ನಿಷ್ಪಾಪಿ ಸಸ್ಯಗಳು (ಭಾಗ ೮೦) - ಸರೊಳಿ ಗಿಡ
18 hours 55 minutes ago - ಬರಹಗಾರರ ಬಳಗನಿಮ್ಮ ಮನೆಯಲ್ಲಿ ದನ ಕರುಗಳು ಇದ್ದರೆ ಅವುಗಳನ್ನು ಗುಡ್ಡದ ತಪ್ಪಲಿಗೆ ಅಥವಾ ಹುಲ್ಲಿನ ಗದ್ದೆಗಳಿಗೆ ಕೊಂಡೊಯ್ದು ಮೇಯಿಸುವ ಅವಕಾಶ ನಿಮಗೆ ಸಿಕ್ಕರೆ ಯಾವತ್ತೂ ಕಳೆದುಕೊಳ್ಳದಿರಿ. ಏಕೆಂದರೆ ಅವುಗಳು ತನ್ಮಯತೆಯಿಂದ ಮೇಯುವುದನ್ನು ಕಾಣುವುದೇ ಒಂದು ಸೊಗಸು!. ಮಾತ್ರವಲ್ಲ, ಹುಲ್ಲು ಮೇಯುತ್ತಾ ಸನಿಹವಿರುವ ಪೊದರುಗಳ ನಡುವೆ ಮುಖವನ್ನು ತೂರಿಸಿ ಕಣ್ಣುಗಳನ್ನು ಮುಚ್ಚಿ ತೆರೆಯುತ್ತಾ ಮುಳ್ಳೇನಾದರೂ ಚುಚ್ಚೀತೆಂಬ ಅಳುಕಿನಿಂದಲೇ ನಾಲಿಗೆ ಚಾಚಿ ಹಸಿರೆಲೆಗಳನ್ನು ಎಳೆದುಕೊಂಡು ತಿನ್ನುವುದಷ್ಟೇ ಅಲ್ಲ ಅವುಗಳು ಆಸ್ವಾದಿಸುವುದನ್ನು ನೋಡಿಯೇ ತಿಳಿಯಬೇಕು. ಹೀಗೆ ತಿನ್ನುವಾಗ ಅವುಗಳಿಗೆ ಹಿತವೆನಿಸುವುದು ಸರೊಳಿ ಎಂಬ ನಿಷ್ಪಾಪಿ ಸಸ್ಯದ ಅದ್ಭುತ ಹಸಿರೆಲೆಗಳು!.
ಸಾಮಾನ್ಯವಾಗಿ ಎಲ್ಲ ಕಡೆಯೂ ಕಾಣಸಿಗುವ ಗಿಡ ಈ ಸರೊಳಿ. ಮಹಾರಾಷ್ಟ್ರ ದಿಂದ ಕನ್ಯಾಕುಮಾರಿಯವರೆಗೆ ಹಬ್ಬಿನಿಂತ ಪಶ್ವಿಮ ಘಟ್ಟ ಅಥವಾ ಸಹ್ಯಾದ್ರಿ ಪರ್ವತಶ್ರೇಣಿಯ ಉದ್ದಗಲಕ್ಕೂ ಈ ಸರೊಳಿ ಸ್ಥಳೀಯವಾಗಿದೆ. ವಿಶ್ವದ ಅತ್ಯಂತ ಸಕ್ರಿಯ ಜೀವವೈವಿಧ್ಯ ನೆಲೆಗಳಲ್ಲಿ ಒಂದಾಗಿರುವ ಈ ಭಾಗ 1273 ಸಸ್ಯಗಳಿಗೆ ತವರಾಗಿದೆ. ಪಳೆಯುಳಿಕೆ ಪುರಾವೆಗಳ ಆಧಾರದ ಮೇಲೆಯೂ ಇದರ ಕುಲ ಭಾರತೀಯ ಉಪಖಂಡದಲ್ಲಿ ಮೂಲವನ್ನು ಹೊಂದಿರುವುದೇ ಅಲ್ಲದೆ ಇಲ್ಲಿಂದಲೇ ಆಗ್ನೇಯ ಏಷ್ಯಾಕ್ಕೆ ಹಬ್ಬಿದೆ ಎನ್ನುತ್ತಾರೆ. ಸಾಮಾನ್ಯವಾಗಿ ಪತನ ಶೀಲ ಕಾಡು, ತೆರೆದ ಕಲ್ಲಿನ ಮೈದಾನ, ನದಿಯ ಹರಿವಿನ ಇಕ್ಕೆಲ, ಗದ್ದೆ ತೋಟಗಳ ಸುತ್ತಮುತ್ತ ಈ ಸರೊಳಿ ಬೆಳೆದು ನಿರ್ಲಿಪ್ತವಾಗಿ ನಿಂತಿರುತ್ತದೆ.
ಕನ್ನಡದಲ್ಲಿ ಸರೊಳಿ, ಅಕರ್ಕಲ್, ಸಾಲಿ, ಸರಳಿ, ಸುಳ್ಳ ಎಂದು ಕರೆಯಲ್ಪಡುವ ಸಸ್ಯ ತುಳುವಿನಲ್ಲಿ ತರೊಳಿ ಎಂದೇ ಚಿರಪರಿಚಿತವಾಗಿದೆ. ಕೊಂಕಣಿಯಲ್ಲಿ ಸಾಲಾ ಸಾಲಾ, ಸಾಲ್ ಸಾಲ್ ಎಂದೂ ಮಲಯಾಳಂ ನಲ್ಲಿ ವೇಟ್ಟಿ ವೆಟ್ಟಿ… ಮುಂದೆ ಓದಿ...