೨೦೨೪ರ ಸಂಪದ ಟಾಪ್ - ೧೦
ಕಳೆದ ಸುಮಾರು ಎರಡು ದಶಕಗಳಿಂದ ‘ಸಂಪದ’ ಜಾಲತಾಣವು ಸಾವಿರಾರು ಬರಹಗಳಿಗೆ ವೇದಿಕೆಯಾಗಿದೆ. ಮೊಬೈಲ್, ವಾಟ್ಸಾಪ್, ಫೇಸ್ಬುಕ್, ಟ್ವಿಟರ್ (ಎಕ್ಸ್), ಇನ್ಸ್ಟಾಗ್ರಾಂ ಹೀಗೆ ಹತ್ತು ಹಲವಾರು ಸಾಮಾಜಿಕ ಜಾಲತಾಣಗಳು ಇಲ್ಲದೇ ಇರುವ ಸಮಯದಲ್ಲಿ ಹುಟ್ಟಿಕೊಂಡ ‘ಸಂಪದ’ ಹಲವಾರು ಉದಯೋನ್ಮುಖ ಬರಹಗಾರರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವ ಉತ್ತಮ ವೇದಿಕೆಯಾಗಿತ್ತು. ಈಗ ಖ್ಯಾತ ಲೇಖಕರಾಗಿರುವ ಹಲವಾರು ಮಂದಿ ಸಂಪದ ಜಾಲತಾಣಕ್ಕೆ ನಿರಂತರವಾಗಿ ಬರೆಯುತ್ತಿದ್ದರು. ಈಗಲೂ ಸಂಪದ ಹಳೆಯ ಪುಟಗಳಲ್ಲಿ ಆ ಬರಹಗಳನ್ನು ಓದಬಹುದಾಗಿದೆ. ಈಗಾಗಲೇ ಸಂಪದದಲ್ಲಿರುವ ಬರಹಗಳ ಸಂಖ್ಯೆ ೫೯ ಸಾವಿರದ ಗಡಿ ದಾಟಿ ಸದ್ಯದಲ್ಲೇ ೬೦ ಸಾವಿರದ ಮೈಲುಗಲ್ಲು ತಲುಪಲಿದೆ.
ಕಳೆದ ೨೦೨೪ನೇ ಸಾಲಿನಲ್ಲಿ ‘ಸಂಪದ’ ದಲ್ಲಿ ೨,೪೧೪ ಬರಹಗಳು ಪ್ರಕಟವಾಗಿವೆ. ಅವುಗಳಲ್ಲಿ ಪ್ರಚಲಿತ ವಿದ್ಯಮಾನಗಳ ಬರಹಗಳು, ಪುಸ್ತಕ ಮಾಹಿತಿಗಳು, ಹಕ್ಕಿ ಕತೆಗಳು, ಸಸ್ಯ ಮಾಹಿತಿಗಳು, ವಿಜ್ಞಾನ, ಕ್ರೀಡೆ ಸಂಬಂಧಿ ಬರಹಗಳು, ಹೊಸ ರುಚಿ, ಕವನಗಳು, ಗಝಲ್ ಗಳು, ಹನಿಗವನಗಳು… ಹೀಗೆ ಹತ್ತು ಹಲವಾರು ಪ್ರಕಾರಗಳು ಪ್ರಕಟವಾಗಿವೆ. ಹೊಸ ಓದುಗರಿಗೆ ಅನುಕೂಲವಾಗಲಿ ಎಂದು ನಾವು ಪ್ರತೀ ವರ್ಷದ ಪ್ರಾರಂಭದಲ್ಲಿ ಹಿಂದಿನ ವರ್ಷದ ಟಾಪ್ ೧೦ ಬರಹಗಳನ್ನು ಗುರುತು ಮಾಡಿ ಪ್ರಕಟ ಮಾಡುತ್ತೇವೆ. ಕಳೆದ ವರ್ಷ ನಾನು ಗುರುತಿಸಿದ ಟಾಪ್ ೧೦ ಬರಹಗಳು ಹೀಗಿವೆ. ಈ ಹತ್ತು ಬರಹಗಳಲ್ಲದೇ ಇನ್ನೂ ಹತ್ತು ಮೆಚ್ಚುಗೆ ಗಳಿಸಿದ ಬರಹಗಳನ್ನೂ ಸಂಗ್ರಹಿಸಿರುವೆ. ಹಳೆಯ ಓದುಗರಾಗಿದ್ದರೆ ಮತ್ತೊಮ್ಮೆ ಗಮನಿಸಿ, ನೀವೂ ನಿಮ್ಮ ಟಾಪ್ ಬರಹಗಳನ್ನು ಬರೆದು ಪ್ರಕಟಿಸಿ.
೨೦೨೪ ಟಾಪ್ ೧೦
೧. ಸುಪ್ರೀಂ ಕೋರ್ಟಿನ ತೀರ್ಪು : ರೈತರ ಬದುಕಿನ ಹಕ್ಕು ಸುಪ್ರೀಂ - ಜನವರಿ ೨೦೨೪ - ಅಡ್ಡೂರು
೨. ನ್ಯುಟ್ರಿನೋ ಕಣ ಮತ್ತು ಐನ್ ಸ್ಟೀನ್ ಸಿದ್ಧಾಂತ - ಫೆಬ್ರವರಿ - ಕೆ. ನಟರಾಜ್, ಬೆಂಗಳೂರು
೩. 12th Fail ಹೊರತಂದ ನೆನಪುಗಳು - ಫೆಬ್ರವರಿ - hpn
೪. ಕನಸನ್ನು ನನಸಾಗಿಸಿ ‘ಯಶಸ್ವಿ’ಯಾದ ಜೈಸ್ವಾಲ್ - ನವೆಂಬರ್ - ಕೆ ಪಿ ಅಶ್ವಿನ್ ರಾವ್
೫. ನಳಂದಾ - ಆಕ್ರಮಣಕಾರರಿಂದ ನಾಶವಾದ ಭಾರತದ ಜಾಗತಿಕ ವಿದ್ಯಾಕೇಂದ್ರ - ಮಾರ್ಚ್ - ಅಡ್ಡೂರು
೬. ಕನ್ನಡಕ್ಕಾಗಿ ಕೈ ಎತ್ತು ಅದೇ ಕಲ್ಪವೃಕ್ಷ - ಅಕ್ಟೋಬರ್ - ವಿವೇಕಾನಂದ ಹೆಚ್ ಕೆ, ಬೆಂಗಳೂರು
೭. ಸಂಧ್ಯಾ ಕಾಲದಲ್ಲಿ ಮರೆಗೆ ಸರಿಯುತ್ತಿರುವ ಅಪ್ಪ - ಮೇ - ಯಾಕೂಬ್ ಕೆಯ್ಯೂರು, ಬೆಳ್ತಂಗಡಿ
೮. ಭೂಮಿಗೆ ಎರಡು ಚಂದ್ರಗಳಿರುತ್ತಿದ್ದರೆ ಸಮುದ್ರಗಳ ಪ್ರವಾಹಗಳು ಹೇಗಿರಬಹುದಿತ್ತು? - ಜುಲೈ - ಶಿಕ್ರಾನ್ ಶೈಫುದ್ದೀನ್ ಎಂ. ಮಂಗಳೂರು
೯. ದನದ ಸೆಗಣಿಯ ಬೆರಣಿಗೆ ಬಂಗಾರದ ಬೆಲೆ - ಜನವರಿ - ಅಡ್ದೂರು
೧೦. ಚೆನ್ನಭೈರಾದೇವಿ - ಪುಸ್ತಕ ಪರಿಚಯ - ಅಕ್ಟೋಬರ್ - ಕೆ ಪಿ ಅಶ್ವಿನ್ ರಾವ್
ಮೆಚ್ಚುಗೆ ಪಡೆದ ಬರಹಗಳು
೧. ಬಾಳಿನ ಇಳಿಸಂಜೆಯ ಹೊತ್ತಿನಲ್ಲಿ… - ಫೆಬ್ರವರಿ - ಕೆ ಪಿ ಅಶ್ವಿನ್ ರಾವ್
೨. ದೇವರು ಇದ್ದಾನೆ ಎಂಬಂತೆ ಬದುಕಬೇಕು. - ಫೆಬ್ರವರಿ - ಅಡ್ದೂರು
೩. ಕ್ಷಮಿಸು ನೇಹಾ, ನಿನ್ನ ಹತ್ಯೆಯಲ್ಲಿ ನನ್ನದೂ ಪಾಲಿದೆ. - ಎಪ್ರಿಲ್ - ವಿವೇಕಾನಂದ ಹೆಚ್ ಕೆ, ಬೆಂಗಳೂರು
೪. ಪ್ಯಾರಾ ಒಲಂಪಿಕ್ಸ್ ಹುಟ್ಟಲು ಕಾರಣವೇನು? - ಆಗಸ್ಟ್ - ಕೆ ಪಿ ಅಶ್ವಿನ್ ರಾವ್
೫. ಭಾರತದ ಗುಕೇಶ್ ದೊಮ್ಮರಾಜು ಜಾಗತಿಕ ಚದುರಂಗ ಚಾಂಪಿಯನ್ - ಡಿಸೆಂಬರ್ - ಅಡ್ಡೂರು
೬. ಚಿರಮೌನಕ್ಕೆ ಜಾರಿದ ಡಾ ಮನಮೋಹನ್ ಸಿಂಗ್ - ಡಿಸೆಂಬರ್ - ಕೆ ಪಿ ಅಶ್ವಿನ್ ರಾವ್
೭. ನಮಗೆ ತಿಳಿಯದ ಆಯುರ್ವೇದ ಹಾಗೂ ಆರೋಗ್ಯದ ಲೋಕ - ಮೇ - ಅಡ್ದೂರು
೮. ಪೂಲಾ ಪಾಂಡಿಯನ್ ನೆನಪಿನಲ್ಲಿ… - ಡಿಸೆಂಬರ್ - ವಿವೇಕಾನಂದ ಹೆಚ್ ಕೆ, ಬೆಂಗಳೂರು
೯. ರಾಗಗಳನ್ನು ಉಸಿರಾಗಿಸಿಕೊಂಡಿದ್ದ ಪಂಡಿತ್ ತಾರಾನಾಥ್ - ಜೂನ್ - ಕೆ ಪಿ ಅಶ್ವಿನ್ ರಾವ್
೧೦. ಸಾಧನ ಕೇರಿಯ ಸಾಧಕ ಬೇಂದ್ರೆಯಜ್ಜ - (ಕವನ) - ಜನವರಿ - ರತ್ನಾ ಕೆ ಭಟ್, ತಲಂಜೇರಿ
ಇಲ್ಲಿ ಗಮನಿಸ ಬೇಕಾದ ವಿಚಾರ ಎಂದರೆ ಈ ಮೇಲಿನ ೨೦ ಬರಹಗಳಲ್ಲದೇ ಇನ್ನೂ ಸಾಕಷ್ಟು ಬರಹಗಳನ್ನು ನಿಮ್ಮ ಉತ್ತಮ ಓದಿಗೆ ಬಳಸಿಕೊಳ್ಳಬಹುದು. ದಿನಕ್ಕೊಂದು ‘ಸ್ಟೇಟಸ್ ಕತೆ’ ಗಳನ್ನು ಬರೆಯುತ್ತಿರುವ ಧೀರಜ್ ಬೆಳ್ಳಾರೆ, ವಾರಕ್ಕೊಮ್ಮೆ ವಿವಿಧ ಬಗೆಯ ಅಪರೂಪದ ಪಕ್ಷಿಗಳನ್ನು ಪರಿಚಯಿಸುತ್ತಿರುವ ಶಿಕ್ಷಕ ಅರವಿಂದ ಕುಡ್ಲ, ಬಂಟ್ವಾಳ, ವಾರಕ್ಕೊಮ್ಮೆ ‘ನಿಷ್ಪಾಪಿ ಸಸ್ಯಗಳು’ ಮಾಲಿಕೆಯಲ್ಲಿ ಅಪರೂಪದ ಸಸ್ಯ ತಳಿಗಳ ಮಾಹಿತಿ ನೀಡುವ ಶಿಕ್ಷಕಿಯಾಗಿರುವ ವಿಜಯಾ ಶೆಟ್ಟಿ, ವೈಜ್ಞಾನಿಕ ಬರಹಗಳನ್ನು ಆಗಾಗ ಬರೆಯುತ್ತಿರುವ ಬೆಂಗಳೂರಿನ ಕೆ. ನಟರಾಜ್, ವಾರಕ್ಕೊಮ್ಮೆ ಅಪರೂಪದ ಪತ್ರಿಕೆಗಳನ್ನು ಪರಿಚಯಿಸುವ ‘ಕನ್ನಡ ಪತ್ರಿಕಾ ಲೋಕ’ ಬರೆಯುತ್ತಿರುವ ಪತ್ರಕರ್ತರಾದ ಶ್ರೀರಾಮ ದಿವಾಣ, ಉಡುಪಿ ಇವರೆಲ್ಲರ ಬರಹಗಳನ್ನು ಓದುಗರು ಗಮನಿಸಲೇ ಬೇಕು. ಈ ನಿರಂತರ ಬರಹಗಾರರ ಲೇಖನಗಳು ಯಾವುದೇ ಟಾಪ್ ಬರಹಗಳಿಗಿಂತ ಕಡಿಮೆ ಇಲ್ಲ.
ಇನ್ನಷ್ಟು ಆಕರ್ಷಕ, ಮಾಹಿತಿಪೂರ್ಣ ಬರಹಗಳು ೨೦೨೫ರಲ್ಲೂ ಮೂಡಿಬರಲಿ. ಮುಂದಿನ ವರ್ಷ ಜನವರಿಯಲ್ಲಿ ಮತ್ತೆ ಟಾಪ್ ಬರಹಗಳ ಜೊತೆ ಸಿಗುವೆ.