೪% ದೇಸಿ ಜನರ ಹಾರ್ಟು, ಅನುವಂಶಿಕವಾಗಿ* (genetically) ತುಂಬಾ ವೀಕು….

೪% ದೇಸಿ ಜನರ ಹಾರ್ಟು, ಅನುವಂಶಿಕವಾಗಿ* (genetically) ತುಂಬಾ ವೀಕು….

ಬರಹ

ಕೆಟ್ಟದಾಗಿ ರೂಪಾಂತರಗೊಂಡ (mutation) MYBPC3 ಜೀನ್’ (ವಂಶವಾಹಿ) ಹೊಂದಿರುವವರಿಗೆ ಹ್ರದಯ ರೋಗಗಳು ಬರುವ ಸಾಧ್ಯತೆ ಹೆಚ್ಚು ಎನ್ನುವುದು CCMB, ಹೈದ್ರಾಬಾದಿನ ವಿಜ್ನಾನಿಗಳ ಅಭಿಪ್ರಾಯ [೧]. ಭಾರತ ಉಪಖಂಡದ ೪% (೬ ಕೋಟಿ) ಜನರು ಈ ಕೆಟ್ಟ MYBPC3 ಜೀನ್’ ಮ್ಯುಟೇಶನ್ ಹೊಂದಿದ್ದಾರೆ [೨].

ಈ MYBPC3 ಜೀನ್, ಮಯೋಸಿನ್ ಬೈಂಡಿಂಗ್ ಪ್ರೊಟೀನ್’ನನ್ನು (cardiac myosin binding protein C) ಉತ್ಪಾದಿಸುತ್ತದೆ*. ಮಯೋಸಿನ್ ಬೈಂಡಿಂಗ್ ಪ್ರೊಟೀನ್, ಹ್ರದಯದ ಸ್ನಾಯುಗಳ ಕಾರ್ಯ ನಿರ್ವಹಣೆಗೆ (ಹ್ರದಯದ ಬಡಿತಕ್ಕೆ) ತುಂಬಾ ಅವಶ್ಯಕ. ಕೆಟ್ಟದಾಗಿ ರೂಪಾಂತರಗೊಂಡ (mutation) MYBPC3 ಜೀನ್’ನಲ್ಲಿ ಸ್ವಲ್ಪ DNA ಡಿಲೀಟಾಗಿರುತ್ತೆ. ಆದ್ದರಿಂದ ಅಂಥಾ ಜೀನ್ ಉಂಟು ಮಾಡುವ ಮಯೋಸಿನ್ ಬೈಂಡಿಂಗ್ ಪ್ರೊಟೀನ್’ ಸರಿಯಾಗಿ ಕೆಲಸ ಮಾಡಲ್ಲ (ಬಗ್ಸ್ ಇರೋ ಪ್ರೊಗ್ರಾಮ್ ಸರಿಯಾಗಿ output ಕೊಡೋದಿಲ್ವಲ್ಲಾ, ಅದೇ ರೀತಿ). ಯುವಕ/ತಿಯರ ಹ್ರದಯದ ಸ್ನಾಯುಗಳ ಜೀವಕೋಶಗಳಲ್ಲಿ ಈ ಕೆಟ್ಟ ಪ್ರೊಟೀನ್’ಗಳನ್ನು ನಾಶ ಮಾಡುವ ವ್ಯವಸ್ಥೆ ಚೆನ್ನಾಗಿರುತ್ತದೆ. ಸುಮಾರು, ೩೦-೩೫ ವರ್ಷ ದಾಟಿದ ನಂತರ ಕೆಟ್ಟ ಮಯೋಸಿನ್ ಬೈಂಡಿಂಗ್ ಪ್ರೊಟೀನ್’ಗಳನ್ನು ನಾಶ ಮಾಡುವ ವ್ಯವಸ್ಥೆ ಅಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡದೆ ಇರೋದ್ರಿಂದ, ಅಂಥವರು ಕಾರ್ಡಿಯೊಮಯೊಪತಿಗೆ (Cardiomyopathy, high risk of sudden cardiac death) ಒಳಗಾಗುತ್ತಾರೆ [೧]. ಆದರೆ, ಮುಂದೊಂದು ದಿನ ಈ ರೋಗಕ್ಕೆ ಪರಿಣಾಮಕಾರಿಯಾದ ಚಿಕಿತ್ಸೆಯನ್ನು ಕಂಡು ಹಿಡಿಯುವ ವಿಶ್ವಾಸ ವಿಜ್ನಾನಿಗಳಿಗೆ ಇದೆ.

ವಿಶ್ವ ಆರೋಗ್ಯ ಸಂಸ್ಥೆಯ ಲೆಕ್ಕಾಚಾರಗಳ ಪ್ರಕಾರ, ೨೦೧೦ರಲ್ಲಿ ಪ್ರಪಂಚದ ೬೦% ಹ್ರದಯ ರೋಗಿಗಳು, ಭಾರತೀಯರಾಗಿರುತ್ತಾರೆ [೨]. ಕೆಟ್ಟ MYBPC3 ಜೀನ್ ನ್ಯೂನತೆಯನ್ನು genetic testsಗಳ ಮೂಲಕ ಎಳವೆಯಲ್ಲೆ ಕಂಡುಕೊಳ್ಳಬಹುದಾದ್ದರಿಂದ, ಮುಂದೆ ಅಂಥವರು ಆರೋಗ್ಯಕರ ಜೀವನ ಶೈಲಿಯನ್ನು ರೂಢಿಸಿಕೊಂಡು ಹ್ರದಯದ ತೊಂದರೆಗಳನ್ನು ದೂರವಿಡಬಹುದು.

[೧]. http://www.nature.com/ng/journal/v41/n2/abs/ng.309.html
[೨]. http://news.bbc.co.uk/2/hi/health/7833753.stm

PS *ದೇಹದ ಪ್ರತಿಯೊಂದು ಅಂಗದ ಜೀವಕೋಶಗಳಲ್ಲಿರುವ DNA ಒಂದೆ. ಅವುಗಳನ್ನು ಕ್ರೋಮೊಸೊಮ್ (ವರ್ಣಕಾಯ, ವರ್ಣದಂಡ)ಗಳೆಂದು ಕರೆಯುತ್ತೇವೆ. ಪ್ರತಿಯೊಂದು ಕ್ರೋಮೊಸೊಮ್ ಸಾವಿರಾರು ಜೀನ್ಗಳಿಂದ ಮಾಡಲ್ಪಟ್ಟಿದೆ (ಮಾನವನ ಪ್ರತಿಯೊಂದು ಜೀವಕೋಶದಲ್ಲಿಯು ೨೩ ಜೊತೆ ಕ್ರೋಮೊಸೊಮ್ಗಳಿವೆ. ಸುಮಾರು ೩೨,೦೦೦ ಜೀನ್ಗಳು ಈ ೨೩ ಕ್ರೋಮೊಸೊಮ್ಗಳಲ್ಲಿ ಹಂಚಿ ಹೋಗಿವೆ). ನಮ್ಮಲ್ಲಿರುವ ೨೩ ಜೊತೆ (೪೬) ಕ್ರೋಮೊಸೊಮ್ಗಳಲ್ಲಿ, ೨೩ ತಾಯಿಯಿಂದಲೂ, ೨೩ ತಂದೆಯಿಂದಲೂ ಬಂದಂತವು.