬರಹ
ಹೀಗೊಮ್ಮೆ ನಕ್ಕು ಬಿಡು ಗೆಳತಿ
ಭಾವ ರಹಿತ ಬದುಕಿನಲಿ
ಭಾವ ಗಂಗೆ ಹರಿದು ಬರಲಿ
ಆಶಾ ಸೌಧವೆ ತೇಲಿ ಬರಲಿ
ಹೀಗೊಮ್ಮೆ ನಕ್ಕು ಬಿಡು ಗೆಳತಿ
ನಿನ್ನ ನಗು ಚಂದ್ರಿಕೆಯಲಿ
ಸ್ನೇಹ ಗಂಗೆ ಹರಿದು ಬರಲಿ
ನನ್ನ ನೋವು ಇಲ್ಲವಾಗಲಿ
ಹೀಗೊಮ್ಮೆ ನಕ್ಕು ಬಿಡು ಗೆಳತಿ
ಬರಡಾದ ಎದೆಗೊಳದಿ
ಪ್ರೇಮ ಗಂಗೆ ಹರಿದು ಬರಲಿ
ಪ್ರೀತಿ ಪಲ್ಲವ ತಾ ಚಿಗುರಲಿ
ಹೀಗೊಮ್ಮೆ ನಕ್ಕು ಬಿಡು ಗೆಳತಿ
ನಿನ್ನ ನಗು ಹೂವಿನಲಿ
ಜೀವದಮೃತ ತಾ ಪುಟಿಯಲಿ
ಜೀವ ಜೀವನವ ಪ್ರೀತಿಸಲಿ
ಹೀಗೊಮ್ಮೆ ನಕ್ಕು ಬಿಡು ಗೆಳತಿ
ನಿನ್ನ ನಗು ಸೋನೆಯಲಿ
ನನ್ನ ಮಾತೆಲ್ಲಾ ತೋಯಲಿ
ತೊಯ್ದ ಮಾತು ಕವಿತೆಯಾಗಲಿ
ಹೀಗೊಮ್ಮೆ ನಕ್ಕು ಬಿಡು ಗೆಳತಿ
ನಿನ್ನ ನಗೆ ಗಂಗೊತ್ರಿಯಲಿ
ಈ ಜೀವ ಮಿಂದು ಪಾವನವಾಗಲಿ
ಮತ್ತು ಶುಭ್ರ, ನಿರ್ಮಲವಾಗಲಿ