ಮೂಕ ಹಕ್ಕಿಯು ಹಾಡುತಿದೆ.....
ಹಾಡುತಿದೆ....... ಹಾಡುತಿದೆ.......
ಭಾಷೆಗೂ ನಿಲುಕದ
ಭಾವ ಗೀತೆಯ
ಹಾರಿ ಹಾರಿ
ಹಾಡುತಿದೆ....
ಹಾಡುತಿದೆ...
ಹಾಡುತಿದೇ...
ಹಕ್ಕಿಯ ರೆಕ್ಕೆ ಮುರಿದು ಬೀಳುವವರೆಗೂ..
ಒಂದು ಸಣ್ಣ ಕೆಮ್ಮಿಗೆ, ನೆಗಡಿಗೆ, ಗಂಟಲು ನೋವಿಗೆ, ಹೊಟ್ಟೆ ನೋವಿಗೆ, ಜ್ವರಕ್ಕೆ ಮನುಷ್ಯ ಭಯಪಡುತ್ತಾನೆ, ಬಿಪಿ, ಶುಗರ್, ಕ್ಯಾನ್ಸರ್, ಅಲ್ಸರ್, ಹಾರ್ಟ್ ಅಟ್ಯಾಕ್ ಗೆ ಪತರಗುಟ್ಟಿ ಹೋಗುತ್ತಾನೆ, ಎಷ್ಟೋ ಜನರು ಸಣ್ಣ ಸೂಜಿಯ ಇಂಜೆಕ್ಷನ್ ತೆಗೆದುಕೊಳ್ಳಲೂ ಹೆದರುತ್ತಾರೆ, ಬಹಳಷ್ಟು ಹೆಣ್ಣು ಮಕ್ಕಳು ಜಿರಳೆ ಕಂಡರೆ ಕಿರುಚಿಕೊಳ್ಳುತ್ತಾರೆ, ಎಷ್ಟೋ ಯುವಕರು ಹಾವಿಗೆ ಅಂಜುತ್ತಾರೆ, ಇನ್ನು ಹುಲಿ, ಚಿರತೆ, ಸಿಂಹಗಳನ್ನು ನೋಡಿದರೆ ಓಡಿ ಹೋಗುತ್ತಾರೆ, ಎಲ್ಲಾದರೂ ಅನಿರೀಕ್ಷಿತವಾಗಿ ಡಂ ಎನ್ನುವ ದೊಡ್ಡ ಶಬ್ದ ಉಂಟಾದರೆ ಎದೆ ನಡುಗುತ್ತದೆ, ಇನ್ನೆಲ್ಲೋ ಭೀಕರ ಅಪಘಾತ, ಕೊಲೆ, ಅತ್ಯಾಚಾರಗಳನ್ನು ಕೇಳಿದರೆ ಮನಸ್ಸು ದಿಗಿಲು ಹುಟ್ಟಿಸುತ್ತದೆ, ಇಷ್ಟೊಂದು ಸೂಕ್ಷ್ಮ ಮನಸ್ಸಿನ ಮನುಷ್ಯರು ಕೊಲ್ಲುವ, ಸಾಯುವ ಆಟ ಯುದ್ಧಕ್ಕೆ ಹಾತೊರೆಯುತ್ತಾರೆ, ಎಷ್ಟೊಂದು ವಿಚಿತ್ರವಲ್ಲವೇ....?
ಭಯೋತ್ಪಾದಕರು ಮನುಷ್ಯರಲ್ಲವೇ ಅಲ್ಲ, ಅವರು ರಾಕ್ಷಸರು. ತಮ್ಮ ವಿಚಾರಧಾರೆಗೆ, ತಮ್ಮ ಪ್ರದೇಶಕ್ಕೆ, ತಮ್ಮ ಹಿತಾಸಕ್ತಿಗೆ ಯಾವುದೇ ರೀತಿಯಲ್ಲಿ ಅಡ್ಡಿ ಮಾಡದ, ತೊಂದರೆ ಮಾಡದ, ಸಂಬಂಧವೇ ಇಲ್ಲದ, ಅಧಿಕಾರವೂ ಇಲ್ಲದ, ಅಮಾಯಕ, ಅಸಹಾಯಕ ಜನರನ್ನು ಗುಂಡಿಟ್ಟು ಕೊಲ್ಲುತ್ತಾರೆಂದರೆ ಅವರು ಮನುಷ್ಯರೇ ಅಲ್ಲ. ಆದ್ದರಿಂದ ಆ ನರ ರಾಕ್ಷಸರ ಬಗ್ಗೆ ಹೆಚ್ಚಿಗೆ ಮಾತನಾಡುವ ಅವಶ್ಯಕತೆ ಇಲ್ಲ. ಅವರ ವಿನಾಶವನ್ನು ಸದಾ ಬಯಸಬೇಕು. ಹಾಗೆಯೇ ಅವರನ್ನು ನಿಯಂತ್ರಿಸಲು ಪೊಲೀಸ್, ಸೈನಿಕರು ಮತ್ತು ಆಡಳಿತ ವ್ಯವಸ್ಥೆ ಇದೆ. ಅವರು ಎಷ್ಟು ಸಾಧ್ಯವೋ ಅ…
ಮುಂದೆ ಓದಿ...