ಹರ್ಯಾಣದಲ್ಲಿ ಬಿಜೆಪಿ ಹ್ಯಾಟ್ರಿಕ್
1 day ago - Ashwin Rao K Pಎಲ್ಲರ ಭವಿಷ್ಯವಾಣಿ ಸುಳ್ಳಾಗಿದೆ. ಮಾಧ್ಯಮಗಳ ಎಕ್ಸಿಟ್ ಪೋಲ್ ಗಳು ಠುಸ್ಸೆಂದಿವೆ. ಹರ್ಯಾಣದಲ್ಲಿ ಬಿಜೆಪಿ ಬಹುಮತ ಗಳಿಸಲು ಶಕ್ತವಾಗುವುದರೊಂದಿಗೆ ಸರಕಾರ ರಚನೆಯಲ್ಲಿ ಹ್ಯಾಟ್ರಿಕ್ ಸಾಧನೆಗೈದಿದೆ. ಆ ಮೂಲಕ ಆಡಳಿತ ವಿರೋಧಿ ಅಲೆ ತನ್ನನ್ನು ಬಾಧಿಸಿಲ್ಲ ಎಂಬುದನ್ನು ಸಾಬೀತುಪಡಿಸಿದೆ. ಇದು ಬಿಜೆಪಿಯ ಅಮೋಘ ಸಾಧನೆ ಎಂಬುದರಲ್ಲಿ ಅನುಮಾನವಿಲ್ಲ. ಸರಕಾರವೊಂದು ಸತತ ಮೂರನೇ ಅವಧಿಗೆ ಆಯ್ಕೆಯಾಗುವುದು ಅಷ್ಟು ಸುಲಭವೇನಲ್ಲ. ಆದರೆ ಬಿಜೆಪಿ ಸರಕಾರ ಅದನ್ನು ಸಾಧಿಸಿ ತೋರಿಸಿದೆ. ಜನರ ಆಶೋತ್ತರಗಳಿಗೆ ಬಿಜೆಪಿ ಸರಕಾರ ಸ್ಪಂದಿಸಿದೆ ಎಂಬುದನ್ನು ಇದರಿಂದ ತಿಳಿದುಕೊಳ್ಳಬಹುದು.
ಚುನಾವಣಾ ಪಂಡಿತರೆಲ್ಲ ಹರ್ಯಾಣದಲ್ಲಿ ಕಾಂಗ್ರೆಸ್ ಗೆಲುವಿನ ಭವಿಷ್ಯ ನುಡಿದಿದ್ದರು. ಎಕ್ಸಿಟ್ ಪೋಲ್ ಗಳು ಬಿಜೆಪಿ ಸೋತು ಸುಣ್ಣವಾಗುವುದೆಂದು ಬಣ್ಣಿಸಿದ್ದವು. ಆದರೆ ಜನರ ನಾಡಿಮಿಡಿತವನ್ನು ಕೇವಲ ಸಮೀಕ್ಷೆಗಳಿಂದ ಅರಿಯಲು ಸಾಧ್ಯವಿಲ್ಲ ಎಂಬುದು ಈಗ ಅರಿವಾಗಿದೆ. ತಳಮಟ್ಟದಲ್ಲಿ ಜನರು ಬಿಜೆಪಿ ಜತೆಗೇ ಇರುವರೆಂದು ತಿಳಿದುಬಂದಿದೆ. ಹರ್ಯಾಣದಲ್ಲಿ ನಿರಂತರ ನಡೆಯುತ್ತಿರುವ ರೈತರ ಪ್ರತಿಭಟನೆಗಳು ಬಿಜೆಪಿ ಪಾಲಿಗೆ ವಿನಾಶಕಾರಿಯಾಗಲಿದೆ, ರೈತರು ಬಿಜೆಪಿ ಸರಕಾರದಿಂದ ರೋಸಿದ್ದಾರೆನ್ನುವುದಕ್ಕೆ ಇದು ನಿದರ್ಶನ ಎಂದೆಲ್ಲಾ ಬಣ್ಣಿಸಲಾಗಿತ್ತು. ಆದರೆ ಅದು ರಾಜಕೀಯ ಪ್ರತಿಭಟನೆಯಾಗಿತ್ತು ಹಾಗೂ ಪ್ರತಿಭಟನೆ ನಡೆಸುತ್ತಿದ್ದವರು ಸಾಕಷ್ಟು ಉಳ್ಳ ರೈತರಷ್ಟೇ ಎಂಬುದು ಹರ್ಯಾಣದ ಶ್ರೀಸಾಮಾನ್ಯನಿಗೂ ಗೊತ್ತಿತ್ತು. ಎಲ್ಲಕ್ಕಿಂತ ಮುಖ್ಯವಾಗಿ ಹರ್ಯಾಣದ ಮತದಾರರು ತಾವು ಕಾಂಗ್ರೆಸಿನ ಪುಕ್ಕಟೆ ಭಾಗ್ಯಗಳಿಗೆ ಮರುಳಾಗುವವರಲ್ಲ ಎಂಬಂತಹ ಮಹತ್ವದ ಸಂದೇಶವೊಂದನ್ನು ರಾಜಕೀಯ ಪಕ್ಷಗಳಿಗೆ ರವಾನಿಸಿದ್ದಾರೆ. ಆ ಮೂಲಕ ದೇಶದ ಮತದಾರರಿಗೆ ಮೇಲ್ಪಂಕ್ತಿ ಹಾಕಿಕೊಟ್ಟಿದ… ಮುಂದೆ ಓದಿ...