‘ಮಿಸ್ಟರ್ ಭಾರತ್’ ನೆನಪಿನಲ್ಲಿ…
2 days ago - Ashwin Rao K P
ನಿಮಗೂ ನೆನಪಿರಬಹುದು, ೮೦ ಹಾಗೂ ೯೦ರ ದಶಕದಲ್ಲಿ ದೂರದರ್ಶನಗಳು (ಟಿವಿ) ನಮ್ಮ ನಮ್ಮ ಮನೆಯನ್ನು ಹೊಕ್ಕಿದ್ದವಷ್ಟೇ. ನಿರ್ಧಾರಿತ ಸಮಯಕ್ಕೆ ಮಾತ್ರ ಕಾರ್ಯಕ್ರಮಗಳು. ಈಗಿನಂತೆ ನೂರಾರು ಚಾನೆಲ್ ಗಳ ಭರಾಟೆ ಇಲ್ಲ. ದೂರದರ್ಶನ ಎನ್ನುವ ಸರಕಾರಿ ಚಾನೆಲ್. ಅವರು ತೋರಿಸಿದ್ದನ್ನು ನಾವು ನೋಡಬೇಕು. ಹೀಗಿರುವಾಗ ನಾನು ‘ಉಪಕಾರ್’ ಎಂಬ ಹಿಂದಿ (ಆಗಿನ್ನೂ ಕನ್ನಡ ವಾಹಿನಿ ಚಂದನ ಪ್ರಾರಂಭವಾಗಿರಲಿಲ್ಲ) ಚಲನಚಿತ್ರವನ್ನು ದೂರದರ್ಶನದಲ್ಲಿ ನೋಡಿದೆ. ೧೯೬೫ರ ಭಾರತ - ಪಾಕಿಸ್ತಾನ ಯುದ್ಧದ ಕಥೆಯನ್ನು ಹಾಗೂ ಅಂದಿನ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಖ್ಯಾತ ಘೋಷ ವಾಕ್ಯ ‘ಜೈ ಜವಾನ್ ಜೈ ಕಿಸಾನ್’ ಎನ್ನುವುದನ್ನು ಆಧಾರವಾಗಿರಿಸಿಕೊಂಡು ೧೯೬೭ರಲ್ಲಿ ತಯಾರಿಸಲಾದ ಚಿತ್ರ ಉಪಕಾರ್. ಕೃಷಿಕ ಕುಟುಂಬದ ಯುವಕನೊಬ್ಬ ದೇಶಕ್ಕಾಗಿ ಮಾಡುವ ತ್ಯಾಗದ ಕುರಿತಾಗಿದ್ದ ಮನೋಜ್ಞ ಚಿತ್ರ ಇದು. ಆ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದು ಮನೋಜ್ ಕುಮಾರ್ ಎನ್ನುವ ಸ್ಫುರದ್ರೂಪಿ ಯುವಕ. ಆಶಾ ಪಾರೇಖ್ ನಾಯಕಿಯಾಗಿದ್ದ ಈ ಚಿತ್ರದಲ್ಲಿ ಪ್ರಾಣ್, ಪ್ರೇಮ್ ಚೋಪ್ರಾ ಮೊದಲಾದವರೂ ನಟಿಸಿದ್ದರು. ‘ಮೇರೆ ದೇಶ್ ಕಿ ಧರತಿ ಸೋನಾ ಉಗಲೇ…’ ಎನ್ನುವ ಹಾಡು ಆ ಕಾಲದ (ಈಗಲೂ) ಸೂಪರ್ ಹಿಟ್ ಗೀತೆಯಾಗಿತ್ತು. ದೇಶ ಭಕ್ತಿಯ ಕಿಚ್ಚನ್ನು ಹಚ್ಚುವ ಈ ಗೀತೆ ‘ಉಪಕಾರ್’ ಎಂಬ ಸಿನೆಮಾದ್ದು.
ಆ ಸಿನೆಮಾದ ಕೊನೆಯ ದೃಶ್ಯದಲ್ಲಿ ಮನೋಜ್ ಕುಮಾರ್ ಅವರ ಎರಡೂ ಕೈಗಳು ಯುದ್ಧದಲ್ಲಿ ಗಾಯಗೊಂಡು ಕತ್ತರಿಸಬೇಕಾದ ಅನಿವಾರ್ಯ ಪರಿಸ್ಥಿತಿ ಬರುತ್ತದೆ. ಆಗ ಅವರು ಕೊನೆಯ ಬಾರಿ ತನ್ನ ಕೈಯಿಂದ ತಮ್ಮ ಹೊಲದ ಮಣ್ಣನ್ನು ಮುಟ್ಟ ಬೇಕೆಂದು ಆಸೆ ಪಡುತ್ತಾರೆ. ಒಬ್ಬ ಜವಾನ್ (ಸೈನಿಕ) ನಾದರೂ ಮೂಲತಃ ಕಿಸಾನ್ (ರೈತ) ಆಗಿದ್ದ ಮನೋಜ್ ಕುಮಾರ್ ಅವರ ಆ ಸಮಯದ ನಟನೆ ಎಲ್ಲರ ಕಣ್ಣಲ್ಲೂ ನೀ… ಮುಂದೆ ಓದಿ...