ನಿಷ್ಪಾಪಿ ಸಸ್ಯಗಳು (ಭಾಗ ೧೦೮) - ಅಂತರಗಂಗೆ
1 day ago- ಬರಹಗಾರರ ಬಳಗಪ್ರಕೃತಿಯಲ್ಲಿ ವರ್ಷ ಋತು ಆರಂಭವಾಗಿ ಹಲವಾರು ದಿನಗಳೇ ಸರಿದಿವೆ. ಕಣ್ಮನ ತಣಿಸುವ ಹಸಿರು ನಮ್ಮ ಸುತ್ತಲಿರುವ ಗುಡ್ಡಬೆಟ್ಟ, ಬಯಲು ತಪ್ಪಲಲ್ಲಿ ಹಬ್ಬಿವೆ. ಹಸಿರು ಈ ಸ್ಥಳಗಳನ್ನಲ್ಲದೆ ಕೆಲವೊಮ್ಮೆ ನೀರನ್ನೂ ಬಿಡದೆ ಆವರಿಸಿರುವುದನ್ನು ಕಾಣಬಹುದು. ಅವುಗಳ ಸೌಂದರ್ಯವನ್ನು ಕಂಡು ಕೆಲವೊಮ್ಮೆ ನಾವು ಮನೆಯಂಗಳಕ್ಕೆ ತರುವುದೇ ಅಲ್ಲದೆ, ಉದ್ಯಾನವನ, ಅಕ್ವೇರಿಯಮ್, ಕೆರೆ, ಕೊಳಗಳಲ್ಲೂ ಸ್ಥಾನ ನೀಡಿ ಖುಷಿ ಪಡೆಯುತ್ತೇವೆ. ಇಂತಹ ಒಂದು ಸಸ್ಯವೇ ಅಂತರಗಂಗೆ!
ಇದರ ಮೋಹಕವಾದ ರಚನೆ, ಎಲೆಗಳ ವೈಯ್ಯಾರದ ಅಂಚು, ತಿಳಿ ಹಸಿರು ಬಣ್ಣ, ಮಾತನಾಡುತ್ತಿದೆಯೇನೋ ಎಂಬಷ್ಟು ಮುಗ್ಧತೆಯೇ ಚುಂಬಕದಂತೆ ಸೆಳೆವ ಶಕ್ತಿ! ಅವುಗಳನ್ನು ಹಾಕಿದ ನೀರಿಗೆ ಒಂದಿಷ್ಟು ಸೆಗಣಿ ನೀರು ಸೇರಿಸಿದರಂತೂ ಅಂಗನವಾಡಿ ಮಕ್ಕಳಂತೆ ನಕ್ಕು ನಲಿಯುತ್ತವೆ. ಮೇಲ್ನೋಟಕ್ಕೆ ತಾವರೆಯ ಹೋಲಿಕೆ ತೋರುವ ಈ… ಮುಂದೆ ಓದಿ...