’ಱ’ ಮತ್ತು ’ೞ’ ಕುಱಿತು ಮತ್ತಷ್ಟು ಬೆಳಕು.
ಇದನ್ನ ವಸಿ ನೋಡಿ. ಆಮೇಲೆ ನಿಮ್ಮ ಅಭಿಪ್ರಾಯ ತಿಳಿಸಿ
’ಱ’ ಕಾರಕ್ಕೆ
ಕನ್ನಡಕಂದ ಬಱಿ ’ಱ’ ಮತ್ತು ’ೞ’ ಕುಱಿತೇ ಮಾತಾಡುತ್ತಾನೆ. ಅವನಿಗೇನ್ ಬೇಱೆ ಕೆಲಸವಿಲ್ಲವಾ? (ನೀವು ಅಸಡ್ಡೆ ತೋಱಿ ಈ ’ಬಱಿ’ ಮತ್ತು ’ಬೇಱೆ’ ಶಬ್ದಗಳನ್ನು ನಾಲಿಗೆ ನಡುಗಿಸಿ ಉಲಿಯುತ್ತೀರಾ?
ಅಂತಹ ಕಱ್ಱನೆ ಕಱಿಯನ್ನ ಹೇಗೆ ಮದುವೆಯಾಗಲಿ ಹೇೞೆ?
ಇದೊಂದು ಮಗು ಬಱಿ ’ಬಟಱ್’ ಅಂತ ಭೇದಿ ಮಾಡಿಕೊಳ್ಳುತ್ತೆ. ಕಿಱ್ ಅಂತ ಕಿಱುಚತ್ತೆ.
ಅವನ್ಣ ನೋಡು ಹೇಗೆ ಮಜ್ಜಿಗೆಯನ್ನು ಸುಱ್ ಅಂತ ಸುಱಿತಾನೆ. ಹಾಗೇ ಗೊಱ್ ಅಂತ್ನೂ ಗೊಱಕೆ ಹೊಡೆಯುತ್ತಾನೆ. ಅದಕ್ಕೇ ಏನೋ ಈ ಗಾದೆಯೇನೋ? ’ಸುಱಿದುಣ್ಣಬೇಕು. ಗೊಱೆದು ನಿದ್ದೆ ಮಾಡಬೇಕು’. (ಇಲ್ಲಿ ಸುಱಿ ಎಂದರೆ ಸುಱ್ ಅಂತ ಹೀರು)
ಹಕ್ಕಿ ಪುಱ್ ಎಂದು ಹಾಱಿತು.
ಬಸು ಬುಱ್ ಎಂದು ಹೊಱಟಿತು.
ಮಗು ಪಱ್ ಎಂದು ಹಾಳೆ ಹಱಿಯಿತು.
ೞ ಕಾರಕ್ಕೆ
ಗೞಗೞನೆ ಗುೞುಗುೞುವೆನುತುಂ ಪರಿವವೊನಲ್ ಸೊಗಯಿಸುಗುಂ
ಪೆರ್ಜುೞಿಯೊಳ್ ಪೊೞೆ ಜುೞುಜುೞುವೆನುತುಂ ಪರಿವುದು
ಗೞಗೞನೆ ಗೞಪುವನ ನುಡಿಗೇಳವೇಡ.
ಪೞಪೞವೆಂದು ಗಾಜು ಒಡೆಯಿತು
ಗಗನಸ್ಥಳದಿಂದುಡುಗಳ್ ಪೞಪೞನುದುರ್ವವೊಲ್ ಎಡೆವಿಡದಿೞಿವ ಆಲಿವರಲ ಮೞೆ.
(ಆಕಾಶದಿಂದ ನಕ್ಶತ್ರಗಳು ಪೞಪೞನೆ ಉದುರುವ ಹಾಗೆ ಆಲಿಹರಳ (ಆಲಿಕಲ್ಲಿನ) ಮೞೆ.
ಇಲ್ಲಿನ ಱ ಉಚ್ಚರಿಸುವಾಗ ನಾಲಿಗೆ ನಡುಗಬೇಕು. ಹಾಗೆಯೇ ’ೞ’ ಉಚ್ಚರಿಸುವಾಗ ನಾಲಿಗೆ ಅಂಗುಳಿನ ಹತ್ತಿರವಿರಬೇಕು (ಲ ಹಲ್ಲಿಗೆ ತಾಗುತ್ತದೆ. ಳ ತುಂಬಾ ಮೇಲಕ್ಕೆ ಹೋಗಿ ಸುರುಳಿಗೊಳ್ಳುತ್ತೆ. ’ೞ’ ದ ಉಚ್ಚಾರ ಸ್ಥಾನ ’ಲ’ ಮತ್ತು ’ಳ’ ನಡುವೆ. ಹೆಚ್ಚು ಕಡಿಮೆ ಅಂಗುಳಿನ ಬೞಿ ನಾಲಿಗೆ ತಾಗಬೇಕು. ಇನ್ನೂ ಮೇಲಕ್ಕೆ ಹೋಗಬಾರದು.
Comments
ಉ: ’ಱ’ ಮತ್ತು ’ೞ’ ಕುಱಿತು ಮತ್ತಷ್ಟು ಬೆಳಕು.