ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಕ್ಕೆ ಸರಕಾರ ತಕ್ಷಣ ಕ್ರಮ ಕೈಗೊಳ್ಳಲಿ
1 day 22 hours ago - Ashwin Rao K P
ರಾಜ್ಯದ ಸರಕಾರಿ ಶಾಲೆಗಳಲ್ಲಿ ಗಣಿತ ಮತ್ತು ವಿಜ್ಞಾನ ಶಿಕ್ಷಕರ ಭಾರೀ ಕೊರತೆ ಇರುವುದು ಬಹಳ ದೊಡ್ಡ ವಿಪರ್ಯಾಸ. ಈ ಎರಡು ಪ್ರಮುಖ ವಿಷಯಗಳ ಸಹಿತ ರಾಜ್ಯದ ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಒಟ್ಟು ೫೦ ಸಾವಿರ ಶಿಕ್ಷಕರ ಹುದ್ದೆಗಳು ಭರ್ತಿಯಾಗದೆ ಖಾಲಿ ಇವೆ. ಪ್ರಾಥಮಿಕ ತರಗತಿಗಳಲ್ಲಿ ಗಣಿತ, ವಿಜ್ಞಾನ ಸಹಿತ ಎಲ್ಲ ವಿಷಯಗಳ ಬೋಧನೆ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಬಹುಮುಖ್ಯ. ‘ಒಂದು ಕಾಲದಲ್ಲಿ ಸರಕಾರಿ ಕನ್ನಡ ಶಾಲೆಗಳಲ್ಲಿ ಕಲಿತವರು ಮುಂದೆ ಅತ್ಯುನ್ನತ ಹುದ್ದೆಗಳನ್ನು ಅಲಂಕರಿಸಿದರು.’ ಎಂಬ ಸಾಮಾನ್ಯವಾಗಿ ಕೇಳಿ ಬರುವ ಮಾತಿಗೆ ಆ ಒಂದು ಕಾಲದಲ್ಲಿ ಸರಕಾರಿ ಶಾಲೆಗಳಲ್ಲಿ ಅಧ್ಯಾಪನವು ಸಶಕ್ತವಾಗಿತ್ತು ಎಂಬುದೇ ಕಾರಣ. ಪ್ರಸ್ತುತ ಪ್ರಾಥಮಿಕ ತರಗತಿಗಳಲ್ಲಿ ಬೋಧನೆಯು ಶಿಕ್ಷಕರ ಕೊರತೆಯಿಂದ ಬಹಳ ದುರ್ಬಲವಾಗಿದೆ ಎಂದರೆ ಭವಿಷ್ಯದ ಹಲವು ತಲೆಮಾರುಗಳು ದುರ್ಬಲಗೊಳ್ಳುತ್ತವೆ ಎಂದರೆ ಅತಿಶಯವಾಗದು. ಸರಕಾರವು ಉಪೇಕ್ಷೆ ಮಾಡದೆ ಕೂಡಲೇ ಪ್ರಾಥಮಿಕ ಶಾಲೆಗಳಿಗೆ ಸಮರ್ಥ ಶಿಕ್ಷಕರನ್ನು ಅಗತ್ಯವಿದ್ದಷ್ಟು ಸಂಖ್ಯೆಯಲ್ಲಿ ನೇಮಕ ಮಾಡಲು ಸೂಕ್ತ ಕ್ರಮವನ್ನು ಕೈಗೊಳ್ಳಬೇಕಾದುದು ಅತೀ ಅಗತ್ಯ.
ವೈದ್ಯಕೀಯ, ಎಂಜಿನಿಯರಿಂಗ್ ಇತ್ಯಾದಿ ಉನ್ನತ ಕಲಿಕೆಗೆ ಮಾತ್ರವಷ್ಟೇ ಅಲ್ಲದೆ ಎಲ್ಲ ವಿದ್ಯಾರ್ಥಿಗಳ ಭವಿಷ್ಯಕ್ಕೂ ಪ್ರಾಥಮಿಕ ತರಗತಿಗಳಲ್ಲಿ ಗಣಿತ, ವಿಜ್ಞಾನ ಬೋಧನೆ ಸಶಕ್ತವಾಗಿ ನಡೆಯುವುದು ಅಗತ್ಯ. ಪ್ರಸ್ತುತ ರಾಜ್ಯದ ಪ್ರಾಥಮಿಕ ಶಾಲೆಗಳಲ್ಲಿ ಗಣಿತ ಮತ್ತು ವಿಜ್ಞಾನ ವಿಷಯಗಳ ಬೋಧನೆಗೆ ೧೯,೦೭೨ ಮಂದಿ ಶಿಕ್ಷಕರ ಕೊರತೆ ಇದೆ. ಒಟ್ಟಾರೆಯಾಗಿ ೫೦ ಸಾವಿರ ಶಿಕ್ಷಕರ ಹುದ್ದೆಗಳು ಭರ್ತಿಯಾಗಬೇಕಾಗಿವೆ. ಗಣಿತ ಮತ್ತು ವಿಜ್ಞಾನ ಶಿಕ್ಷಕರ ಕೊರತೆಯೂ ಒಂದು ಕಾರಣವಾಗಿ ಸರಕಾರಿ ಹಾಗೂ ಖಾಸಗಿ ಶಾಲೆಗಳ ವಿದ್ಯಾರ್ಥಿಗಳಲ್ಲಿ ಗಣಿತ ಕೌ… ಮುಂದೆ ಓದಿ...