"ಹೆಸರಿಗೆ ನಿಲುಕದಾಕೆ"

"ಹೆಸರಿಗೆ ನಿಲುಕದಾಕೆ"

ಅವನ ಹೊಡೆತಕ್ಕೆ ಅವಳ ಕಣ್ಣೀರು 
ಗುಡು ಗುಡು ಗುದ್ದಿನ ಶಬ್ದ,
ಅವಳ ಬೆನ್ನು ಮೂಳೆ ಬಿರಿಯುವಂತೆ 
ಸುಮ್ಮನೆ ಸಹಿಸಿದಳು ಆಕೆ,

ನಾನು ಸರಿದಾಡಿದೆ ಗರ್ಭದಲ್ಲಿಯೇ ಮುಷ್ಠಿ ಕಟ್ಟಿ
ನನ್ನ ನೇವರಿಸಿದಳು, ಕ್ಷಣದಲ್ಲಿ ನೋವ ಮರೆತಳು,
ನಕ್ಕಳು, ಅವಡುಗಚ್ಚಿ 
ನಗುತಲಿದ್ದರೆ, ಮಗುವು ನಗುವುದಂತೆ,
ಪಕ್ಕದ ಮನೆಯ ನಮಿತಾ ಹೇಳಿದಳಂತೆ,

ಹೆಂಡದ ವಾಸನೆ ಆಕೆಗೆ,,,,,, ಗರ್ಭದ ಮಧುರತೆ ನನಗೆ,
ಅಲ್ಲಿ ಬೆಳಕಿನ ಕಿರಣಗಳಿಲ್ಲ, 
ಅಲ್ಲಿ ಸ್ಪರ್ದೆಯ ಸಂಕಷ್ಟವಿಲ್ಲ 
ದಿಕ್ಕರಿಸುವರೆಂಬ ಭಯವಿಲ್ಲ 
ಅಲ್ಲಿ ಬರಿಯ ಪ್ರೇಮ, ಪ್ರೇಮ, ಪ್ರೇಮ,

ಕತ್ತಲೆಯ ಇಕ್ಕಟ್ಟಿನಲ್ಲಿ ಸರಿದಾಡ ತೊಡಗಿದೆ,
ಹೊರ ಹೋಗುವ ತವಕದಲ್ಲಿ,
ಆಕೆಯಾ ನರ ನಾಡಿಯಲ್ಲಿ ನೋವು,
ನೋವಿಗೆ ಮಾಪಕವಿಟ್ಟು ಅಳೆದರೆ, 
ಅವಳಿಗೆ ಸರಿಸಾಟಿ ಯಾರು?

ಕಿರುಚಿದಳು, ಕೂಗಿದಳು, ಗೋಗರೆದಳು 
ಇದೆಲ್ಲ ನನಗಾಗಿ, ನಾನೆಂದರೆ ಆಕೆಯದೇ ಒಂದು ಬಾಗ,,
ನಾನು ಹೊರಬಂದೆ, ಸುಮ್ಮನೆ ತಟಸ್ತ ಇದ್ದವನಂತೆ ನಟಿಸಿದೆ,
ಅಯ್ಯೋ,,,,,,, ಆಕೆಯ ಕೂಗು ಹೇಳತೀರದು,
ನನ್ನ ಕೊಳಕುತನವನ್ನು ಲೆಕ್ಕಿಸದೆ ಎದೆಗಪ್ಪಿದಳು,
ಚುಂಬಿಸಿದಳು,
ಅವಳ ಉಸಿರನ್ನು ಕಿತ್ತು ನನಗೀವಲು ತಯಾರಾದಳು,
ನಾನು ಕೊಸರಿದೆ, ಉಸಿರಿದೆ,
ಆನಂದ ಭಾಷ್ಪ, ಆಕೆಯ ನಲಿವಿಗೆ ಆಕೆಯೇ ಸಾಟಿ,

ಆಕೆಗೆ ನಾನು ಮಾತ್ರ ಸತ್ಯ,
ಉಳಿದಿದ್ದೆಲ್ಲವು ಸುಳ್ಳು,,,,,

ಯಾವ ಹೆಸರಿತ್ತು ಕರೆಯಲಿ ಆಕೆಯನು,,,,
ಜೀವ ನೀಡಿದಾಕೆಯನು??

--ನವೀನ್ ಜೀ ಕೇ 
 

Comments