ನನ್ನದೊಂದು ಬದುಕಿನ ಪುಸ್ತಕ…(ಭಾಗ 2)
8 hours 57 minutes ago - Shreerama Diwanaಕೆಲವೊಮ್ಮೆ ಸಂಜೆಯ ನಡಿಗೆಗಾಗಿ ಪಾರ್ಕಿನಲ್ಲಿ ಹೋಗುತ್ತಿರುವಾಗ ಅಲ್ಲಿ ಕಾಣುವ ಯುವಕ ಯುವತಿಯರ ನಗುವನ್ನು ನೋಡಿದಾಗ ಯೌವ್ವನದ ನನ್ನ ಪ್ರೀತಿಯು ನೆನಪಾಗುತ್ತದೆ. ಅರೆ ಪ್ರೀತಿ ಒಂದು ಮುಗಿಯದ ಅಕ್ಷಯ ಪಾತ್ರೆ, ಇಂದಿನ ಯುವಕ ಯುವತಿಯರಿಗೆ ಪ್ರೀತಿಯ ಮಹತ್ವ, ಪ್ರೀತಿಯ ಪಾವಿತ್ರ್ಯತೆ, ಪ್ರೀತಿಯ ಜೀವನದ ಬಗ್ಗೆ ಬರೆಯಬೇಕು, ಅವರನ್ನು ಎಚ್ಚರಿಸಬೇಕು, ಪ್ರೀತಿಯಿಂದ ಆಗುವ ಅನಾಹುತಗಳ ಬಗ್ಗೆ ಜಾಗೃತಿ ಮೂಡಿಸಬೇಕು. ಈ ಬಾರಿ ಏನಾದರೂ ಮಾಡಿ ಅಮರ್ ಪ್ರೇಮ್ ಕಹಾನಿ ಬರೆಯಲೇಬೇಕು ಎಂದು ಯೋಚಿಸುತ್ತೇನೆ. ಆದರೆ ಟಿವಿಗಳಲ್ಲಿ ಬರುವ ಪ್ರೀತಿಗಾಗಿ ಕೊಲೆಗಳು, ವಂಚನೆಗಳು, ಮುಖವಾಡಗಳು ಎಲ್ಲವನ್ನು ನೋಡುತ್ತಿದ್ದರೆ ಈಗ ಇರುವುದು ನಿಜ ಪ್ರೀತಿ ಅಲ್ಲ, ಕಪಟ ಪ್ರೀತಿ. ಈಗಿನ ಯುವಕ ಯುವತಿಯರಿಗೆ ಪ್ರೀತಿಯ ಬಗ್ಗೆ, ಅದರ ಆಳದ ಬಗ್ಗೆ ಗೊತ್ತೇ ಇಲ್ಲ. ಪ್ರೀತಿ ಒಂದು ವ್ಯಾಪಾರದ, ಕಾಮ ಪ್ರಚೋದನೆಯ, ಹದಿಹರೆಯದ ಒಂದು ಭಾವ ಮಾತ್ರವಾಗಿದೆ. ಈಗ ಆದನ್ನು ಬರೆದು ಪ್ರಯೋಜನವಾದರೂ ಏನು ಎಂದು ಮತ್ತೆ ಒಳಗಿನ ಮನಸ್ಸು ನುಡಿಯುತ್ತದೆ. ಹಳೆಯ ನನ್ನ ಪ್ರೀತಿಯನ್ನು ನೆನಪು ಮಾಡಿಕೊಂಡು ಹಾಗೆಯೇ ಮರೆಯುತ್ತೇನೆ.
ಪುಸ್ತಕ ಬರೆಯಲು ಸಾಧ್ಯವಾಗಲಿಲ್ಲ. ಈ ಯೋಚನೆಗಳೆಲ್ಲವೂ ಹಳೆಯದಾಯಿತು. ಹೊಸ ಟ್ರೆಂಡ್ ಏನೆಂದರೆ ಯುವಕರಿಗೆ ಮಾರ್ಗದರ್ಶನ ಮಾಡುವ, ವ್ಯಕ್ತಿತ್ವ ವಿಕಸನದ, ಅವರ ಉದ್ಯೋಗ, ವ್ಯಾಪಾರಕ್ಕೆ ಮಾರ್ಗದರ್ಶನ ನೀಡುವ ಹೊಸ ಹೊಸ ಐಡಿಯಾಗಳು, ಟಿಪ್ಸ್ ಗಳು, ಆಲೋಚನೆಗಳ ಬಗ್ಗೆ ಪುಸ್ತಕ ಬರೆದರೆ ಹೆಚ್ಚು ಜನಪ್ರಿಯವಾಗುತ್ತದೆ ಎಂದು ಆಗಾಗ ಕೆಲವರು ಮಾತನಾಡುವುದನ್ನು ಕೇಳಿ ಅದನ್ನಾದರೂ ಬರೆಯೋಣ ಎಂದು ಪೆನ್ನು ಪೇಪರ್ ಹಿಡಿದು ಕುರ್ಚಿಯ ಮೇಲೆ ಕುಳಿತೆ. ಆಗ ಪಕ್ಕದಲ್ಲಿದ್ದ ಪತ್ರಿಕೆಯ ಮೇಲೆ ಕಣ್ಣಾಡಿಸಿದರೆ ಅಲ್ಲಿ ಬರೆದಿದ್ದ ಅನೇಕ ವಿಷಯಗಳನ್ನು ಓ… ಮುಂದೆ ಓದಿ...