ಡಿಸೆಂಬರ್ 6 … ಬ್ರೇಕಿಂಗ್ ನ್ಯೂಸ್..!. (ಭಾಗ 1)
5 hours 58 minutes ago - Shreerama Diwana
ಭಾರತದ ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರಾಗಿದ್ದ ಮಹಾ ಮಾನವತಾವಾದಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಪರಿನಿರ್ವಾಣ ಹೊಂದಿದ ದಿನ. ಹೀಗೊಂದು ಸುದ್ದಿ ನಿನ್ನೆ ನಮ್ಮ ಟಿವಿ ಮಾಧ್ಯಮಗಳಲ್ಲಿ ಪ್ರಸಾರವಾಗಬಹುದು ಎಂದು ನಿರೀಕ್ಷಿಸಿದ್ದೆ. ಕನಿಷ್ಠ ಅಂಬೇಡ್ಕರ್ ಅವರ ಬಗ್ಗೆ ಅಥವಾ ಸಂವಿಧಾನದ ಬಗ್ಗೆ ಚರ್ಚೆಗಳು ಆಗಬಹುದು ಎಂಬ ನಿರೀಕ್ಷೆಯೂ ನಿಜವಾಗಲಿಲ್ಲ.
ದೇಶದ ಸಮಗ್ರ ಒಳಿತಿಗಾಗಿ ಹೋರಾಡಿದ ಬಸವಣ್ಣ, ಅಕ್ಕಮಹಾದೇವಿ, ಗಾಂಧಿ, ಅಂಬೇಡ್ಕರ್, ಸ್ವಾಮಿ ವಿವೇಕಾನಂದ, ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್, ಕಿತ್ತೂರು ರಾಣಿ ಚೆನ್ನಮ್ಮ ಮುಂತಾದ ಯಾರೂ ಬ್ರೇಕಿಂಗ್ ನ್ಯೂಸ್ ಇರಲಿ ಸಣ್ಣ ಸುದ್ದಿಯೂ ಆಗುವುದಿಲ್ಲ. ಅವರ ವಿಚಾರಗಳ ಚಿಂತನ ಮಂಥನ ನಡೆಸುವುದಿಲ್ಲ. ಕಾಸಿಗಾಗಿ ಸುದ್ದಿ - ಬದುಕಿಗಾಗಿ ಸುದ್ದಿ - ಸ್ಪರ್ಧೆಗಾಗಿ ಸುದ್ದಿ - ಪ್ರಖ್ಯಾತಿಗಾಗಿ ಸುದ್ದಿ - ಸುದ್ದಿಗಾಗಿ ಸುದ್ದಿಯ ಸೃಷ್ಟಿ.
ಮಾಧ್ಯಮಗಳು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಯಾವುದು ಸುದ್ದಿ - ಯಾವುದಕ್ಕೆ ಎಷ್ಟು ಮಹತ್ವ ಕೊಡಬೇಕು, ಯಾವುದನ್ನು ಪ್ರಸಾರ ಮಾಡಬೇಕು - ಯಾವುದನ್ನು ನಿರ್ಲಕ್ಷಿಸಬೇಕು - ಯಾವುದು ನಮ್ಮ ಜವಾಬ್ದಾರಿ, ಯಾವುದು ನಮ್ಮ ಕರ್ತವ್ಯ - ಯಾವುದು ನಮ್ಮ ನೈತಿಕ ಹೊಣೆಗಾರಿಕೆ ಎಲ್ಲವನ್ನೂ ಮತ್ತೊಮ್ಮೆ ಆತ್ಮ ವಿಮರ್ಶೆಗೆ ಒಳಪಡಿಸಿಕೊಳ್ಖಬೇಕಿದೆ. ಆದರೆ ಮಾಧ್ಯಮಗಳು ಮೌಲ್ಯಗಳ ಕುಸಿತಕ್ಕೆ ಕಾರಣವಾಗುತ್ತಿರುವುದು ಮಾತ್ರವಲ್ಲ ವಿರುದ್ಧ ಮೌಲ್ಯಗಳಿಗೆ ಮಾನ್ಯತೆ ಕೊಡುತ್ತಿರುವುದು ವಿಷಾದನೀಯ. ಅವರು ಮಾಡದ ಕೆಲಸವನ್ನು ಸಾಮಾನ್ಯ ಜನರಾದ ನಾವು ನಮಗೆ ದೊರೆತ ಸಾಮಾಜಿಕ ಜಾಲತಾಣಗಳ ನಮ್ಮ ಮಿತಿಯಲ್ಲಿ ಮಾಡುವ ಪ್ರಯತ್ನ ಮಾಡೋಣ. ಬಾಬಾ ಸಾಹೇಬ್ ಅವರ ಪರಿನಿರ್ವಾಣ ಹೊಂದಿದ ಇಂದಿನ ದಿನದ ನೆನಪಿನಲ್ಲಿ...
ಭಾರತದ ಇತಿಹಾಸದ ಪುಟಗಳಲ್ಲಿ… ಮುಂದೆ ಓದಿ...