Latest Recipes

ತಯಾರಿಕಾ ವಿಧಾನ: ಮೊದಲಿಗೆ ಬಾಣಲೆಗೆ ಸ್ವಲ್ಪ ಎಣ್ಣೆಯನ್ನು ಹಾಕಿ ಅದು ಬಿಸಿಯಾದ ಮೇಲೆ ಸಾಸಿವೆ ಮತ್ತು ಕೆಂಪು ಮೆಣಸನ್ನು ಹಾಕಿ ಹುರಿಯಿರಿ. ಸಾಸಿವೆ ಸಿಡಿದ ನಂತರ ಕತ್ತರಿಸಿದ ಗೇರು ಬೀಜಗಳನ್ನು ಬಾಣಲೆಗೆ ಹಾಕಿ. ನಂತರ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಬೇಯುವಷ್ಟು ಸ್ವಲ್ಪ ನೀರು ಹಾಕಿ, ಬಾಣಲೆಯ ಬಾಯಿ ಹಾಕಿ ಸ್ವಲ್ಪ ಸಮಯದವರೆಗೆ ಬೇಯಿಸಿ. ಬೆಂದ ಮೇಲೆ ತೆಂಗಿನ ತುರಿ, ಸ್ವಲ್ಪ ಇಂಗಿನ ನೀರು, ಚಿಟಿಕೆಯಷ್ಟು ಸಕ್ಕರೆ ಹಾಕಿ ಮಗುಚಿ ಕೆಳಗಿಡಿ. ಗೇರುಬೀಜದ ಜೊತೆ ಎಳೆಯ ತೊಂಡೆಕಾಯಿಗಳನ್ನೂ ಕತ್ತರಿಸಿ ಜೊತೆಯಲ್ಲೇ ಬೆರೆಸಿ ಪಲ್ಯ ತಯಾರಿಸಿದರೆ ಇನ್ನೂ…

0

ವಿಧಾನ ತಿಳಿಸುವ ಮುಂಚೆ :
ಹಾಗಲಕಾಯಿ ಎಂದಾಕ್ಷಣ ಕೆಲವರು ಮುಖ ಮುದುರಿಕೊಳ್ಳುತ್ತದೆ , ಎಷ್ಟು ಬೆಲ್ಲ ಹಾಕಿ ಮಾಡಿದರೂ ಕೆಲವರಿಗೆ ಇಷ್ಟವಾಗುವುದಿಲ್ಲ , ಆದರೆ ಈ ರೀತಿ ಮಾಡಿದ ಗೊಜ್ಜು ಎಲ್ಲರು ಇಷ್ಟ ಪಡುತ್ತಾರೆ . ನನಗೆ ಬಂದ ಅನುಭವದಲ್ಲಿ ಹಾಗಲಕಾಯಿ ತಿನ್ನಲ್ಲ ಅನ್ನುವವರು ಇಷ್ಟಪಟ್ಟು ತಿಂದಿದ್ದಾರೆ . ತಪ್ಪದೇ ಪ್ರಯತ್ನ ಮಾಡಿ ಹಾಗೂ ಹಾಗಲಕಾಯಿಂದಿರುವ ಪ್ರಯೋಜನವನ್ನ ಪಡೆದುಕೊಳ್ಳಿ . 
 
ಸೂಚನೆ: ಮೇಲೆ ತಿಳಿಸಿರುವ ಅಳತೆಯಂತೆಯೇ ಮಾಡುವ ಅವಶ್ಯಕತೆ ಇರುವುದಿಲ್ಲ , ನಿಮ್ಮ ರುಚಿಗೆ ತಕ್ಕಷ್ಟು ಕಾರ ಮತ್ತು ಹುಳಿ ಬಳಸಿಕೊಳ್ಳಿ . 
 
ಮಾಡುವ ವಿಧಾನ :
೧. ಹಾಗಲಕಾಯಿ…

0

ಅಕ್ಕಿ ಹಾಗು ಹೆಸರು ಬೇಳೆಯನ್ನು ತೊಳೆದು ನೆನೆಸಿಟ್ಟುಕೊಳ್ಳಬೇಕು. ಅರ್ಧ ಗಂಟೆಗಳ ಕಾಲ ನೆನೆಸಿಟ್ಟರಾಯಿತು. 
ಕುಕ್ಕರಿನ ಬಾಣಲೆಯಲ್ಲಿ ತುಪ್ಪದಲ್ಲಿ ಜೀರಿಗೆ, ಹಸಿರು ಮೆಣಸಿನಕಾಯಿ, ಶುಂಠಿ ಹಾಕಿ ಹುರಿದಿಟ್ಟುಕೊಳ್ಳಬೇಕು. 
ಅದಕ್ಕೆ ಅಕ್ಕಿ, ಹೆಸರು ಕಾಳು, ಅರಿಶಿನ, ಮೇಲೆ ತಯಾರಿಸಿದ ಮಸಾಲೆ, ಸ್ವಲ್ಪ ಹಿಂಗು, ಬೆಲ್ಲ, ಹಾಗೂ ಅಳತೆಗೆ ತಕ್ಕಂತೆ ಉಪ್ಪು ಹಾಕಿ, ಜೊತೆಗೆ ನಾಲ್ಕು ಕಪ್ಪು ನೀರು ಹಾಕಿ ಕುಕ್ಕರಿನಲ್ಲಿಟ್ಟು ನಾಲ್ಕೈದು ಬಾರಿ ಕೂಗು ಬರುವವರೆಗೆ ಬೇಯಿಸುವುದು. 

0

1.ಸ್ವಲ್ಪ ಎಣ್ಣೆಯನ್ನು ಬಿಸಿ ಮಾಡಿ ,ಮೈದಾ ಹಿಟ್ಟಿಗೆ ಹಾಕಿ ,ಚಿಟಿಕಿ ಉಪ್ಪು ಸೇರಿಸಿ ,ನೀರು ಹಾಕಿ ಹದವಾಗಿ ಕಲಸಿ[ಚಪಾತಿ ಹಿಟ್ಟಿನ ಹದ] . ಕನಿಷ್ಟ ಅರ್ಧ ಗಂಟೆ ನೆನೆದರ ಒಳ್ಳೆಯದು. 
2.ಕಡ್ಲೆಬೀಜವನ್ನು ಬಾಣಲಿಯಲ್ಲಿ ಹಾಕಿ ಉರಿದುಕೊಳ್ಳಿ,ಸ್ವಲ್ಪ ಕೆಂಪಾಗುವಷ್ಟು , ನಂತರ ಬೇರೆ ಪಾತ್ರೆಗೆ ಹಾಕಿ ತಣ್ಣಗಾಗಲು ಬಿಡಿ. ಎಳ್ಳನ್ನು ಬಾಣಲಿಗೆ ಹಾಕಿ , ಸ್ವಲ್ಪ ಸಿಡಿಯಲು ಶುರುವಾದಾಗ ,ಅದೇ ಪಾತ್ರೆಗೆ ಅಥವಾ ಬೇರೆ ಪಾತ್ರೆಗೆ ತಣ್ಣಗಾಗಲು ಹಾಕಿ. ಬಿಸಿ ಇದ್ದಾಗಲೇ ಪುಡಿ ಮಾಡಿಕೊಂಡರೆ ಪುಡಿ ಮೆತ್ತಗಾಗಿ ಅಂಟುತ್ತದೆ , ಹಾಗಾಗಿ ಕನಿಷ್ಟ 15 ನಿಮಿಷ ಬಿಡಿ ಅಷ್ಟರಲ್ಲಿ ತಣ್ಣಗಾಗಿರುತ್ತವೆ.  ನಂತರ ಬಿಡಿಸಿಟ್ಟ ಏಲಕ್ಕಿ ,…

4

ಮೊದಲಿಗೆ ಸಿಹಿಗುಂಬಳಕಾಯಿ ತುರಿದು ಕುಕ್ಕರ್ ನಲ್ಲಿ ಕೇವಲ ಒಂದು ಸೀಟಿ ಕೂಗಿಸಿ ಬೇಯಿಸಿ ಇಟ್ಟು ಕೊಳ್ಳಬೇಕು.ಬೆಲ್ಲ ಕುದಿಸಿ ಸೋಸಿ ಸ್ವಲ್ಪ ನೂಲಿನೆಳೆ ಪಾಕ ಮಾಡಿಟ್ಟುಕೊಳ್ಳಬೇಕು.ನಂತರ ಗೋಧಿಹಿಟ್ಟನ್ನು ಎರಡು ಚಮಚ ತುಪ್ಪದಲ್ಲಿ ಸ್ವಲ್ಪ ಕೆಂಪಗೆ ಘಮ್ ಎನ್ನುವ ಹಾಗೆ ಹುರಿದು ಇದಕ್ಕೆ ಬೇಯಿಸಿದ ಸಿಹಿಗುಂಬಳಕಾಯಿ, ಬೆಲ್ಲ ,ಏಲಕ್ಕಿ ಪುಡಿ,ಎಲ್ಲವನ್ನು ಹಾಕಿ ಚೆನ್ನಾಗಿ ಕಲೆಸಿ ಪುಟ್ಟ ಉಂಡೆ ಮಾಡಿ ಕಜ್ಜಾಯದಂತೆ ಒತ್ತಿ ಕಾದ ಎಣ್ಣೆಯಲ್ಲಿ ಕೆಂಪಗೆ ಕರಿಯಬೇಕು.ಬಿಸಿಬಿಸಿ ಕಜ್ಜಾಯ ತಿನ್ನಲು ರೆಡಿ.

0

ಮಾಡುವ ವಿಧಾನ - ಒಂದು ಪಾತ್ರೆಯಲ್ಲಿ ಎಣ್ಣೆ ಬಿಸಿಯಾದ ನಂತರ ಸಾಸಿವೆ ಜೀರಿಗೆ ಸಿಡಿಸಿ. ಕರಿಬೇವು ಈರುಳ್ಳಿಯನ್ನು ಮತ್ತು ಟೊಮ್ಯಾಟೋ ಹಾಕಿ ಚೆನ್ನಾಗಿ ಬಾಡಿಸಿ. ಚನ್ನಾಗಿ ಬೆಂದ ನಂತರ ಅಚ್ಚ ಕಾರದ ಪುಡಿ ಮತ್ತು ಉಪ್ಪು ಸೇರಿಸಿ ಮತ್ತಷ್ಟು ಬಾಡಿಸಿ ಈಗ ರವೆ ಹಾಕಿ ಚೆನ್ನಾಗಿ ಮಿಶ್ರಗೊಳಿಸಿ. ನಂತರ 3 ಲೋಟ ನೀರನ್ನು ಸೇರಿಸಿ 8 ರೊಂದ 10 ನಿಮಿಷ ಗಟ್ಟಿಯಾಗುವ ತನಕ ಆಡಿಸುತ್ತಲೇ ಇರಿ. ಈಗ ನಿಮ್ಮ ಟೊಮ್ಯಾಟೋ ಉಪ್ಪಿಟ್ಟು ಸವಿಯಲು ತಟ್ಟೆಗೆ ಹಾಕಿ ಕೊತ್ತಂಬರಿ ಸೊಪ್ಪು ಉದುರಿಸಿ. ಆಹಾ ಇಂಥ ಸವಿಯಾದ ಉಪ್ಪಿಟ್ಟು.

0

ಬೆಂಡೆಕಾಯಿಯನ್ನು ಬಿಲ್ಲೆ (ಅರ್ಧ ಇಂಚು ದಪ್ಪ) ಆಕಾರದಲ್ಲಿ ಹೆಚ್ಚಿಕೊಂಡು, ಬಾಣಲೆಯಲ್ಲಿ 4 ಟೀ ಚಮಚ ಎಣ್ಣೆಯೊಂದಿಗೆ ಹುರಿಯಿರಿ. ಬೆಂಡೆಕಾಯಿ ಸ್ವಲ್ಪ ಕಪ್ಪು ಆಗುವ ರೀತಿ. ನಂತರ ಹಸಿ ಮೆಣಸಿನಕಾಯಿಯನ್ನು ಅದೇ ರೀತಿ ಹುರಿದು ಕೊಳ್ಳಿ. ಬೆಂಡೆಕಾಯಿ ಒಂದನ್ನು ಬಿಟ್ಟು ಮೇಲೆ ಹೇಳಿದ ಎಲ್ಲ ಪದಾರ್ಥಗಳನ್ನು ಮಿಕ್ಸರ್ ಗೆ ಹಾಕಿ ರುಬ್ಬಿಕೊಳ್ಳಿ ನಂತರ ತಣ್ಣಗಾದ ಹುರಿದ ಬೆಂಡೆಕಾಯಿಯನ್ನು ಸೇರಿಸಿ ಸ್ವಲ್ಪ ಮಾತ್ರವೇ ರುಬ್ಬಿಕೊಳ್ಳಿ. ಈಗ ಬೆಂಡೆಕಾಯಿ ಚಟ್ನಿ ಸವಿಯಲು ಸಿದ್ಧ. ಚಪಾತಿ ಹಾಗು ರೊಟ್ಟಿಯೊಂದಿಗೆ ತುಂಬಾ ರುಚಿಯಾಗಿರುತ್ತದೆ.

2

ಒಂದು ದೊಡ್ಡ ತೋತಾಪುರಿ ಮಾವಿನ ಕಾಯನ್ನು [ಹಸಿರು ಸಿಪ್ಪೆ ಇರಬೇಕು] ತೊಳೆದು ಸಿಪ್ಪೆ ತೆಗೆಯಿರಿ. ಒಳಗಿನ ಕಾಯಿಯನ್ನು ವಾಟೆಯಿಂದ‌ ಬೇರ್ಪಡಿಸಿ ತುರಿಯಿರಿ. ಒಂದು ದಪ್ಪ ತಳದ ಪಾತ್ರೆಯಲ್ಲಿ ತುರಿದ ಕಾಯನ್ನು ಹಾಕಿ ಹತ್ತು ನಿಮಿಷ ಬಾಡಿಸಿ. ನಂತರ ಮಾವಿನ ತುರಿಯಷ್ಟೇ ಅಳತೆಯಲ್ಲಿ ಸಕ್ಕರೆಯನ್ನು ಸೇರಿಸಿ. ಸುಮಾರು ಮೂವತ್ತು ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಆಗಾಗ‌ ಕೈಯಾಡಿಸುತ್ತಾ ಬೇಯಿಸಿ. ಮಿಶ್ರಣವು ಪಾತ್ರೆಯ ತಳವನ್ನು ಬಿಡಲು ಆರಂಭಿಸುತ್ತಿದ್ದಂತೆಯೇ ಒಂದು ಚಿಟಿಕೆ ಉಪ್ಪು ಸೇರಿಸಿ . ಪಾತ್ರೆಯನ್ನು ಒಲೆಯಿಂದ ಇಳಿಸಿ ಮೂವತ್ತು ನಿಮಿಷ ತಣಿಯಲು ಬಿಡಿ. ನಂತರ ಗಾಳಿಯಾಡದಂತೆ ಜಾಡಿಯಲ್ಲಿ ತುಂಬಿಸಿಡಿ. ಹುಳಿ‍‍‍ ‍‍‍ಸಿಹಿ…

3