ಹುಡುಗರ ಮನಸ್ಸು ತುಂಬಾ ಮ್ರದು????

ಹುಡುಗರ ಮನಸ್ಸು ತುಂಬಾ ಮ್ರದು????

Comments

ಬರಹ

ಹೌದು ಸರಿಯಾಗಿ ಓದಿದಿರಾ ಹುಡುಗರ ಮನಸ್ಸು ತುಂಬಾ ಮ್ರದು..!!!ಹೊರಗಡೆ ಇಂದ ತುಂಬಾ ಗಟ್ಟಿ ಅಂತ ಎಲ್ಲರಿಗು ಅನಿಸಿದರು ಅದು ಒಳಗಡೆ ಇಂದ ಎಷ್ಟು ಮುಗ್ಧ ಮಗುವಿನ ಹಾಗೆ ಇರುತ್ತೆ ಅಂತ ಕೇವಲ ಹುಡುಗರ ಮನಸ್ಸನ್ನ ನಿಜಾವಗಿಯು ಅರ್ಥ ಮಾಡಿಕೊಂಡವರಿಗೆ ಮಾತ್ರ ಗೊತ್ತು..

ಇಲ್ಲಿ ನಾನು ಹುಡುಗರು ಮೋಸ ಮಾಡ್ತಾರೆ ಅಥವಾ ಹುಡುಗರು ಜೀವನದಲ್ಲಿ ಕೇವಲ ಮನಸ್ಸೋ ಇಚ್ಚೆ ಮಜಾ ಮಾಡ್ತಾರೆ ಅಂತ ಹೇಳೋ ಜನರಿಗೆ ವಿರೋಧ ಮಾಡಲ್ಲ..ಆದ್ರೆ ಪ್ರತಿಯೊಂದು ಹುಡುಗನ ಮನಸ್ಸು ಆಟ ಹೊರಗಿನ ಪ್ರಪಂಚಕ್ಕೆ ತೋರಿಸೋ ಒರಟುತನದ ವರ್ತನೆಗಿಂತ ತುಂಬಾ ಭಿನ್ನವಾಗಿರುತ್ತೆ ಅಂತ ಹೇಳಕ್ಕೆ ಪ್ರಯತ್ನ ಮಾಡ್ತಾ ಇದೀನಿ..

ಈ ಲೇಖನ ಹುಡುಗಿಯರ ವಿರುದ್ಧ ಖಂಡಿತ ಅಲ್ಲ..ಆದ್ರೆ ಹುಡುಗರು ಯಾವ ರೀತಿ ನೋವನ್ನ ಅನುಭವಿಸುತ್ತಾರೆ ಅನ್ನೋ ಒಂದು ಕತ್ಹೊರ ಸತ್ಯವನ್ನ ಹೇಳೋದು ಮಾತ್ರ ನನ್ನ ಉದ್ದೇಶ.ದೇವದಾಸ್ ಅಂತ ಕೇಳಿದಿರಾ ಅಲ್ವ???ಯಾಕೆ ನಮಗೆ ದೇವದಾಸ್ ಅಂತ ಹೇಳಿದ ಕೂಡಲೇ ಭಗ್ನ-ಪ್ರೇಮಿಯ ನೆನಪು ಆಗೋದು ಅಂತ ಯೋಚನೆ ಮಾಡಿದಿರಾ??ಯಾಕೆ ಯಾವತ್ತು ಭಗ್ನಪ್ರೇಮಿ ಅಂದ್ರೆ ಪ್ರೀತಿಯಲ್ಲಿ ಕೈ ಸುತ್ತಿಕೊಂಡ ಹುಡುಗರ ಬಗ್ಗೆ ನಾವು ಸಾಮಾನ್ಯವಾಗಿ ಕೇಳ್ತಾ ಇರ್ತಿವಿ ಅಂತ ಯಾರಾದ್ರೂ ಹೇಳ್ತಿರ???ಅದಕ್ಕೆ ಉತ್ತರ ತುಂಬಾ ಸುಲಭ,ದೇವರು ಹುಡುಗ ಮತ್ತೆ ಹುಡುಗಿ ಇಬ್ಬರನ್ನು ಒಂದು ವಿಶೇಷ ಕಾಳಜಿ ಇಂದ ರಚನೆ ಮಾಡಿದಾನೆ..ಅದೇನು ಅಂತಿರ,ಸಾಮಾನ್ಯವಾಗಿ ನಾವೆಲ್ಲಾ ಅಂದ್ಕೊಲ್ಲೋದು ಸಾಮಾಜಿಕವಾಗಿ,ಮಾನಸಿಕವಾಗಿ ಹುಡುಗರು ,ಹುಡುಗಿಯರಿಗಿಂತ ಹೆಚ್ಹು ಶಕ್ತಿಶಾಲಿಗಳು ಅಂತ..ಆದ್ರೆ ಅದು ಸತ್ಯಕ್ಕೆ ದೂರವಾದುದು..

ಹುಡುಗ-ಹುಡುಗಿ ಒಂದು ವಿಷಯದಲ್ಲಿ ತುಂಬಾ ಭಿನ್ನರು ,ಅದು ಯಾವ್ದು ಅಂದ್ರೆ ವಿಫಲ್ಲತೆ ಅಂದ್ರೆ failure ಇದನ್ನ accept ಮಾಡೋ ರೀತಿಯಲ್ಲಿ..ಹುಡುಗರು ಹುಟ್ಟಿನಿಂದಲೂ ತಾವು ಶಕ್ತಿಶಾಲಿಗಳು ಮತ್ತು ಹುಡುಗಿಯರಿಗಿಂತ ಎಲ್ಲದರಲ್ಲೂ ಮುಂದೆ ಅಂತ ಒಂದು ತಪ್ಪು ಕಲ್ಪನೆಯಲ್ಲಿ ಬೆಳೆದಿರುತ್ತಾರೆ..ಯಾವುದೇ ಹುಡುಗನು ಒಂದು ಹುಡುಗಿ ಇಂದ ಯಾವ ರೀತಿಯಲ್ಲೂ ಸೋಲೋದಕ್ಕೆ ಇಷ್ಟ ಪಡಲ್ಲ...ಆ ಬೇಸರವನ್ನ ಹೊರ ಪ್ರಪಂಚಕ್ಕೆ ತೋರ್ಪಡಿಸದೆ ಇದ್ದರು ಅದು ಆತನನ್ನ ಒಳಗೊಳಗೇ ಕಾಡುತ್ತಾ ಇರುತ್ತೆ...

ಹೇಗೆ ಹುಡುಗರ ಮನಸ್ಸು ಮ್ರದು??

೧.ಹುಡುಗರು ಹೆಚ್ಹು ಭಾವನ ಜೀವಿಗಳು(ಆದ್ರೆ ಭಾವನೆಯನ್ನ ವ್ಯಕ್ತ ಪಡಿಸಲ್ಲ)

೨.ವಿಷಯವನ್ನ ಆಳವಾಗಿ ತಲೆಗೆ ಹಿಡಿಸಿಕೊಲ್ಲೋದು ಕೂಡ ಹುಡುಗರೇ

೩.ದುಖವನ್ನ ಎಲ್ಲರ ಹತ್ತಿರ ಹಂಚಿಕೊಳ್ಳದೆ ಮನಸ್ಸಲ್ಲೇ ಕೊರಗೋದು ಕೂಡ ಹುಡುಗರೇ

೪.ಪ್ರೀತಿಸಿದ ವಸ್ತು ಅಥವಾ ವ್ಯಕ್ತಿ ತಮ್ಮಿಂದ ದೂರ ಆದ್ರೆ ಅದರ ನೆನಪಿನಲ್ಲೇ ಕೊರಗೋದು ಕೂಡ ಹುಡುಗರೇ

೫.ನಡೆದು ಹೋದ ಘಟನೆಯನ್ನ ಪದೇ-ಪದೇ ನೆನಪಿಸಿಕೊಂಡು ಯಾತನೆ ಅನುಭವಿಸೋದು ಹುಡುಗರೇ

೬.rejection ಇದನ್ನ ಯಾವುದೇ ಹುಡುಗನು ಸುಲಭವಾಗಿ ಮರಯಕ್ಕೆ ಆಗಲ್ಲ

೭.ಹುಡುಗರ ಒಂದು ಗುಣ ಏನಪ್ಪಾ ಅಂದ್ರೆ ಒಂದು ವಸ್ತು ಬೇಕು ಅಂದ್ರೆ ಅದು ಬೇಕು,ಅದು ಸಿಗದೇ ಇದ್ರೆ compromise ಮಾಡಿಕೊಳ್ಳೋದು ಸ್ವಲ್ಪ ಕಷ್ಟ ಪಡ್ತಾರೆ ಹೀಗೆ ಹುಡುಗರು ಸಾಮಾನ್ಯವಾಗಿ ಇದೆ ಕಾರಣಗಳಿಂದಾಗಿ ಭಾಗ್ನಪ್ರೇಮಿಗಳಾಗಿ ನರಳೋದು..

ಆದ್ರೆ ಹುಡುಗಿಯರ ಒಂದು ವಿಶೇಷತೆ ಏನಪ್ಪಾ ಅಂದ್ರೆ ಸುಲಭವಾಗಿ compromise ಮಾಡಿಕೊಳ್ಳುವ ಒಂದು ಗುಣ..ಯಾವುದೇ ಪರಿಸ್ತಿತಿ ಬಂದರು ಅದನ್ನ ಎದುರಿಸುವ ವಿಶೇಷ ಗುಣ ಹುಡುಗಿಯರಲ್ಲಿ ಇರೋದ್ರಿಂದ ಸಾಮಾನ್ಯವಾಗಿ ಹುಡುಗಿರು ಅಸ್ಹೊಂದು ಭಗ್ನ ಪ್ರೇಮಿಯಾಗಿ ಕೊರಗೋದಿಲ್ಲ..ಅದಕ್ಕೆ ನಾವು ಟಿವಿ ನಲ್ಲಿ ಮತ್ತು ದಿನ ಪತ್ರಿಕೆ ಅಲ್ಲಿ ನೋಡ್ತಾ ಇರ್ತಿವಿ ಪ್ರೀತಿಸಿದ ಹುಡುಗಿ ಬೇರೆ ಹುಡುಗನ್ನ ಮದುವೆ ಆಡಲು ಅಂತ ಹುಡುಗ ಆತ್ಮಹತ್ಯೆ ಮಾಡಿಕೊಂಡ ಅಂತಲೋ ಅಥವಾ ಪ್ರೀತಿಸಿದ ಹುಡುಗಿ ಕೈ ಕೊಟ್ಟಳು ಅಂತ ಆಕೆಯನ್ನ ಕೊಳ್ಳೋದಕ್ಕೆ ಪ್ರಯತ್ನ ಮಾಡಿದ ಅಂತ.. ನಾನು ಇಲ್ಲಿ ಹುಡುಗರು ಹುಡ್ಗಿರ್ಗೆ ಮೋಸ ಮಾಡಲ್ಲ ಅಂತ ಹೇಳ್ತಾ ಇಲ್ಲ..ಅದೆಲ್ಲ ನಂಗು ಗೊತ್ತು..ನಾನು ಹೇಳಕ್ಕೆ ಪ್ರಯತ್ನ ಮಾಡ್ತಾ ಇರೋದು ಇಷ್ಟೇ,ಸಾಮಾನ್ಯವಾಗಿ ಹುಡುಗರು ಪ್ರೀತಿಸಿದ ಹುಡುಗಿಯನ್ನ ಮರೆಯೋಕೆ ತುಂಬಾನೇ ಕಷ್ಟ ಪಟ್ಟು ಜೀವನದಲ್ಲಿ ಅನೇಕ ರೀತಿಯ ಯಾತನೆ ಅನುಭವಿಸುತ್ತಾರೆ...ಹುಡುಗಿಯರು ಸಾಮನ್ಯಾವಾಗಿ ಪರಿಸ್ಥಿತಿಗೆ ಅನುಗುಣವಾಗಿ ನಡೆದದ್ದನ ಮರೆತು ಮುಂದಿನ ಜೀವನ ನಡೆಸುತ್ತಾರೆ..

ಇಲ್ಲಿ ನಾನು ಹುಡುಗಿಯರು ತಪ್ಪಿತಸ್ಥರು ಅಂತ ಹೇಳ್ತಾ ಇಲ್ಲ,ಹುಡುಗರ ಮನಸ್ಸಿನ ಬಗ್ಗೆ ಹೇಳ್ತಾ ಇದ್ದೀನಿ ಅಷ್ಟೇ.. ನಿಮಗೆ ಏನು ಅನಸತ್ತೆ???ನಾನು ಸುಳ್ಳ ಹೇಳಿದ್ದು??

ದಯವಿಟ್ಟು ಈ ಲೇಖನವನ್ನ ಲಿಂಗದ ದ್ರಷ್ಟಿ ಇಂದ ನೋಡೋದು ಬೇಡ,ಯಾಕೆ ಅಂದ್ರೆ ಹುಡುಗರಿಗೂ ಜನ್ಮ ಕೊಡೋದು ಒಂದು ಹೆಣ್ಣೇ ಅಲ್ವ????

ಹುಡುಗರು ಭಾವನಾತ್ಮಕವಾಗಿ ಹುಡುಗಿಯರಿಗಿಂತ ದುರ್ಬಲರು,ಹುಡುಗರು ಯಾವತ್ತು ತಮಗೆ ಭಾವನಾತ್ಮಕವಾಗಿ ಜೊತೆಗಿರಲು ಒಂದು ಜೀವವನ್ನ ಆಶ್ರಿಯಿಸುತ್ತಾರೆ...ಅದಕ್ಕೆ ಅಲ್ವ ಹೇಳೋದು behind every successful man there is a woman ಅಂತ...ಅದಕ್ಕೆ ಹುಡುಗರು ಸಾಮಾನ್ಯವಾಗಿ ಪ್ರೀತಿಸಿ ಕೈ ಕೊಟ್ಟ ಹುಡುಗಿಯ ನೆನಪಲ್ಲೇ ನರಳೋದು....

ಹಾಗಾಗಿಹೆಣ್ಣು ಗಂಡು ಅನ್ನೋ ಭಾವನೆ ಮರೆತು ನಾ ಹೇಳಿದ್ದು ನಿಜಾನ ಸುಳ್ಳ ಅಂತ ತಿಳಿಸಿ..

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet