2 ರೂಪಾಯಿಗೆ ಅಕ್ಕಿ ಕೊಟ್ರೆ ಸಾಕಾ?
ಚುನಾವಣಾ ಇನ್ನೇನು ತಲೆ ಮೇಲಿದೆ, ರಾಜಕಾರಣಿಗಳು ಕಾಲ ಬುಡದಲ್ಲಿದ್ದಾರೆ. ಒಬ್ಬರು ಟಿ.ವಿ ಕೊಡ್ತೀನಿ ಅಂತಾರೆ, ಇನ್ನೊಬ್ರು ೨ ರೂಪಾಯಿಗೆ ಅಕ್ಕಿ ಕೊಡ್ತೀನಿ ಅಂತಾರೆ, ಆದ್ರೆ ಯೋಚನೆ ಮಾಡಿದ್ರೆ ಯಾವ ನನ್ನ ಮಕ್ಕಳಿಗೂ ಒಂದು ದೊಡ್ಡ ಕನಸಿಲ್ಲ, ಒಂದು ದೊಡ್ಡ ಗುರಿ ಇಲ್ಲ. ೨ ರೂಪಾಯಿಗೆ ಅಕ್ಕಿ ಕೊಡ್ತೀನಿ ಅನ್ನೋನು ಅದೇ ಬಡವನಿಗೆ ೨೦೦ ರೂಪಾಯಿ ದುಡಿಯೋ ಶಕ್ತಿ ಬರೋ ಹಾಗ್ ಮಾಡ್ತೀನಿ ಅನ್ನಲ್ಲ...
ಬರಲಿರುವ ಸರ್ಕಾರ ಯಾರದೇ ಆಗಿದ್ರು ಸೋಲೋನು ಮತದಾರನೆ ಅನ್ಸುತ್ತೆ. ಆದರೂ ಕಳ್ಳರಲ್ಲೇ ಕಡಿಮೆ ಕಳ್ಳನ್ನ ಹುಡುಕಿ ಮತ ಹಾಕ್ಬೇಕು ಅನ್ಸುತ್ತೆ.
ಎಲ್ಲ ರಾಜಕೀಯ ಪಕ್ಷಗಳ ಪ್ರಣಾಳಿಕೆ ಅನ್ನೋ ದೊಂಬರಾಟ ನೋಡಿ ಬೇಜಾರ ಆಗೊವಾಗ್ಲೆ, ಸರಿ ಅಂತರ್ಜಾಲದಲ್ಲಿ ಕುತಿರೋ ಬುದ್ದಿವಂತ ಕನ್ನಡಿಗರು ಚುನಾವಣೆ ಬಗ್ಗೆ, ಪಕ್ಷಗಳ ಬಗ್ಗೆ ಏನ್ ಮಾತಾಡ್ತಾ ಇದ್ದಾರೆ ನೋಡೋಣ ಅಂತ ಹುಡುಕಾಟದಲ್ಲಿದ್ದಾಗ ಈ ಬ್ಲಾಗ್ ಕಂಡಿತು:
http://karnatique.blogspot.com/2008/05/dear-next-government-twenty-things-that.html
ಕೆಲವೊಂದಿಷ್ಟು ಅಂಶಗಳು ತುಂಬ unique ಅನ್ನಿಸ್ತು. ಕನ್ನಡ ಕೇಂದ್ರಿತ ರಾಜಕೀಯ ಮಾಡೋದು ನಮ್ಮ ನಾಡಿಗೆ ಬೇಕಾ ಅಂತ ನನಗೂ ಸಾಕಷ್ಟು ಸಾರಿ ಅನ್ನಿಸಿತ್ತು, ಯಾಕೋ ನಮ್ಮೆಲ್ಲ ಸಮಸ್ಯೆಗೆ ಅದೇ ಪರಿಹಾರ ಅಂತಾನೂ ಅನ್ನಿಸ್ತು. ನಿಮಗೇನು ಅನ್ನಿಸುತ್ತೆ ಸ್ನೇಹಿತರೇ?