ಪಾಲಕ್ ಸೊಪ್ಪಿನ ಗೊಜ್ಜು

ಬೇಕಿರುವ ಸಾಮಗ್ರಿ
ಕತ್ತರಿಸಿದ ಪಾಲಕ್ ಸೊಪ್ಪು - ೩ ಕಪ್, ತೆಂಗಿನ ತುರಿ - ಅರ್ಧ ಕಪ್, ಒಣ ಮೆಣಸಿನಕಾಯಿ - ೫-೬, ಹುಣಸೆ ರಸ - ಕಾಲು ಕಪ್, ಬೆಲ್ಲದ ತುರಿ - ೪ ಚಮಚ, ಎಳ್ಳು ಹುಡಿ - ೨ ಚಮಚ, ಓಮ್ ಕಾಳಿನ ಹುಡಿ - ೧ ಚಮಚ, ಸಾಸಿವೆ - ೧ ಚಮಚ, ಎಣ್ಣೆ - ೪ ಚಮಚ, ಇಂಗು - ೧ ಚಮಚ, ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು - ೪ ಚಮಚ, ರುಚಿಗೆ ತಕ್ಕಷ್ಟು ಉಪ್ಪು.
ತಯಾರಿಸುವ ವಿಧಾನ
ಪಾಲಕ್ ಸೊಪ್ಪು, ತೆಂಗಿನ ತುರಿ, ಒಣ ಮೆಣಸಿನಕಾಯಿ, ಓಮ್ ಕಾಳು, ಎಳ್ಳು ಹುಡಿಗಳನ್ನು ಸೇರಿಸಿ ರುಬ್ಬಿ. ಕಾದ ಎಣ್ಣೆಗೆ ಸಾಸಿವೆ - ಇಂಗಿನ ಒಗ್ಗರಣೆ ಮಾಡಿ ನಂತರ ರುಬ್ಬಿದ ಮಿಶ್ರಣ ಸೇರಿಸಿ ಬಾಡಿಸಿ. ಹುಣಸೆ ರಸ, ಬೆಲ್ಲ, ಉಪ್ಪು ಹಾಕಿ ಕುದಿಸಿ. ಕೊತ್ತಂಬರಿ ಸೊಪ್ಪು ಸೇರಿಸಿದರೆ, ರುಚಿಯಾದ ಪಾಲಕ್ ಸೊಪ್ಪಿನ ಗೊಜ್ಜು ತಯಾರು.