ನಿಷ್ಪಾಪಿ ಸಸ್ಯಗಳು (ಭಾಗ ೨೬) - ಚೆನರ ಬಳ್ಳಿ
7 hours 38 minutes ago - ಬರಹಗಾರರ ಬಳಗ
ಬಂಟ್ವಾಳ ತಾಲೂಕಿನ ಕೊಳ್ನಾಡು ಗ್ರಾಮದಲ್ಲಿ ಕಲೆಂಜಿಮಲೆ ಎಂಬ ಸರಕಾರೀ ರಕ್ಷಿತಾರಣ್ಯವಿದೆ.1960 ರ ಕಾಲಘಟ್ಟದಲ್ಲಿ ಅದೊಂದು ಕುಗ್ರಾಮ. ಮೂಡಣದ ಪಶ್ಚಿಮಘಟ್ಟಗಳು ಇಳಿಬಿಟ್ಟ ಪಾದಗಳಂತೆ ಈ ಕಲೆಂಜಿಮಲೆ. ಆ ಕಾಲದಲ್ಲಿ ಈ ಕಲೆಂಜಿಮಲೆ ಕಬ್ಬಿಣದ ಅದಿರಿನ ನಿಕ್ಷೇಪವಿರುವ ಸ್ಥಳವೆಂದು ಗುರುತಿಸಲ್ಪಟ್ಟಿತ್ತು. ಅದರ ಸಂಶೋಧನೆಗಾಗಿ ದೂರದ ಬಂಗಾಳದಿಂದ ಭಾರತ ವಿಭಜನೆಯಾದಾಗ ನಿರಾಶ್ರಿತರಾಗಿ ಬಂದ ಧೀರೇಂದ್ರ ನಾಥ ಭಟ್ಟಾಚಾರ್ಯರು ನೇಮಕವಾಗಿದ್ದರು. ಅವರು ಕಾರಣಾಂತರದಿಂದ ಆ ಕೆಲಸ ಬಿಟ್ಟು 1963 ರಲ್ಲಿ ಕನ್ಯಾನದ ಭಾರತ ಸೇವಾಶ್ರಮವನ್ನು ಕಟ್ಟಿ ಬೆಳೆಸಿದುದು ಈಗ ಇತಿಹಾಸ.
ಈ ಹಿನ್ನೆಲೆ ಏಕೆ ಹೇಳುತ್ತಿರುವೆನೆಂದರೆ ಅಂದು ಕಬ್ಬಿಣದ ಅದಿರು ತೆಗೆಯಲು ಗುಡ್ಡ ಕಾಡು ಬಗೆಯುತ್ತಿದ್ದರೆ ಇಂದು ರಕ್ಷಿತಾರಣ್ಯದ ಜಾಗವೇ ಬಂಜರಾಗುತ್ತಿತ್ತು ಅಲ್ಲವೇ? ದೊಡ್ಡ ಮರಗಳು ಕಣ್ಮರೆಯಾಗಿದ್ದರೂ ಕನಿಷ್ಟ ಒಂದಿಷ್ಟು ನೆರಳು, ಸಣ್ಣ ಪುಟ್ಟ ಸಸ್ಯಗಳು ಉಳಿದುಕೊಂಡಿವೆ. ಈಗ ಈ ರಕ್ಷಿತಾರಣ್ಯದ ನಡುವೆ ಉತ್ತಮ ಮಾರ್ಗದ ಸೌಲಭ್ಯವಿದೆ. ಹಾಗೆಯೇ ಅಲ್ಲಲ್ಲಿ ಮಾನವನ ಹೆಜ್ಜೆಗುರುತಾಗಿ ಪ್ಲಾಸ್ಟಿಕ್ ರಾಶಿಗಳೂ ಇವೆ.
ನಾನು ಇತ್ತೀಚೆಗೆ ಈ ಮಾರ್ಗದಲ್ಲಿ ಸಂಚರಿಸಿದಾಗ ವಿಶಿಷ್ಟ ರಚನೆಯಲ್ಲಿ ಗೋಳಾಕಾರವಾಗಿ ಬಟಾಣಿಯಷ್ಟೆ ಗಾತ್ರದ ಹತ್ತು ಹದಿನೈದು ಕಾಯಿಗಳನ್ನು ಜೊತೆಸೇರಿಸಿಕೊಂಡ ಗೊಂಚಲುಗಳನ್ನು ನೋಡಿದೆ. ಮಾರ್ಗದ ಇಕ್ಕೆಲಗಳಲ್ಲಿ ಹಲವು ಕಡೆ ಇದರ ಬಳ್ಳಿಗಳು ಮರಗಳಿಂದ ಇಳಿಬಿದ್ದಿದ್ದವು. ಬಳ್ಳಿ ನಯವಾಗಿದ್ದು ಮುಳ್ಳುಗಳಿಂದ ಕೂಡಿದೆ. ಪರ್ಯಾಯ ರಚನೆಯಲ್ಲಿ ಅಂಡಾಕಾರವಾದ ರೋಮರಹಿತ ಎಲೆಗಳು ಅಗಲವಾಗಿದ್ದು ತುದಿಯಲ್ಲಿ ಚೂಪಾಗಿರುತ್ತವೆ. ಎಲೆಗಳಲ್ಲಿ ಐದು ದಪ್ಪ ಸಿರೆಗಳಿದ್ದು ಹೊಳಪಾಗಿರುತ್ತವೆ. ಹಳದಿ ಬಣ್ಣದ ಸುಂದರ ಪುಷ್ಪ ಮಂಜರಿಯನ್ನು ಹೊಂದಿರುವ ಈ ಬಳ… ಮುಂದೆ ಓದಿ...