ಮೆಂತ್ಯೆಸೊಪ್ಪು ತಾಲಿಪಟ್ಟು

ಬೇಕಿರುವ ಸಾಮಗ್ರಿ
ಮೈದಾ ಹಿಟ್ಟು ೧ ಕಪ್, ಕಡಲೆಹಿಟ್ಟು ೧ ಕಪ್, ಸಣ್ಣಗೆ ಹೆಚ್ಚಿದ ಈರುಳ್ಳಿ - ೧ ಕಪ್, ಸಣ್ಣಗೆ ಹೆಚ್ಚಿದ ಮೆಂತ್ಯೆ ಸೊಪ್ಪು ೧ ಕಪ್, ಹಸಿ ಶುಂಠಿ ಸ್ವಲ್ಪ, ಕೊತ್ತ್ರಂಬರಿ ಸೊಪ್ಪು ಸ್ವಲ್ಪ, ಜೀರಿಗೆ ಹುಡಿ - ೧ ಕಪ್, ಇಂಗು ಚಿಟಿಕೆ, ಹಸಿ ಮೆಣಸಿನಕಾಯಿ ಪೇಸ್ಟ್ ಸ್ವಲ್ಪ, ಎಣ್ಣೆ - ಅರ್ಧ ಕಪ್, ರುಚಿಗೆ ತಕ್ಕಷ್ಟು ಉಪ್ಪು.
ತಯಾರಿಸುವ ವಿಧಾನ
ಮೈದಾ ಮತ್ತು ಕಡಲೆ ಹಿಟ್ಟಿಗೆ ಹೆಚ್ಚಿದ ಮೆಂತ್ಯೆ ಸೊಪ್ಪು, ಉಪ್ಪು, ಇಂಗು, ಜೀರಿಗೆ ಹುಡಿ, ಹಸಿ ಮೆಣಸಿನಕಾಯಿ ಪೇಸ್ಟ್, ಶುಂಠಿ ಪೇಸ್ಟ್, ಈರುಳ್ಳಿ, ಕೊತ್ತಂಬರಿ ಸೊಪ್ಪನ್ನು ಹಾಕಿ ಚೆನ್ನಾಗಿ ನಾದಬೇಕು. ಕಲಸಿದ ಹಿಟ್ಟನ್ನು ಹತ್ತು ನಿಮಿಷ ನೆನೆದ ನಂತರ ಚಪಾತಿಯ ಆಕಾರದಲ್ಲಿ ಲಟ್ಟಿಸಿ ಎಣ್ಣೆ ಹಾಕಿ ಬೇಯಿಸಿ. ರುಚಿಯಾದ ಮೆಂತ್ಯೆಸೊಪ್ಪು ತಾಲಿಪಟ್ಟು ತಿನ್ನಲು ತಯಾರು. ಇದನ್ನು ಆಲೂಗಡ್ಡೆ ಪಲ್ಯ ಅಥವಾ ಉಪ್ಪಿನಕಾಯಿ ಜೊತೆ ತಿನ್ನಲು ಬಹಳ ರುಚಿಕರ.