ಬ್ರೆಡ್ ಹಲ್ವ

ಬ್ರೆಡ್ ಹಲ್ವ

ಬೇಕಿರುವ ಸಾಮಗ್ರಿ

ಬ್ರೆಡ್ ಹಾಳೆಗಳು ೪, ಹಾಲು ೧ ಕಪ್, ಸಕ್ಕರೆ ಮೂರನೆಯ ಒಂದು ಕಪ್, ತುಪ್ಪ ೫ ಚಮಚ, ಗೇರು ಬೀಜ ೨ ಚಮಚ, ಬಾದಾಮಿ ೨ ಚಮಚ, ಏಲಕ್ಕಿ ಹುಡಿ ಕಾಲು ಚಮಚ

ತಯಾರಿಸುವ ವಿಧಾನ

ಬ್ರೆಡ್ ಹಾಳೆಗಳನ್ನು ಒಂದು ಹಾಳೆಯ ನಾಲ್ಕು ತುಂಡುಗಳನ್ನಾಗಿ ಕತ್ತರಿಸಿ, ಮೈಕ್ರೋ ಅವನ್ ನಲ್ಲಿ ಒಂದು ನಿಮಿಷ ಇಡಿ. ತಿರುವಿ ಹಾಕಿ. ಪುನಃ ಒಂದು ನಿಮಿಷ ಇಡಿ. ಒಂದು ಪ್ಯಾನ್ ನಲ್ಲಿ ತುಪ್ಪ ಬಿಸಿ ಮಾಡಿ ಗೇರು ಬೀಜ ಮತ್ತು ಬಾದಾಮಿಯನ್ನು ನಸುಗೆಂಪು ಬಣ್ಣ ಬರುವವರೆಗೆ ಸಣ್ಣ ಉರಿಯಲ್ಲಿ ಹುರಿದು ಬದಿಗಿಡಿ. ತಣಿದ ಮೇಲೆ ಅರ್ಧ ಭಾಗವನ್ನು ಸ್ವಲ್ಪ ಹಾಲಿನೊಂದಿಗೆ ರುಬ್ಬಿ. ಅದೇ ಪ್ಯಾನ್ ನಲ್ಲಿ ಬ್ರೆಡ್ ತುಂಡುಗಳನ್ನು ಕೆಂಪಗೆ ಹುರಿದು ಬದಿಗೆ ತೆಗೆದಿಡಿ. ಒಂದು ದಪ್ಪ ತಳದ ಪಾತ್ರೆಯಲ್ಲಿ ಹಾಲು ಕಾಯಿಸಿರಿ. ಕುದಿ ಬರುತ್ತಲೇ ಬ್ರೆಡ್ ತುಂಡುಗಳು, ಗೇರು ಬೀಜ, ಬಾದಾಮಿ ಪೇಸ್ಟ್ ಹಾಗೂ ಸಕ್ಕರೆ ಸೇರಿಸಿ ಉರಿ ಸಣ್ಣಗೆ ಮಾಡಿ ಹಲ್ವದ ಸ್ಥಿರತೆ ಬರುವವರೆಗೆ ಕೈಯಾಡಿಸಿ. ಉರಿ ಆರಿಸಿ ಏಲಕ್ಕಿ ಹುಡಿ ಸೇರಿಸಿ. ಮೇಲಿನಿಂದ ಹುರಿದಿಟ್ಟ ಗೇರುಬೀಜ, ಬಾದಾಮಿಗಳಿಂದ ಅಲಂಕರಿಸಿ, ಬಿಸಿ ಬಿಸಿಯಾಗಿ ಸವಿಯಿರಿ.