ಹೌದಲ್ವಾ…!

ಹೌದಲ್ವಾ…!

ನಮ್ಮದೇಶದಲ್ಲಿ ನಾವೆಲ್ಲರೂ ಒಂದೆ ! ಆದರೆ ಜಾತಿ ವಿಜಾತಿಗಳಿಂದ ನಾವು ದೂರ ದೂರವಾಗಿದ್ದೇವೆಯೆ ? ಹಾಗೇ ಕಾನೂನುಗಳು ಭಾರತೀಯರಿಗೆಲ್ಲಾ ಒಂದೆ! ಆದರೆ ಬಡವ ಬಲ್ಲಿದ , ಅಧಿಕಾರಿ ಅವರ ಅಂತಸ್ತು , ರಾಜಕೀಯ ಧುರೀಣರಿಗೇ ಜಾತಿಗಳಲ್ಲಿರುವಂತೆ ಕಾನೂನುಗಳಲ್ಲಿ ಹಲವು ಒಳ ಕಾನೂನುಗಳಿವೆ . ಇದರಿಂದಾಗಿಯೇ ನಮ್ಮ ಜನಸಾಮಾನ್ಯ ವರ್ಗ ಇಂದು ತುಂಬಾ ಬಲಹೀನವಾಗಿರಲು ಕಾರಣವಾಗಿದೆ ! ಕಾನೂನು ಎಲ್ಲರಿಗೂ ಒಂದೇ ಆಗಿರಲಿ ; ಅದಾಗುವವರೆಗೂ ಕಾನೂನುಗಳನ್ನು ಮುರಿದು ಬದುಕುತ್ತಿರುವವರು ನಿರ್ಭಯರಾಗಿ ಈ ದೇಶದಲ್ಲಿ ಯಾವುದೇ ತೊಂದರೆಯಿಲ್ಲದೆ ಬದುಕಿ ಬಾಳುತ್ತಾರೆ , ಇವರ ಸಂತತಿಯೇ ಈದೇಶದಲ್ಲಿ ಕಾಲಾನುಕ್ರಮದಲ್ಲಿ ತುಂಬಿ ಹೋದಲ್ಲಿ ; ಯಾವತ್ತಿಗೂ ಈ ನೆಲದಲ್ಲಿ ಯಾವುದಕ್ಕೂ ಯಾವ ಅರ್ಥವೂ ಇರುವುದಿಲ್ಲ ! 

***

ನಮ್ಮ ಒಳ್ಳೆಯ ತನವೇ ನಮ್ಮನ್ನು ಎಲ್ಲೇ ಹೋಗಲಿ  ಉಳಿಸಿ ಕಾಪಾಡುತ್ತದೆ ... ಉದಾಹರಣೆಗೆ ನಾನೇ ನಮ್ಮ ದೇಶದ ಸಾಧಾರಣ ಎಲ್ಲಾ ಕಡೆ ಜೀವನಕ್ಕಾಗಿ ಅಲೆದಾಡಿದೆ , ಎಲ್ಲೂ ಹೊರ ಹಾಕಿಲ್ಲ ನನ್ನಲ್ಲಿರುವ ಒಳ್ಳೆಯತನ ನನಗೆ ನೆರವಾಯಿತು. ಹೋದಲೆಲ್ಲ ಜಾತಿಭೇದ ಮಾಡದೆ ಇವನು ನಮ್ಮವನೆಂದು ನನ್ನ ಸಲಹಿ ಕಾಪಾಡಿದರು. ಇಂದು ನಾನು ಈ ನೆಲದಲ್ಲಿ ಇರುವೆನೆಂದರೆ ಅವರೆಲ್ಲರ ಪ್ರೀತಿ ಆಶೀರ್ವಾದ ಶ್ರೀರಕ್ಷೆಗಳೆ ! ಇಂದು ಒಂದು ಕಡೆ ಆರಕ್ಕೇರದೆ ಮೂರಕ್ಕಿಳಿಯದೆ ನೆಲೆಸುವಂತಾಗಿದೆ; ಜೀವನ ಸಾಗಿಸುವಂತಾಗಿದೆ.

***

ಅಮಾಯಕರು ಸಾಯುವವರೆಗೂ 

ಜೀವನದಲ್ಲಿ ಅಮಾಯಕರಾಗೇ ಬದುಕುತ್ತಾರೆ .

ಕಾರಣ ಅವರೆಷ್ಟೇ ಬುದ್ಧಿವಂತರಾಗಿದ್ದರೂ ಕೂಡಾ 

ಮೋಸ ಮಾಡುವವರು ಅವರ ಹತ್ತಿರದಲ್ಲೇ ಇರುತ್ತಾರೆ ! 

***

ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ