ಹೇಳು ನಾ ಏನ ಮಾಡಲಿ...........
ಕವನ
ನೆನಪಿಲ್ಲದ ದಿನವಿಲ್ಲ.
ಹೇಳಿಕೊಳ್ಳುವ ಮನಸ್ಸಂತೂ ಇಲ್ಲ
ಏನ ಹೇಳಲಿ ನಾ
ಏನ ಮರೆಯಲಿ ನಾ
ಏನ ನೆನೆಯಲಿ ನಾ
ನೆನೆದು ನೆನೆದು ಮರೆಯುವ ಮುನ್ನ.
ಒಮ್ಮೆಯಾದರು ನೆನೆಸಿಕೊಳ್ಳುತ್ತಲೇ
ಒಂದು ಕರೆಯಾದರು
ಮಾಡುವೆಯಾ ಎಂಬ ನಂಬಿಕೆಯೇ
ಸುಳ್ಳಾಗಿರುವಾಗ
ಮತ್ತೆ ಮತ್ತೇಕೆ ನೆನೆಯುವೆಂಬ
ಯಕ್ಷಪ್ರಶ್ನೆಗಳ ನಡುವೆ
ಕಣ್ಣೆದುರಿಗೆ ಬಂದ
ಪ್ರತಿಬಿಂಬವೊಂದೆ ಅದು
ನಾನು ನೀನು ಒಂದು ಸಣ್ಣ ಕೀ ಚೈನಿಗಾಗಿ
ಜಗಳವಾಡಿ ಮುನಿಸಿಕೊಂಡ ಘಟನೆ
ಮತ್ತೆ ನೆನಪು ಮಾಡುತ್ತಲೇ
ನನ್ನ ಸುತ್ತ ಗಿರಿಕಿ ಹೊಡೆಯುತ್ತಿದೆಯಲ್ಲ...
ಹೇಳು ನಾ ಏನ ಮಾಡಲಿ...........
Comments
ಉ: ಹೇಳು ನಾ ಏನ ಮಾಡಲಿ...........