ಚರೋಟಿರವೆಯನ್ನು ಸಣ್ಣ ಉರಿಯಲ್ಲಿ ಕಮ್ಮಗೆ ಹುರಿಯಬೇಕು, ೧೦ ನಿಮಿಷ ದಪ್ಪ ಅವಲಕ್ಕಿ ನೀರಿನಲ್ಲಿ ನೆನಸಿಡಿ. ದಪ್ಪ ತಳದ ಪಾತ್ರೆಯಲ್ಲಿ ನೀರು, ಹಾಲು, ಮೊಸರು, ಸಕ್ಕರೆ ಬೆರಸಿ ಸಣ್ಣ ಉರಿಯಲ್ಲಿ ಕೈ ಆಡಿಸುತ್ತಾ ಕುದಿಸಿ, ಹುರಿದ ರವೆ ಹಾಕಿ ಬೇಯುವ ತನಕ ಮಗುಚಬೇಕು. ಇದಕ್ಕೆ ನೆನಸಿದ ಅವಲಕ್ಕಿ…
ರುಚಿ ಸಂಪದ
ಹಾಲನ್ನು ಚೆನ್ನಾಗಿ ಕುದಿಸಿ ಆರಿಸಿ. ಬೆಣ್ಣೆ ಹಣ್ಣಿನ ತಿರುಳನ್ನು ತೆಗೆದು ಮಿಕ್ಸಿಯಲ್ಲಿ ತಿರುವಿ ಕುದಿಸಿಟ್ಟ ಹಾಲಿಗೆ ಸೇರಿಸಿ ಸಕ್ಕರೆ, ಏಲಕ್ಕಿ ಪುಡಿ ಎಲ್ಲ ಹಾಕಿ ಚೆನ್ನಾಗಿ ಕದಡಿ. ಫ್ರಿಜ್ನ ಫ್ರೀಜರ್ನಲ್ಲಿರಿಸಿ ಗಟ್ಟಿ ಆಗುವಾಗ ತಿನ್ನಿ. ಬಹಳ ರುಚಿಯಾಗಿರುವ ಈ ಐಸ್ಕ್ರೀಮನ್ನು…
0ಬಾಳೆಹಣ್ಣಿನ ತಿರುಳಿಗೆ ಉಪ್ಪು, ಸಕ್ಕರೆ, ೧ ಚಮಚ ಎಣ್ಣೆ, ಚಿಟಿಕೆ ಸೋಡಾ, ಮೈದಾ ಸೇರಿಸಿ ಚೆನ್ನಾಗಿ ಕಲಸಿ. ೭-೮ ಗಂಟೆ ಬಿಟ್ಟು ತಟ್ಟಿ, ಎಣ್ಣೆಯಲ್ಲಿ ಕರಿಯಿರಿ. ಇದನ್ನು ಯಾವುದೇ ಸಾಂಬಾರ್ ಜೊತೆ ತಿನ್ನಬಹುದು. ಅಥವಾ ಟೀ, ಕಾಫಿ ಜೊತೆ ಹಾಗೆಯೇ ತಿನ್ನಲೂ ಚೆನ್ನಾಗಿರುತ್ತದೆ. ಇದು ಕರಾವಳಿ…
0ಬ್ರೆಡ್ ಹುಡಿ ಮತ್ತು ಹಾಲನ್ನು ಚೆನ್ನಾಗಿ ಬೆರೆಸಿ. ಸಕ್ಕರೆ ಮತ್ತು ಕಾಯಿತುರಿಯನ್ನು ಸಣ್ಣ ಉರಿಯಲ್ಲಿ ಏಳೆಂಟು ನಿಮಿಷ ಹುರಿಯಿರಿ. ಬಳಿಕ ಬ್ರೆಡ್ ಹುಡಿ ಮಿಶ್ರಣವನ್ನು ಸೇರಿಸಿ, ಬೆರೆಸಿ. ಮಿಶ್ರಣವು ಬದಿ ಬಿಡಲು ಆರಂಭಿಸಿದಾಗ ಎರಡು ಚಮಚ ತುಪ್ಪ ಸೇರಿಸಿ ಕೈಯಾಡಿಸಿ. ಒಂದು ಸ್ಟೀಲ್ ತಾಟಿಗೆ ಉಳಿದ ತುಪ್ಪ ಸವರಿ…
0ಅರ್ಧ ಕಪ್ ನೀರನ್ನು ಕುದಿಯಲು ಇಟ್ಟು ಕೂವೆ ಪುಡಿಯನ್ನು ಅದಕ್ಕೆ ಹಾಕಿ ಸಣ್ಣ ಉರಿಯಲ್ಲಿ ತಿರುವುತ್ತಾ ಇರಿ. ಅರ್ಧ ಬೆಂದ ಬಳಿಕ ಹಾಲು ಹಾಕಿ ತಿರುಗಿಸಿ. ನಂತರ ಸಕ್ಕರೆ ಹಾಕಿ ಕದಡಿ. ಆಮೇಲೆ ಏಲಕ್ಕಿ ಪುಡಿ ಹಾಕಿ. ಹಲ್ವ ತಳ ಬಿಟ್ಟುಕೊಂಡು ಬರುವಾಗ ಎರಡು ಚಮಚ ತುಪ್ಪ ಹಾಕಿ ಕದಡಿ. ಬೆಂದ…
0ಕಡಲೆ ಹಿಟ್ಟನ್ನು ಸ್ವಲ್ಪ ತುಪ್ಪದಲ್ಲಿ ಪರಿಮಳ ಬರುವಷ್ಟು ಹುರಿಯಿರಿ. ಅದಕ್ಕೆ ಏಲಕ್ಕಿ ಪುಡಿ ಮತ್ತು ತುಪ್ಪದಲ್ಲಿ ಹುರಿದ ಗೋಡಂಬಿಯನ್ನು ಹಾಕಿ ಕಲೆಸಿ. ಸಕ್ಕರೆ ಮುಳುಗುವಷ್ಟು ನೀರು ಹಾಕಿ ಎಳೆಪಾಕ ಮಾಡಿಕೊಳ್ಳಿ. ಹಿಟ್ಟು ಬಿಸಿಯಿರುವಾಗಲೇ ಸಕ್ಕರೆ ಪಾಕ ಹಾಕಿ ಚೆನ್ನಾಗಿ ಮಗುಚಿ. ಅದು…
0ಸಣ್ಣಗೆ ಹೆಚ್ಚಿದ ಖರ್ಜೂರ, ಗೋಡಂಬಿ ತುಂಡು, ಬಾದಾಮಿ ತುಂಡುಗಳನ್ನು ಬೇರೆ ಬೇರೆಯಾಗಿ ಸ್ವಲ್ಪ ತುಪ್ಪದಲ್ಲಿ ಹುರಿದು ಒಣ ಕೊಬ್ಬರಿ, ಏಲಕ್ಕಿ ಪುಡಿ ಸೇರಿಸಿ ಚೆನ್ನಾಗಿ ಕಲಸಿ. ಬಾಣಲೆಯಲ್ಲಿ ತುಪ್ಪ ಕಾಯಲಿರಿಸಿ ಸಕ್ಕರೆ ಹಾಕಿ ಕದಡಿ ನಂತರ ಮಿಶ್ರಣ ಮಾಡಿರಿಸಿದ ಸಾಮಗ್ರಿ ಸೇರಿಸಿ ತಿರುವಿ…
0೩ ಗಂಟೆ ಮೊದಲೇ ನೆನೆ ಹಾಕಿದ ಬೆಳ್ತಿಗೆ ಅಕ್ಕಿಯನ್ನು ದೀವಿ ಹಲಸಿನ ಹೋಳು, ಜೀರಿಗೆ, ಕುಂಟೆ ಮೆಣಸು, ಉಪ್ಪು ಹಾಕಿ ಗಟ್ಟಿಗೆ ನುಣ್ಣಗೆ ರುಬ್ಬಿ ವಡೆಯಂತೆ ತಟ್ಟಿ ಕರಿಯಿರಿ. ಬಿಸಿಬಿಸಿ ತಿನ್ನಲು ರುಚಿ.
…0ಒಂದು ದೊಡ್ಡ ಪಾತ್ರೆಯಲ್ಲಿ ಬೆಲ್ಲ, ಹುಣಸೆ, ಖರ್ಜೂರ, ಏಲಕ್ಕಿ, ಶುಂಠಿ ಹುಡಿ, ಮೆಣಸಿನ ಹುಡಿ, ಓಂ ಕಾಳು, ಮಸಾಲಾ ಎಲೆ, ಉಪ್ಪು ಮತ್ತು ನೀರು ಸೇರಿಸಿ ದೊಡ್ದ ಉರಿಯಲ್ಲಿ ೨೦-೨೫ ನಿಮಿಷ ಕುದಿಸಿರಿ. ಒಂದು ಸಣ್ಣ ಕಾವಲಿಯಲ್ಲಿ ಎಣ್ಣೆ ಬಿಸಿ…
0ಪಾತ್ರೆಗೆ ಹೆಚ್ಚಿದ ಮಾವಿನಹಣ್ಣು, ಬೆಲ್ಲದ ಪುಡಿ, ಸಕ್ಕರೆ ಸೇರಿಸಿ ಚೆನ್ನಾಗಿ ಮಿಶ್ರಮಾಡಿ. ನಂತರ ಇದಕ್ಕೆ ದಪ್ಪ ತೆಂಗಿನಹಾಲು ಹಾಗೂ ಚಿಟಿಕೆ ಉಪ್ಪು ಸೇರಿಸಿ. ಕೊನೆಗೆ ಎಳ್ಳು ಹುರಿದು ಹಾಕಿ. ಈಗ ರುಚಿಯಾದ ಮಾವಿನಹಣ್ಣಿನ ರಸಾಯನ ರೆಡಿ. ಇದನ್ನು ಹಾಗೆಯೇ ಕುಡಿಯಬಹುದು. ಇಲ್ಲವೇ ಇಡ್ಲಿ,…
0