‘ಸಂಪದ’ ನಗೆ ಬುಗ್ಗೆ - ಭಾಗ ೯೩

‘ಸಂಪದ’ ನಗೆ ಬುಗ್ಗೆ - ಭಾಗ ೯೩

ಜ್ಯೋತಿಷ್ಯ

ಜ್ಯೋತಿಷಿ: ನೋಡಿ ಗಾಂಪ ರಾಯರೇ, ನಿಮ್ಮ ಜಾತಕ ಅದ್ಭುತವಾಗಿದೆ. ಸ್ಪಷ್ಟವಾಗಿ ತಿಳಿಸುತ್ತದೆ. ಏನೆಂದರೆ, ನಿಮ್ಮ ತಂದೆಯಷ್ಟೇ ವರ್ಷ ಬದುಕುತ್ತೀರಿ, ಅವರು ಸಾಯುವ ಸ್ಥಳದಲ್ಲೇ ಸಾಯುತ್ತೀರಿ, ಅವರು ಸಾಯುವ ಪರಿಸ್ಥಿತಿಯಲ್ಲಿಯೆ ಸಾಯುತ್ತೀರಿ….

ಗಾಂಪ ರಾಯರು ಇದನ್ನು ಕೇಳಿ ಗುರುಗಳಿಗೆ ವಂದಿಸಿ ಅವಸರದಲ್ಲಿ ತಲೆ ಕೆಟ್ಟವರಂತೆ ಓಡಿದರು. ಅರ್ಧ ಘಂಟೆಯೊಳಗೆ ಅಪ್ಪನನ್ನು ವೃದ್ಧಾಶ್ರಮದಿಂದ ಮನೆಗೆ ಕರೆತಂದರು. 

***

ಬುದ್ಧಿವಂತಿಕೆ

ಶಾಲಾ ಮಾಸ್ಟರ್ ಗಾಂಪ ಒಮ್ಮೆ ATM ಗೆ ದುಡ್ಡು ತೆಗೆಯಲು ಹೋದ, ATM ನಲ್ಲಿ ದುಡ್ಡಿರಲಿಲ್ಲ, ಚೆಕ್ಬುಕ್ ಜೇಬಲ್ಲಿ ಇದ್ದುದರಿಂದ ಹತ್ತಿರದಲ್ಲೇ ಇದ್ದ ಬ್ಯಾಂಕ್ ಒಳಗಡೆ ಹೋಗಿ 1000 ರೂಪಾಯಿಯ ಚೆಕ್ ಬರೆದು ಕ್ಯಾಶಿಯರ್ ಕೈಗೆ ಕೊಟ್ಟ. 

ಕ್ಯಾಶಿಯರ್ ಹೇಳ್ದ ”5000 ಕಿಂತ ಕಡಿಮೆ ಅಮೌಂಟ್ ಇದ್ರೆ ಚಾರ್ಜ್ ಕಟ್ ಆಗುತ್ತೆ ಸರ್ ” .
ಆಗ ಗಾಂಪ 6000 ಅಮೌಂಟ್ ಬರ್ದು ಮತ್ತೆ ಕ್ಯಾಶಿಯರ್ ಕೈಗೆ ಕೊಟ್ಟ. ಕ್ಯಾಶಿಯರ್ 6000 ಅಮೌಂಟ್ ಕೊಟ್ಟ, 

ಗಾಂಪ ಅದರಲ್ಲಿ 1000 ರೂ. ಜೇಬಿಗೆ ಇಟ್ಕೊಂಡು ಉಳಿದ 5000 ರುಪಾಯಿ ಜಮಾ ಸ್ಲೀಪ್ ಬರ್ದು ಡೆಪಾಸಿಟ್ ಮಾಡು ಅಂತೇಳಿ ಮತ್ತೆ ಕ್ಯಾಶಿಯರ್ ಗೆ ಕೈಗೆ  ಕೊಟ್ಟ . ಕ್ಯಾಶಿಯರ್ ಮಕ ಮಕ ನೋಡೋಕೆ ಶುರು ಮಾಡಿದ.
ಆಗ ಮಾಸ್ತರ ಗಾಂಪ ಹೇಳಿದ “ನಿಮ್ ಮ್ಯಾನೇಜರ್ ಕೂಡ ನಮ್ ಕೈಯಲ್ಲಿ ಕಲ್ತು ಮ್ಯಾನೇಜರ್ ಆಗಿರ್ತಾನೆ ನೆನಪಿರಲಿ!

***

ವ್ಯತ್ಯಾಸ

ಆಗಿನ ಕಾಲದ ಮತ್ತು ಈಗಿನ ಫಂಕ್ಷನ್‌ಗಳ ಮೂಲಭೂತ ವ್ಯತ್ಯಾಸವೇನೆಂದರೆ….

ಆಗ: ಊಟ ಮಾಡುವವರು ಒಂದೇ ಕಡೆ ಇರುತ್ತಿದ್ದರು ಮತ್ತು ಬಡಿಸುವವರು ಅತ್ತಿಂದಿತ್ತ ಅಲೆಯುತ್ತಿದ್ದರು.

ಈಗ: ಬಡಿಸುವವರು ಒಂದೇಕಡೆ ಇರುತ್ತಾರೆ. ಊಟ ಮಾಡುವವರು ಅತ್ತಿಂದಿತ್ತ ಅಲೆಯುತ್ತಾರೆ.
***

ದೀರ್ಘಾಯುಷ್ಯದ ಗುಟ್ಟು

ತಮ್ಮ ವಿವಾಹದ 100 ನೇ ವರ್ಷ ಆಚರಿಸುತ್ತಿರುವ ವೃದ್ಧ ದಂಪತಿಗಳನ್ನು ಟಿ.ವಿ.ಯವರು ಸಂದರ್ಶಿಸಿದರು .
ಟಿ.ವಿ. : ನಿಮ್ಮ ಈ ದೀರ್ಘಾಯುಷ್ಯದ ಗುಟ್ಟೇನು ?
ಅಜ್ಜ : ವಾಕಿಂಗ್. ನಾವಿಬ್ಬರೂ ಮದುವೆಯ ದಿನದಿಂದಲೇ ಒಂದು ಒಪ್ಪಂದ ಮಾಡಿದ್ದೆವು . ನಮಗಿಬ್ಬರಿಗೆ ವಾದ ಆದಾಗ ಸೋತವರು ದಿನಾ 2 ಕಿ‌.ಮೀ . ದೂರ ನಡೆದು ಮನೆಗೆ ಬರಬೇಕು ಎಂಬ ಷರತ್ತು . ದಿನಂಪ್ರತೀ ನಾನೇ ಸೋಲುತ್ತಿದ್ದ ಕಾರಣ, ವಾಕಿಂಗ್ ಮಾಡಿ, ಮಾಡಿ ದೀರ್ಘಾಯುಷ್ಯ ಹೊಂದಿದ್ದೇನೆ .
ಟ.ವಿ‌, : ನಿಮ್ಮ ಬಗ್ಗೆ ಸರಿ. ಆದರೂ ನಿಮ್ಮ ಪತ್ನಿಯೂ ದೀರ್ಘಾಯುಷ್ಯ ಹೊಂದಿದ್ದಾರಲ್ಲಾ ? ಅದಕ್ಕೆ ಕಾರಣವೇನು ?
ಅಜ್ಜ: ಅವಳು ಸಂದೇಹ ಸ್ವಭಾವದವಳು. ನಾನು ಸೋತಾಗ ಎರಡು ಕಿ.ಮೀ. ವಾಕಿಂಗ್ ಹೋಗುತ್ತೇನೋ ಇಲ್ಲವೋ ನೋಡಲು ಅವಳೂ ದಿನಂಪ್ರತೀ ನನ್ನನ್ನು ಹಿಂಬಾಲಿಸಿಕೊಂಡು ಬರುತ್ತಿದ್ದಳು!

***

ಲೋನ್ ಕಥೆ 

ವೃದ್ದರೊಬ್ಬರು ಬ್ಯಾಂಕ್ ನಲ್ಲಿ ಒಂದು ಗಂಟೆಯಿಂದ ಹಣ ಡ್ರಾ ಮಾಡಲು ಕಾಯುತ್ತಿದ್ದುದನ್ನು ಕಂಡ ಯಂಗ್ ಮ್ಯಾನ್ ಒಬ್ರು ಅವರೊಡನೆ ಮಾತಿಗಿಳಿದಿದ್ದು ಹೀಗೆ..
” ಸಾರ್ …ಎ ಟಿ ಎಮ್ ಕಾರ್ಡ್ ಮಾಡಿಸಿ..ಹೀಗೆ ಕಾಯೋ ಅಗತ್ಯ ಇಲ್ಲ…
ಮನೇಲಿ ಕಂಪ್ಯೂಟರ್ ಇದೆಯಾ..”
” ಹೂಂ .ಇದೇ..ಯಾಕೆ..?

” ಒಂದ್ ಕೆಲಸ ಮಾಡಿ. ನೆಟ್ ಹಾಕಿಸಿಕೊಳ್ಳಿ… ಯಾವುದೇ ಬಿಲ್ ಆದ್ರೂ ನೆಟ್ ಬ್ಯಾಂಕ್ ಲಿ ಕಟ್ಟಬಹುದು..ಅಮೆಜಾನ್ಗೆ ಆರ್ಡರ್ ಮಾಡಿದ್ರೆ ನಿತ್ಯದ ಗ್ರಾಸರೀ ಮನೆಗೇ ಬರುತ್ತೆ..ಬಟ್ಟೆ ಕೊಳ್ಳಬೇಕಾ, ಔಷಧಿ ಬೇಕಾ, ಯಾರಿಗಾದ್ರು ಗ್ರೀಟಿಂಗ್ಸ್, ಗಿಫ್ಟ್ ಕಳಿಸಬೇಕಾ, ಎಲ್ಲ ನೆಟ್ಟಲ್ಲೇ ಮಾಡಬಹುದು..ವಯಸ್ಸಾದವರು …ಯಾಕೆ ಕಷ್ಟ ಪಡ್ತೀರಿ ..?
ಎಲ್ಲ ಕೇಳಿ ನಸುನಕ್ಕು ಹೇಳಿದರು ಆ ವೃದ್ಧರು…
” ಒಟ್ಟಿನಲ್ಲಿ ಮನೆಯಿಂದ ಹೊರಗೇ ಬರುವಂತಿಲ್ಲ.. ಒಂದು ಗಂಟೆಯಿಂದ ಇಲ್ಲಿ ಎಂಟು ಗೆಳೆಯರನ್ನು ಭೇಟಿಯಾಗಿದೀನಿ.ಕಷ್ಟ ಸುಖ ಹಂಚಿಕೊಂಡಿದೀನಿ.. ಕಳೆದ ವಾರ ರಸ್ತೆಯಲ್ಲಿ ಪ್ರಜ್ಞೆ ತಪ್ಪಿ ಬಿದ್ದ ನನಗೆ ಪ್ರಥಮ ಚಿಕಿತ್ಸೆ ಮಾಡಿದವ ನಾನು ಯಾವಾಗಲೂ ಭೇಟಿ ನೀಡೋ ಮೆಡಿಕಲ್ ಅಂಗಡಿಯವ. ಶುಗರ್ ಎಷ್ಟಿರುತ್ತದೆ ನಂಗೆ ಅಂತ ಅವನಿಗೆ ಗೊತ್ತಿತ್ತು.. ದೇವಸ್ಥಾನಕ್ಕೆ ಹೋಗಿದ್ದ ನನ್ನ ಹೆಂಡತಿ, ಜಾರಿ ಬಿದ್ದಾಗ, ಅವಳನ್ನು ಮನೆ ತಲುಪಿಸಿದವ ನಮ್ಮನೆಗೆ ತಿಂಗೊಳೊಗೊಮ್ಮೆ ದಿನಸಿ ತಲುಪಿಸುವ ಅಂಗಡಿಯ ಹುಡುಗ…ತಾತ ಅಜ್ಜಿ ಅಂತ ಕರೆದು ಪ್ರೀತಿಯಿಂದ ಮಾತಾಡಿಸೋ ಎಷ್ಟೋ ಮಕ್ಕಳು ಹೀಗೆ ಬ್ಯಾಂಕ್ ಅಂಗಡಿ ಪೋಸ್ಟ್ ಆಫೀಸ್ ಗಳಲ್ಲಿ ಪರಿಚಯ ಆದವರೇ… ಇದರಿಂದ ಒಂಟಿತನ ದೂರಾಗಿದೆ. ಸಾಮಾಜಿಕ ಭದ್ರತೆ ಸಿಕ್ಕಿದ
ನಿಮ್ಮ ಆ ಅಮೆಜಾನ್ ಇದನ್ನೆಲ್ಲ ಕೊಡುತ್ತಾ.???? ಅದು ವಸ್ತುಗಳನ್ನು ಮನೆಬಾಗಿಲಿಗೆ ತಲುಪಿಸುತ್ತೆ, ಹಣ ಕೊಟ್ಟರೆ …
ಸಂಬಂಧ ಗಳನ್ನಲ್ಲ…ಸಂಬಂಧ ಗಳು ಪ್ರೀತಿ ಸ್ನೇಹ ವಿಶ್ವಾಸಗಳು ಜನರ ಒಡನಾಟದಲ್ಲಿ ಪುಕ್ಕಟೆ ಸಿಗುತ್ತಲ್ಲಪ್ಪ….ಅದನ್ನ ಹೇಗೆ ಬಿಡಲಿ ….ಹೇಳು …” ಯಂಗ್ ಮ್ಯಾನ್ …ಮೂಕನಾದ…..

***

ರಾಜಧಾನಿ

ಟೀಚರ್ :- ಪಾಕಿಸ್ತಾನದ ರಾಜಧಾನಿ ಯಾವದು.?
ಗಾಂಪ :- ದೆಹಲಿ ಸರ್.
ಟೀಚರ್ :- ಅದೆಂಗೆ..?

ಗಾಂಪ :- ನೀವು ಎಂದಾದ್ರೂ ಭಾರತದ ರಾಜಧಾನಿ ದೆಹಲಿ ಪ್ರವಾಸಕ್ಕೆ ಹೋದ್ರೆ ಅವಾಗ ಗೊತ್ತಾಗುತ್ತೆ, ನೀವು
“ಶಹಜಹಾನ್” ರೋಡನಿಂದ ಹೊರಟು “ಅಕ್ಬರ್” ರೋಡ್ ಗೆ ಹೋಗ್ತೀರಿ, ಅಲ್ಲಿಂದ ಮುಂದೆ ಹೋಗಿ “ಬಾಬರ್” ರಸ್ತೆಗೆ ತಿರುಗಿ ನೇರವಾಗಿ “ಹುಮಾಯುನ್” ರಸ್ತೆ ಕಡೆಗೆ ಹೋದ್ರೆ ಸರ್ಕಲ್ ಸಿಗುತ್ತೆ ಅಲ್ಲಿಂದ ಎಡಕ್ಕೆ ತಿರುಗಿ ಹೊರಟ್ರೆ ನೇರವಾಗಿ “ತುಘಲಕ್” ಲೇನಲ್ಲಿ ಎಂಟ್ರಿ ಕೊಡ್ತೀರಾ,ಅಲ್ಲಿಂದ “ಔರಂಗಜೇಬ” ರೋಡ್ ಮುಂದೆ ಹೊರಟ್ರೆ “ಸಫ್ದರಜಂಗ್” ರೋಡ್ ಬರುತ್ತೆ ಅಲ್ಲಿಂದ “ತುಘಲಕಾಬಾದ್” ಮತ್ತು”ಜಾಮಿಯಾ ನಗರ್” ಕ್ರಾಸ್ ಮಾಡಿ ನೇರವಾಗಿ “ಕುತುಬಮಿನಾರ್”ವರೆಗು ಹೋಗೊ ಅಷ್ಟೊತ್ತಿಗೆ, ಇದ್ದ ಪ್ರಶಾಂತ ವಾತಾವರಣ ಕುಲಗೆಟ್ಟು ಹೋಗಿ ಉಸಿರುಗಟ್ಟೋ ಥರಾ ಆಗ್ತಿದ್ರೆ, ನೀವು ಅಲ್ಲಿಂದ ಸೀದಾ “ನಿಜಾಮುದ್ದೀನ್” ರೈಲ್ವೆ ಸ್ಟೇಷನ್ಗೆ ಹೋಗಿ ನಿಮ್ಮೂರಿನ ಟ್ರೇನ್ ಹತ್ತಿ ನೇರವಾಗಿ ಮನೆಗೆ ಬಂದುಬಿಟ್ಟು ಕುತ್ಕೊಂಡು ಗಂಭೀರವಾಗಿ ವಿಚಾರ ಮಾಡಿ ಹೇಳ್ರಿ “ದೆಹಲಿ” ಭಾರತದ ರಾಜಧಾನಿನಾ ಇಲ್ಲಾ ಪಾಕಿಸ್ತಾನದ ರಾಜಧಾನಿನಾ ಅಂತಾ…?

***

ಆಫರ್ ಚೆನ್ನಾಗಿದೆ. 

ಬಾಸ್ ತನ್ನ ಕಂಪನಿಯಲ್ಲಿರುವ ಕೆಲಸಗಾರರಿಗೆಲ್ಲ ಒಂದು ಸ್ಪರ್ಧೆ ಏರ್ಪಡಿಸಿರುತ್ತಾನೆ, ಒಂದು ನೀರಿನ ಹೊಂಡ ಅದರಲ್ಲಿ ಹತ್ತಾರು ಮೊಸಳೆಗಳು , ಈ ಕಡೆಯಿಂದ ಆ ಕಡೆ ಯಾರು ಜೀವಂತವಾಗಿ ಹೋಗಿ ತಲುಪುತ್ತಾರೋ ಅವರಿಗೆ ೫೦ ಲಕ್ಷ ಬಹುಮಾನ ಆತ ಮೊಸಳೆಗಳಿಂದ ಸತ್ತರೆ ೧೦ ಲಕ್ಷ ಹಣ ವಾರಸುದಾರರಿಗೆ ಅಂತ ಇರುತ್ತದೆ.

ಎಲ್ಲ ಆಫೀಸ್ ಸ್ಟಾಫ್ ನವರು ನಿಂತು ನೋಡುತ್ತಾರೆ ಹೊರತು ಯಾರು ಹೊಂಡದಲ್ಲಿ ಜಿಗಿಯುವುದಿಲ್ಲ. ಅಷ್ಟರಲ್ಲಿ ಒಬ್ಬ ಜಿಗಿದೆ ಬಿಡುತ್ತಾನೆ ಹಾಗೂ ಮೊಸಳೆಗಳ ಮಧ್ಯದಿಂದ ಅದೆಂಗೋ ಕಷ್ಟ ಪಟ್ಟು ಆ ದಡಕ್ಕೆ ಹೋಗಿ ತಲುಪುತ್ತಾನೆ.
ಎಲ್ಲರೂ ಶುಭಾಶಯ ಕೋರುತ್ತಾರೆ.

ಆಗ ಆ ವ್ಯಕ್ತಿ ಕೂಗಿ ಹೇಳುತ್ತಾನೆ “ಯಾರು ನನ್ನ ನೂಕಿದ್ದು”

ಆಗ ಅವನ ಹೆಂಡತಿ ಹೇಳ್ತಾಳೆ ” ನಾನೇರಿ…..ಗೆದ್ರೆ ೫೦ ಲಕ್ಷ ಸೋತರೆ ೧೦ ಲಕ್ಷ ಆಫರ್ ಚೆನ್ನಾಗಿದೆ ಅನ್ನಿಸ್ತು. ಅದ್ಕೆ ಪುಶ್ ಮಾಡ್ದೇರಿ. ಅವಾಗಿನಿಂದಲೇ ಈ ನಾಣ್ನುಡಿ ಜಾರಿಗೆ ಬಂತು “Behind every successful man there is women”

***

(ಸಂಗ್ರಹ)

ಚಿತ್ರ ಕೃಪೆ: ಅಂತರ್ಜಾಲ ತಾಣ