ರುಚಿ ಸಂಪದ

  • ಮಸಾಲೆ ಸಾಮಾನುಗಳನ್ನು ಹುರಿದು ಹುಡಿ ಮಾಡಿ, ಬಾಣಲೆಯಲ್ಲಿ, ಎಣ್ಣೆ ಕಾಯಲು ಇರಿಸಿ, ಸಾಸಿವೆ, ಇಂಗು, ಒಣ ಮೆಣಸಿನಕಾಯಿಗಳನ್ನು ಹಾಕಿ ಒಗ್ಗರಣೆ ಮಾಡಿ. ಒಗ್ಗರಣೆಗೆ ಹುಣಸೆ ರಸ, ಬೆಲ್ಲದ ಹುಡಿ, ಮಸಾಲೆಹುಡಿ, ಒಣಶುಂಠಿ ಹುಡಿ, ಉಪ್ಪು ಹಾಕಿ ಕುದಿಸಿದರೆ ರುಚಿಯಾದ ಜೀರಿಗೆ ಗೊಜ್ಜು ತಯಾರು.…

    0
  • ಎರಡು ನಿಂಬೆ ಹಣ್ಣು ಬೇಯಿಸುವಷ್ಟು ನೀರನ್ನು ಕುಕ್ಕರಿಗೆ ಹಾಕಿ ಐದಾರು ಕೂಗು ( ಶಿಳ್ಳಿ ) ಬರಿಸಿ ಸ್ವಲ್ಪ ಸಮಯದ ನಂತರ ನಿಂಬೆಹಣ್ಣಿನಲ್ಲಿರುವ ಬೀಜಗಳನ್ನು ತೆಗೆದುಹಾಕಿ. ಒಂದು ಸ್ಟೀಲ್ ಬೌಲಿಗೆ ಹಾಕಿ ಚೆನ್ನಾಗಿ ಕಿವುಚಿ. ಈ ಮಿಶ್ರಣಕ್ಕೆ ಉಪ್ಪು, ಗಟ್ಟಿ ಸಿಹಿಮೊಸರು, ಸಕ್ಕರೆ, ಜಜ್ಜಿದ…

    0
  • ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿಕೊಂಡು ಗೋದಿ ಹಿಟ್ಟನ್ನು ಹಾಕಿ ಚೆನ್ನಾಗಿ ಪರಿಮಳ ಬರುವವರೆಗೆ ಅಂದರೆ ಸ್ವಲ್ಪ ಕಂದು ಬಣ್ಣ ಬರುವವರೆಗೆ ಸಣ್ಣ ಉರಿಯಲ್ಲಿ ಹುರಿಯಿರಿ. ಆರಿದ ನಂತರ ಸಕ್ಕರೆ ಪುಡಿ, ಏಲಕ್ಕಿ ಪುಡಿ, ತುಪ್ಪದಲ್ಲಿ ಹುರಿದ ಗೋಡಂಬಿ ಚೂರುಗಳನ್ನು ಸೇರಿಸಿ ಉಂಡೆಗಳನ್ನು ಮಾಡಿದರೆ…

    0
  • ಮಸಾಲೆ ಪದಾರ್ಥಗಳನ್ನು ಹುರಿದು ಹುಡಿ ಮಾಡಿ. ಬದನೆಕಾಯಿಗಳನ್ನು ಒಲೆಯ ಮೇಲಿರಿಸಿ ಕಪ್ಪಾಗುವವರೆಗೆ ಬಿಸಿ ಮಾಡಿ. ತೊಟ್ಟು ಮತ್ತು ಸಿಪ್ಪೆಗಳನ್ನು ತೆಗೆದು ಬದನೆಯನ್ನು ಮಸೆದು ಬಿಡಿ. ಕಾದ ಎಣ್ಣೆಗೆ ಸಾಸಿವೆ, ಕರಿಬೇವು, ಇಂಗಿನ ಒಗ್ಗರಣೆ ಮಾಡಿ. ಈರುಳ್ಳಿ…

    0
  • ಪೇರಳೆ ಚಿಗುರು ಮತ್ತು ಜೀರಿಗೆಯನ್ನು ಒಟ್ಟಾಗಿ ಬೇಯಿಸಿ. ಉಪ್ಪು, ಕಾಯಿತುರಿ ಜೊತೆ ನುಣ್ಣಗೆ ರುಬ್ಬಿ. ಮಜ್ಜಿಗೆ ಹಾಕಿದರೆ ತಂಬುಳಿ ರೆಡಿ. ಮಕ್ಕಳಿಗೆ ಅಜೀರ್ಣದಿಂದ ಬೇಧಿಯಾದರೆ ಇದು ಒಳ್ಳೆಯ ಮದ್ದು. ದೊಡ್ಡವರಿಗೂ ಉತ್ತಮ.

    0
  • ಪುನರ್ಪುಳಿ ಸಿಪ್ಪೆ, ಕಾಯಿತುರಿ, ಜೀರಿಗೆ, ಬೆಲ್ಲ, ಉಪ್ಪು ಎಲ್ಲ ಒಟ್ಟಿಗೆ ಹಾಕಿ ನುಣ್ಣಗೆ ರುಬ್ಬಿ ಬೇಕಷ್ಟು ನೀರು ಸೇರಿಸಿದರೆ ತಂಬುಳಿ ತಯಾರಾಯಿತು. ಇದಕ್ಕೆ ಮಜ್ಜಿಗೆ ಸೇರಿಸಲು ಇಲ್ಲ.

    0
  • ಅಕ್ಕಿ ರವೆ, ಅವಲಕ್ಕಿಗಳನ್ನು ಪ್ರತ್ಯೇಕವಾಗಿ ಒಂದು ಗಂಟೆ ನೆನೆಸಿ ನೀರು ಬಸಿಯಿರಿ. ಬಸಿದ ಅವಲಕ್ಕಿಗೆ ಹಸಿಮೆಣಸಿನ ಕಾಯಿ, ಶುಂಠಿ ಸೇರಿಸಿ ತರಿತರಿಯಾಗಿ ಅರೆದು, ಬದಿಗಿಸಿರಿದ ಅಕ್ಕಿ ರವೆ, ಕಾಳು ಮೆಣಸಿನ ಹುಡಿ, ಜೀರಿಗೆ ಹುಡಿ ಮತ್ತು ಇಡ್ಲಿ ಮಿಶ್ರಣದ…

    0
  • ಬಾಣಲೆ ಒಲೆಯ ಮೇಲಿಟ್ಟು ಸ್ವಲ್ಪ ತುಪ್ಪ ಹಾಕಿ ಬಿಸಿಯಾದಾಗ ಹೆಚ್ಚಿದ ಪಾಲಕ್ ಸೊಪ್ಪು ಹಾಕಿ ಬಾಡಿಸಿ ನಂತರ ರುಬ್ಬಿ ಗೋಧಿ ಹಿಟ್ಟಿಗೆ ಹಾಕಿ. ಉಪ್ಪು, ಕೆಂಪು ಮೆಣಸಿನ ಪುಡಿ, ಜೀರಿಗೆ ಪುಡಿ ಬೆರೆಸಿ. ಅಗತ್ಯಕ್ಕೆ ತಕ್ಕಷ್ಟು ನೀರು ಹಾಕಿ ಕಲಸಿ ಉಂಡೆ ಮಾಡಿ…

    0
  • ಒಂದು ಪಾತ್ರೆಯಲ್ಲಿ ಮಾವಿನ ತುರಿ, ಹೆಸರುಕಾಳು, ಕ್ಯಾರೆಟ್ ತುರಿ, ತೆಂಗಿನತುರಿ, ಕಾಳುಮೆಣಸಿನ ಪುಡಿ, ಉಪ್ಪು, ನಿಂಬೆರಸ, ಕೊತ್ತಂಬರಿ ಸೊಪ್ಪು, ಕತ್ತರಿಸಿದ ಹಸಿಮೆಣಸು ಎಲ್ಲವನ್ನೂ ಮಿಶ್ರ ಮಾಡಿ. ನಂತರ ಕರಿಬೇವು ಸೊಪ್ಪಿನ ಒಗ್ಗರಣೆ ಕೊಟ್ಟರೆ ಕೋಸಂಬರಿ ತಿನ್ನಲು ರೆಡಿ.

    0
  • ಅಕ್ಕಿ ಹಿಟ್ಟು, ರವೆ ಹಾಗೂ ಮೈದಾಗಳನ್ನು ಸೇರಿಸಿಡಿ. ಈ ಮಿಶ್ರಣಕ್ಕೆ ಮೆಂತ್ಯೆ ಸೊಪ್ಪು, ಕೊತ್ತಂಬರಿ ಸೊಪ್ಪು, ಹಸಿ ಮೆಣಸಿನಕಾಯಿ, ಉಪ್ಪು, ಜೀರಿಗೆ ಮತ್ತು ಎಳ್ಳು ಹುಡಿಗಳನ್ನು ಸೇರಿಸಿ ನೀರಿನೊಂದಿಗೆ ಗಟ್ಟಿಯಾಗಿ ಪೂರಿಯ ಹದಕ್ಕೆ ಕಲಸಿ. ಅರ್ಧ ಗಂಟೆ…

    0