ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಜಾತಿ ಜನಗಣತಿ ವರದಿ ಬಗ್ಗೆ ಚರ್ಚೆ - ಸಂವಾದ ಅಗತ್ಯ

ಶೀಘ್ರ, ಸದ್ಯ, ಬೇಗ ಎಂದು ದಿನದೂಡುತ್ತಲೇ ಬಂದಿದ್ದ ‘ಜಾತಿ ಜನಗಣತಿ’ ಎಂದೇ ಕರೆಯಲಾಗುವ ‘ಸಾಮಾಜಿಕ -ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷಾ ವರದಿ ಕೊನೆಗೂ ರಾಜ್ಯ ಸಚಿವ ಸಂಪುಟದಲ್ಲಿ ಮಂಡನೆಯಾಗಿರುವುದು ಒಂದು ರೀತಿ ಗಜ ಪ್ರಸವದಂತಹ ಬೆಳವಣಿಗೆ. ಸಮೀಕ್ಷೆ ನಡೆದಿರುವುದು ೨೦೧೫ರಲ್ಲಿ. ಅಂದರೆ ಹತ್ತು ವರ್ಷಗಳ ಹಿಂದೆ. ಅದು ಸರ್ಕಾರಕ್ಕೆ ಸಲ್ಲಿಕೆಯಾಗಿದ್ದು ಕಳೆದ ಮಾರ್ಚ್ ನಲ್ಲಿ. ಅಂದರೆ ವರ್ಷದ ಹಿಂದೆ.

Image

ಭವಿಷ್ಯದ ಸಮಾಜಕ್ಕಾಗಿ...

ಮುಂದಿನ ಸುಮಾರು 15 ವರ್ಷಗಳಲ್ಲಿ ನಮ್ಮ ಮಕ್ಕಳ ಭವಿಷ್ಯ ಉತ್ತಮವಾಗಿರಬೇಕಾದರೆ, ಈ ಸಮಾಜ ನಾವು ಈಗಿರುವ ಪರಿಸ್ಥಿತಿಗಿಂತ ಒಳ್ಳೆಯ ಗುಣಮಟ್ಟದ ಸಮಾಜವಾಗಬೇಕು ಎಂದು ಬಯಸುವಿರಾದರೆ ಪೋಷಕರು ಮಾಡಬಹುದಾದ ಕೆಲವು ಜವಾಬ್ದಾರಿ ಮತ್ತು ಕರ್ತವ್ಯಗಳು.

Image

ಸ್ಟೇಟಸ್ ಕತೆಗಳು (ಭಾಗ ೧೨೮೯) - ಬೆಲೆ

ಮನೆಯ ಮುಂದಿನ ಕೋಣೆಯಲ್ಲಿ ಉಸಿರು ನಿಂತ ದೇಹ ಮಲಗಿಬಿಟ್ಟಿದೆ. ಇಷ್ಟು ದಿನದವರೆಗೆ ಮನೆ ಚೆನ್ನಾಗಿ ಉಸಿರಾಡುವಂತೆ ಮಾಡುವುದಕ್ಕೆ ಪ್ರಯತ್ನಪಟ್ಟ ಆ ಮನೆಯ ಜೀವ ಪ್ರಾಣ ಕಳೆದುಕೊಂಡು ಬಿಟ್ಟಿದೆ. ಮನೆಯಲ್ಲಿ ಈ ಸಾವನ್ನ ಸಂಭ್ರಮಿಸುವವರು ಸೇರಿಕೊಂಡಿದ್ದಾರೆ.

Image

ಆಕರ್ಷಕ ವರ್ಣದ ನೀಲಿ ಸಿಳ್ಳಾರ ಹಕ್ಕಿ

ಈ ಬಾರಿ ಬೇಸಗೆ ರಜೆಯಲ್ಲಿ ಸ್ನೇಹಿತರೊಬ್ಬರ ಮನೆಗೆ ಹೋಗಿದ್ದೆ. ಅವರ ಮಗಳು ಈ ಬಾರಿ ಹತ್ತನೆಯ ತರಗತಿ. ಅವಳಿಗೂ ಫೋಟೋಗ್ರಫಿ ಎಂದರೆ ಆಸಕ್ತಿ. ಪರೀಕ್ಷೆಗಳು ಮುಗಿದಿದ್ದವು. ತಂದೆ ಕೊಡಿಸಿದ ಕ್ಯಾಮರಾದಲ್ಲಿ ತನಗೆ ಇಷ್ಟವಾದ ಹೂವು, ಗಿಡ, ಚಿಟ್ಟೆ, ಪಕ್ಷಿ ಹೀಗೆ ಹಲವಾರು ವಿಷಯಗಳ ಫೋಟೋ ತೆಗೆದದ್ದನ್ನು ನನಗೆ ತೋರಿಸುತ್ತಿದ್ದಳು. ಅವಳು ತೋರಿಸುತ್ತಿದ್ದ ಫೋಟೋಗಳ ನಡುವೆ ಒಂದು ಸುಂದರವಾದ ಹಕ್ಕಿಯ ಫೋಟೋ ಕಾಣಿಸಿತು.

Image

ಸ್ಟೇಟಸ್ ಕತೆಗಳು (ಭಾಗ ೧೨೮೮) - ಪಾಠ

ಜೊತೆಗೆ ಯಾರು ಇಲ್ಲ ಹೀಗಾದರೆ ಸಂತೋಷ ಕಂಡುಕೊಳ್ಳುವುದು ಹೇಗೆ ? ಒಬ್ಬಂಟಿಯಾಗಿ ಉಳಿದುಬಿಟ್ಟರೆ ಬದುಕಿನ ಮುಂದೆ ದಾರಿ ಹೇಗೆ, ದಿನವನ್ನು ದೂಡುವುದು ಹೇಗೆ? ಒಟ್ಟಿನಲ್ಲಿ ಬದುಕುವುದು ಹೇಗೆ? ಹಾಗಾಗಿ ಅವಕಾಶಗಳಿಗಾದ್ರೂ ಬದುಕಿನ ಬದಲಾವಣೆಗಾದರೂ ಯಾರ ಬಳಿಯಾದರೂ ಬೇಡಿಕೊಳ್ಳಬೇಕು, ಕೇಳಿಕೊಳ್ಳಬೇಕು. ಹೀಗೆಂದು ಯೋಚನೆ ಮಾಡುತ್ತಿದ್ದವ ಅಪ್ಪನ ಬಳಿ ನೇರವಾಗಿ ಈ ವಿಷಯವನ್ನು ಹೇಳಿದ.

Image

ಝೆನ್ ಕಥೆ : ಇದಲ್ಲ ಇದಲ್ಲ !

ಎಯ್ ಹೆಯ್ ಆಶ್ರಮದಲ್ಲಿ ಧ್ಯಾನ ಕಲಿಕೆಯ ವಿದ್ಯಾರ್ಥಿಯಾಗಿದ್ದ ಕಿತಾನೋ ಗೆಂಪೋ ಸನ್ಯಾಸ ಸ್ವೀಕರಿಸಿ ತನ್ನ ೨೦ರ ಹರೆಯದಲ್ಲಿ ಪಾರಿವ್ರಾಜಕನಾಗಿ ಅಲೆಯುತ್ತಿದ್ದಾಗ ಒಂದು ದಿನ ಅವನಿಗೆ ತಂಬಾಕು ಸೇದುವವನೊಬ್ಬನ ಪರಿಚಯವಾಯಿತು. ಆ ಪರ್ವತಮಯ ಪ್ರದೇಶದಲ್ಲಿ ಆಕಸ್ಮಿಕವಾಗಿ ಸಿಕ್ಕ ಈ ಅಪರಿಚಿತ ವ್ಯಕ್ತೊಯೊಂದಿಗೆ ಸಾಗುತ್ತಿದ್ದಾಗ ಸಹಜವಾಗಿ ಕಿತಾನೋನ ಗಮನ ಆತನ ಬಳಿಯಿದ್ದ ತಂಬಾಕಿಬ ಚಿಲುಮೆಯತ್ತ ಹರಿಯಿತು.

Image

ಸಾಧನೆಯ ಸುಗ್ಗಿ

ಪುಸ್ತಕದ ಲೇಖಕ/ಕವಿಯ ಹೆಸರು
ನಾಗರಾಜು ಕೆಂಪಯ್ಯ
ಪ್ರಕಾಶಕರು
ಪುರು ಪ್ರಕಾಶನ, ಹೊಸಕೋಟೆ, ಬೆಂಗಳೂರು ಗ್ರಾಮಾಂತರ
ಪುಸ್ತಕದ ಬೆಲೆ
ರೂ. ೨೦೦.೦೦, ಮುದ್ರಣ: ೨೦೨೪

‘ಸಾಧನೆಯ ಸು‌ಗ್ಗಿ’ ನಾಗರಾಜು ಕೆಂಪಯ್ಯ ಅವರ ಕಾದಂಬರಿ. ಅಂತರ್ ಜಾತಿ ವಿವಾಹವಾದ ದಂಪತಿಗಳಿಗೆ ಜನಿಸಿದ ವ್ಯಕ್ತಿಯೋರ್ವನ ಜೀವನದ ಕಥೆ ಇಲ್ಲಿದೆ. ಆ ಹುಡುಗನ ಜೀವನ ವೃತ್ತಾಂತದ ಏಳು ಬೀಳುಗಳನ್ನು ಈ ಕೃತಿಯು ಒಳಗೊಂಡಿದೆ.