2014 ರ ಯಳವತ್ತಿ ಟ್ವೀಟುಗಳು
1) ಯಳವತ್ತಿ ಟ್ವೀಟ್:- ನಾನು ಮತ್ತು ನೀನು ದೂರವಾಗಿದ್ದನ್ನು ಸಹಿಸಲಾಗದೇ, ನಾವಿಬ್ಬರೂ ದ್ವೇಷಿಸುತ್ತಿದ್ದ ವಿರಹವು ನೊಂದು ಆತ್ಮಹತ್ಯೆ ಮಾಡಿಕೊಂಡಿದೆ..
2) ಯಳವತ್ತಿ ಟ್ವೀಟ್:- ಪ್ರಪಂಚದ ಈಗಿನ ವಿಶ್ವ ಸುಂದರಿ ಯಾರು ಅಂತಾ ಕೇಳಿದರು. ನಿನ್ನ ಬಿಟ್ಟು ಬೇರೆ ಯಾರೂ ನೆನಪಾಗಲಿಲ್ಲ ಕಣೇ ಹುಡುಗಿ..
Moral: ನನಗೆ ಸುಳ್ಳು ಹೇಳೋದಕ್ಕೂ ಕೂಡಾ ಲಿಮಿಟ್ ಇಲ್ಲ.
3) ಯಳವತ್ತಿ ಟ್ವೀಟ್:- ಹೇ ಹುಡುಗಿ, ನಾನು ನಿನಗೆ ಫೇಸ್ ಬುಕ್ ನಲ್ಲಿ ಫ್ರೆಂಡ್ ಶಿಪ್ ರಿಕ್ವೆಸ್ಟ್ ಕಳಿಸಿದೆ ಅಂತಾ ಬೀಗಬೇಡ.. ನನಗೆ ಹುಡುಗಿಯರ ಹುಚ್ಚು ಇಲ್ಲ. ನಿನ್ನ ಹೆಸರಿನ ಹುಚ್ಚು ಹಿಡಿದಿದೆ ಅಷ್ಟೇ..
4) ಯಳವತ್ತಿ ಟ್ವೀಟ್:-ಮರೆಯಬೇಕೆಂದು ಹಠ ಹಿಡಿದು ಕಳೆದುಕೊಂಡ ನೆನಪುಗಳೆಂಬ ದುಃಖಗಳನ್ನೆಲ್ಲಾ ಮತ್ತೆ ಕಣ್ಣೀರಿನ ರೂಪದಲ್ಲಿ ಒತ್ತಿ ತರಿಸಿದ್ದು ಈ ಆರ್ಕುಟ್.. i hate you.. i Love You..
5) ಯಳವತ್ತಿ ಟ್ವೀಟ್:- ಪರಿಚಯದವರೊಬ್ಬರು ಇವತ್ತು ನನ್ನನ್ನು ಕೇಳಿದರು.. ಎಲ್ಲಾ ಕಡೆ ಫುಟ್ಬಾಲ್ ಜ್ವರ ಇದೆ. ನಿಮಗೆ ಇಲ್ವಾ? ಅಂತಾ.. ನಾನು ಇಲ್ಲಾ ಅಂದೆ.
ಹಾಗಾದ್ರೆ ನಿಮಗೆ ಕ್ರಿಕೆಟ್ ಜ್ವರ ಮಾತ್ರ ಇದೆಯಾ ಅಂತಾ ಕೇಳಿದ್ರು..
ನಾನು ಹೇಳಿದೆ "ಮೊದಲು ಇತ್ತು. ಸಚಿನ್ ರಿಟೈರಾದ ಮೇಲೆ ಬಿಟ್ಟು ಹೋಯ್ತು."
ಸಚಿನ್ ರ ಅಭಿಮಾನಿಗಳೆಲ್ಲರಿಗೂ ವಂದನೆಗಳು
6) ಯಳವತ್ತಿ ಟ್ವೀಟ್:-
ಹುಡುಗಿ: ಫೇಸ್ ಬುಕ್ ನಲ್ಲಿ ನನಗೆ ಯಾಕೆ ಫ್ರೆಂಡ್ ರಿಕ್ವೆಸ್ಟ್ ಕಳಿಸಿದ್ರಿ? ನಾನು ಸುಂದರವಾಗಿದ್ದೀನಿ ಅಂತಾನಾ?
ನಾನು: ಹಾಗೇನಿಲ್ಲ.. ಫೇಸ್ ಬುಕ್ ನಿಮ್ಮನ್ನು ಫ್ರೆಂಡ್ ಮಾಡ್ಕೊ ಅಂತಾ ತುಂಬಾನೇ ಸಲ ಸಜೆಷನ್ ಕೊಡ್ತಾ ಇತ್ತು.. ಫೇಸ್ ಬುಕ್ ನ ಮನಸ್ಸು ನೋಯಿಸೋಕೆ ನನಗೆ ಇಷ್ಟ ಆಗಲಿಲ್ಲ ..
ಮೂಲ ಲೇಖನ: www.shivagadag.blogspot.com