ನೆಲಬಸಳೆ ಸೊಪ್ಪಿನ ಮೊಸರು ಬಜ್ಜಿ
ಬೇಕಿರುವ ಸಾಮಗ್ರಿ
ನೆಲಬಸಳೆ ಸೊಪ್ಪು ೧ ಮುಷ್ಟಿ, ನೀರುಳ್ಳಿ ೧, ಹಸಿಮೆಣಸು ೧, ಮೊಸರು ೧ ಕಪ್, ಉಪ್ಪು ರುಚಿಗೆ ತಕ್ಕಷ್ಟು, ಒಗ್ಗರಣೆಗೆ ಉದ್ದಿನಬೇಳೆ ೧/೨ ಚಮಚ, ಸಾಸಿವೆ ೧ ಚಮಚ, ಒಣಮೆಣಸು ೧.
ತಯಾರಿಸುವ ವಿಧಾನ
ನೆಲಬಸಳೆ ಸೊಪ್ಪನ್ನು ಸಣ್ಣಗೆ ಹೆಚ್ಚಿ ಸ್ವಲ್ಪ ನೀರು ಚಿಮುಕಿಸಿ ಬೇಯಿಸಿ. ತಣಿದ ಮೇಲೆ ಇದಕ್ಕೆ ನೀರುಳ್ಳಿ, ಹಸಿಮೆಣಸನ್ನು ಹೆಚ್ಚಿ ಹಾಕಿ ಉಪ್ಪು, ಮೊಸರು ಬೆರೆಸಿ. ಉದ್ದಿನಬೇಳೆ, ಸಾಸಿವೆಯ ಒಗ್ಗರಣೆ ಕೊಡಿ. ಅನ್ನ ಅಥವಾ ಪಲಾವ್ ಜೊತೆ ಸವಿಯಿರಿ. ನೆಲಬಸಳೆ ಸೊಪ್ಪಿನಲ್ಲಿ ಖನಿಜಾಂಶ ಹೇರಳವಾಗಿದೆ.
- ಸಹನಾ ಕಾಂತಬೈಲು, ಮಡಿಕೇರಿ