'ಹುಚ್ಚು ಮುಂಡೆ ಮದುವೆಯಲ್ಲಿ ಉಂಡವನೇ ಜಾಣ '

'ಹುಚ್ಚು ಮುಂಡೆ ಮದುವೆಯಲ್ಲಿ ಉಂಡವನೇ ಜಾಣ '

ಬರಹ

ಕಡೆಯ ನಿಲ್ದಾಣಕ್ಕಿಂತ ಹಿಂದಿನ ಸ್ಟಾಪ್ನಲ್ಲಿ ಬಸ್ಸಿಗಾಗಿ ಬಹಳ ಹೊತ್ತಿನಿಂದ ನಿಂತಿದ್ದೆ. ದೂರದಲ್ಲೊಂದು ವೋಲ್ವೋ ಬಸ್ ಕಾಣಿಸಿಕೊಂಡಿತು. ತಡವಾಗುತ್ತಿರುವುದರಿಂದ ಬೇಗ ಹೋಗೇಬಿಡೋಣ ಎಂದುಕೊಳ್ಳುತ್ತಾ ಇತರ ಕೆಲವರೊಂದಿಗೆ ನಾನೂ ಕೈ ತೋರಿಸಿದೆ. ಬಸ್ಸಿನಲ್ಲಿದ್ದವರು ಬೆರಳೆಣಿಕೆಯಷ್ಟು ಮಂದಿ ಮಾತ್ರ. ಬಸ್ ರೊಂಯ್ಯನೆ ಸಾಗಿ ಹೋದದ್ದನ್ನು ನೋಡಿದ ನನ್ನ ಜೊತೆಯಲ್ಲಿದ್ದವರು "ಒಂದು ರುಪಾಯಿ ವ್ಯಾಪಾರ ಮಾಡಿ ಇವರಿಗೆ ಸಾಕಾಗಿ ಹೋಗಿದೆ ಅನ್ಸುತ್ತೆ " ಎಂದರು.
ಈ ಒಂದು ರುಪಾಯಿ ವ್ಯಾಪಾರದ ಬಗ್ಗೆ ಯೋಚಿಸುತ್ತಾ ಕೆಲವು ಪ್ರಶ್ನೆಗಳು ಮನಸ್ಸಿನಲ್ಲಿ ಮೂಡಿದವು.
ಈ ಒಂದು ರುಪಾಯಿ ವ್ಯಾಪಾರ ಯಾವ ಮಹಾಶಯನ ತಲೆಯಲ್ಲಿ ಉದಯಿಸಿತು ?
ಇದರಿಂದ ಯಾರಿಗೆ ಲಾಭ ?
'ಹುಚ್ಚು ಮುಂಡೆ ಮದುವೆಯಲ್ಲಿ ಉಂಡವನೇ ಜಾಣ 'ಎನ್ನುವಂತೆ ತಿರುಗಾಡಿದ ಜನಕ್ಕೆ ಏನೆನ್ನಬೇಕು ?
ಇದರಿಂದ ಸಾರಿಗೆ ಸಂಸ್ಥೆಗಾದ ನಸ್ಟ ಯಾರ ತಲೆಗೆ ಬರುತ್ತೆ ?
ಈ ಯೋಜನೆಗೆ ಅತ್ಯುತ್ತಮ ಪ್ರತಿಕ್ರಿಯೆ ಲಭ್ಯವಾಗಿದೆ ಎಂದಿರುವ ಬಿಂಎಂಟಿಸಿ ಮುಖ್ಯ ಸಂಚಾರ ವ್ಯವಸ್ಥಾಪಕರು ಈ "ಅದ್ಭುತವಾದ " ಯೋಜನೆಯನ್ನು ಮುಂದುವರೆಸುವರೆ ?
ಮುಖ್ಯಮಂತ್ರಿಗಳ ಹೆಸರಿನಲ್ಲಿ ದೇವಾಲಯಗಳಲ್ಲಿ ಪ್ರತಿದಿನ ಅರ್ಚನೆ , ಅಕ್ಕಾ ಯಾತ್ರೆಗೆ ಶಾಸಕರ ಅಮೆರಿಕ ದಂಡಯಾತ್ರೆಯ ರೀತಿ ಇದು ಸಹ ಹೊಸ ಸರ್ಕಾರಕ್ಕೆ ಕುಖ್ಯಾತಿ ತಂದುಕೊಡುವುದರಲ್ಲಿ ಸಂದೇಹವಿಲ್ಲ.
ಬೊಕ್ಕಸ ಬರಿದಾಗಿದೆ ಎನ್ನುವ ಸುದ್ದಿಗಳಿಗೆ ಪ್ರತಿಯಾಗಿ "ಸಾಲವನ್ನಾದರೂ ಮಾಡಿ ರಾಜ್ಯದ ಪ್ರಗತಿ ಮುಂದುವರೆಸುತ್ತೇವೆ "ಎನ್ನುತ್ತಿರುವ ಮುಖ್ಯಮಂತ್ರಿಗಳು ಈ ವಿಷಯಗಳ ಬಗ್ಗೆ ಸ್ವಲ್ಪ ಗಮನ ಹರಿಸುವರೆ ?