ಬ್ರೆಡ್ ಪುಡ್ಡಿಂಗ್

ಬೇಕಿರುವ ಸಾಮಗ್ರಿ
ಸಣ್ಣ ಚೌಕಾಕಾರದ ತುಂಡುಗಳನ್ನಾಗಿ ಮಾಡಿದ ಬ್ರೆಡ್ ಹಾಳೆಗಳು ೩, ಬೆಣ್ಣೆ ೪ ಚಮಚ, ದಾಲ್ಚಿನ್ನಿ ಹುಡಿ ೧ ಚಿಟಿಕೆ, ವೆನಿಲ್ಲಾ ಕಸ್ಟರ್ಡ್ ಹುಡಿ ೨ ಚಮಚ, ಮೊಟ್ಟೆ ೩, ಹಾಲು ೨ ಕಪ್, ವೆನಿಲ್ಲಾ ಎಸೆನ್ಸ್ ೨ ಹನಿ, ಸ್ವಲ್ಪ ಒಣದ್ರಾಕ್ಷಿ, ರುಚಿಗೆ ತಕ್ಕಷ್ಟು ಸಕ್ಕರೆ
ತಯಾರಿಸುವ ವಿಧಾನ
ಒಂದು ಬೋಗುಣಿಯಲ್ಲಿ ಕಸ್ಟರ್ಡ್ ಹುಡಿ ಮತ್ತು ಹಾಲು ಸೇರಿಸಿ ಗಂಟು ಬಾರದಂತೆ ಚೆನ್ನಾಗಿ ಬೆರೆಸಿ. ಇನ್ನೊಂದು ಬೋಗುಣಿ (ಬೌಲ್)ಯಲ್ಲಿ ಬೆಣ್ಣೆ, ಮೊಟ್ಟೆ, ದಾಲ್ಚಿನ್ನಿ ಹುಡಿ, ವೆನಿಲ್ಲಾ ಎಸೆನ್ಸ್ ಮತ್ತು ಸಕ್ಕರೆಯನ್ನು ಚೆನ್ನಾಗಿ ಬೆರೆಸಿ. ಕಸ್ಟರ್ಡ್ ಹುಡಿ ಬೆರೆಸಿದ ಹಾಲನ್ನೂ ಈ ಮಿಶ್ರಣಕ್ಕೆ ಸೇರಿಸಿ, ಚೆನ್ನಾಗಿ ಬೆರಸಿ. ಓವನ್ ನಲ್ಲಿ ಇಡುವಂತಹ ಬೋಗುಣಿಯಲ್ಲಿ ಬ್ರೆಡ್ ಹಾಳೆಗಳನ್ನು ಜೋಡಿಸಿರಿ. ಬಳಿಕ ಹಾಲು ಮಿಶ್ರಣವನ್ನು ಸೇರಿಸಿ. ಒಣದ್ರಾಕ್ಷಿಯಿಂದ ಅಲಂಕರಿಸಿ. ಓವನ್ ನಲ್ಲಿ ೨೦ ನಿಮಿಷ ಕಾಯಿಸಿರಿ. ಮೇಲಿನಿಂದ ಅಂದವಾದ ಕೆಂಪು ಬಣ್ಣ ಬರಬೇಕು.