ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಆಲೂ ದಹಿ ಚಾಟ್

Image

ಆಲೂಗೆಡ್ಡೆಗಳನ್ನು ಬೇಯಿಸಿ ಸಿಪ್ಪೆ ತೆಗೆದು ಕಂದು ಬಣ್ಣ ಬರುವವರೆಗೆ ಎಣ್ಣೆಯಲ್ಲಿ ಹುರಿಯಿರಿ. ಹುರಿದ ಆಲೂಗೆಡ್ಡೆಗಳನ್ನು ತಟ್ಟೆಯಲ್ಲಿ ಜೋಡಿಸಿ ಮೊಸರು, ಉಪ್ಪು, ಸಿಹಿ ಚಟ್ನಿ, ಜೀರಿಗೆ ಹುಡಿ, ಕಾಳುಮೆಣಸಿನ ಹುಡಿ, ಚಾಟ್ ಮಸಾಲೆ, ಕೊತ್ತಂಬರಿ ಸೊಪ್ಪು, ಮೊಳಕೆ ಬರಿಸಿದ ಕಾಳುಗಳು, ಖಾರಾ ಸೇವ್ ಹಾಕಿದರೆ ರುಚಿ ರುಚಿಯಾದ ಆಲೂ ದಹಿ ಚಾಟ್ ಸವಿಯಲು ರೆಡಿ.

ಬೇಕಿರುವ ಸಾಮಗ್ರಿ

ಚಿಕ್ಕ ಗಾತ್ರದ ಆಲೂಗೆಡ್ಡೆ (ಬಟಾಟೆ)- ೫, ಮೊಸರು - ೨ ಕಪ್, ಸಿಹಿ ಚಟ್ನಿ - ೩ ಚಮಚ, ಜೀರಿಗೆ ಹುಡಿ - ೨ ಚಮಚ, ಕಾಳುಮೆಣಸಿನ ಹುಡಿ - ೩ ಚಮಚ, ಚಟ್ ಮಸಾಲೆ - ೩ ಚಮಚ, ಮೊಳಕೆ ಬರಿಸಿದ ಕಾಳುಗಳು - ಅರ್ಧ ಕಪ್, ಕತ್ತರಿಸಿದ ಕೊತ್ತಂಬರಿ ಸೊಪ್ಪು - ೩ ಚಮಚ, ಖಾರಾ ಸೇವ್ - ೧ ಕಪ್, ಕರಿಯಲು ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು.

ಸೌಂದರ್ಯ ಪ್ರಜ್ಞೆ ಮತ್ತು ಜಾಹೀರಾತು

ಮನುಷ್ಯ ರೂಪದ ಸೌಂದರ್ಯ ಪ್ರಜ್ಞೆ ಎಂಬ ವಿಸ್ಮಯ. ಒಬ್ಬ ಅತ್ಯಂತ ಸುಂದರ ಯುವಕ/ ಯುವತಿ ನಮಗೆ ಪರಿಚಯವಾಗುತ್ತಾರೆ. ಕೊನೆಗೆ ಅದು ಆತ್ಮೀಯ ಸ್ನೇಹವಾಗಿ ಮುಂದೆ ವ್ಯಾವಹಾರಿಕ ಸಂಬಂಧವೂ ಏರ್ಪಡುತ್ತದೆ. ಆಗ ಆ ವ್ಯಕ್ತಿ ನಮ್ಮ ಜೊತೆ ಉತ್ತಮ ಬಾಂಧವ್ಯ ಹೊಂದಿರುವವರೆಗೂ ಆತ ಅಥವಾ ಆಕೆ ಸುಂದರವಾಗಿಯೇ ಕಾಣುತ್ತಾರೆ.

Image

ಸ್ಟೇಟಸ್ ಕತೆಗಳು (ಭಾಗ ೧೧೨೨)- ಸಭೆ

ಇವತ್ತು ಮನೆಯ ಬಾಗಿಲ ಸಂದಿಯಲ್ಲಿ ಯಾವುದೋ ಒಂದು ಸಭೆ ನಡೆಯುತ್ತಿತ್ತು. ನನ್ನ ಮನೆಯಲ್ಲಿ ನನ್ನ ಅನುಮತಿ ಇಲ್ಲದೆ ನಡೆಯುತ್ತಿದ್ದ ಸಭೆ ಯಾವುದು ಅಂತ ಬಾಗಿಲನ್ನು ಸ್ವಲ್ಪ ಸರಿಸಿದೇ, ಸೊಳ್ಳೆಗಳ ದೊಡ್ಡ ಗುಂಪು ಅಲ್ಲಿ ಸೇರಿತ್ತು. ಒಂದು ದೊಡ್ಡ ಸೊಳ್ಳೆ ಸ್ವಲ್ಪ ಎತ್ತರದಲ್ಲಿ ಕುಳಿತು ಏನೋ ಸಂದೇಶವನ್ನು ನೀಡುತ್ತಿತ್ತು.

Image

ಹೌದಲ್ವಾ…!

ನಮ್ಮದೇಶದಲ್ಲಿ ನಾವೆಲ್ಲರೂ ಒಂದೆ ! ಆದರೆ ಜಾತಿ ವಿಜಾತಿಗಳಿಂದ ನಾವು ದೂರ ದೂರವಾಗಿದ್ದೇವೆಯೆ ? ಹಾಗೇ ಕಾನೂನುಗಳು ಭಾರತೀಯರಿಗೆಲ್ಲಾ ಒಂದೆ! ಆದರೆ ಬಡವ ಬಲ್ಲಿದ , ಅಧಿಕಾರಿ ಅವರ ಅಂತಸ್ತು , ರಾಜಕೀಯ ಧುರೀಣರಿಗೇ ಜಾತಿಗಳಲ್ಲಿರುವಂತೆ ಕಾನೂನುಗಳಲ್ಲಿ ಹಲವು ಒಳ ಕಾನೂನುಗಳಿವೆ . ಇದರಿಂದಾಗಿಯೇ ನಮ್ಮ ಜನಸಾಮಾನ್ಯ ವರ್ಗ ಇಂದು ತುಂಬಾ ಬಲಹೀನವಾಗಿರಲು ಕಾರಣವಾಗಿದೆ !

Image

ಬದುಕು ಬರಹ ಬವಣೆ

ಪುಸ್ತಕದ ಲೇಖಕ/ಕವಿಯ ಹೆಸರು
ನಿರೂಪಣೆ: ಲಕ್ಷ್ಮೀ ಮಚ್ಚಿನ
ಪ್ರಕಾಶಕರು
ರೂಪ ಪ್ರಕಾಶನ, ಕೆ ಆರ್ ಮೊಹಲ್ಲಾ, ಮೈಸೂರು
ಪುಸ್ತಕದ ಬೆಲೆ
ರೂ. ೨೦೦.೦೦, ಮುದ್ರಣ: ೨೦೨೩

ಕೃಷಿಕ, ಲೇಖಕ, ಮಕ್ಕಳ ಸಾಹಿತಿ ಆಗಿರುವ ಪ. ರಾಮಕೃಷ್ಣ ಶಾಸ್ತ್ರಿಗಳ ‘ಬದುಕು ಬರಹ ಬವಣೆ' ಪುಸ್ತಕ ರೂಪದಲ್ಲಿ ಹೊರಬಂದಿದೆ. ಅವರ ಸುಪುತ್ರರೇ ಆಗಿರುವ ಪತ್ರಕರ್ತ ಲಕ್ಷ್ಮೀ ಮಚ್ಚಿನ ಅವರು ಈ ಕೃತಿಯ ನಿರೂಪಣೆ ಮಾಡಿದ್ದಾರೆ. ಈ ಕೃತಿಗೆ ಮುನ್ನುಡಿಯನ್ನು ಬರೆದಿದ್ದಾರೆ ಸಾಹಿತಿ ಎಸ್. ನಿತ್ಯಾನಂದ ಪಡ್ರೆ.

ಸರ್ಕಾರವೇ ಶೋಷಿಸುತ್ತಿರುವ ದಿನಗೂಲಿ ನೌಕರರು

ಬಿಸಿಯೂಟದ ಕಾರ್ಮಿಕರು ಮನುಷ್ಯರಲ್ಲವೇ ? ಅವರೇನು ಜೀತದಾಳುಗಳೇ ? ಅವರಿಗಾಗುತ್ತಿರುವ ಅನ್ಯಾಯಗಳನ್ನು ಕೇಳುವವರಾರು ? ಬಿಸಿಯೂಟದ ಕಾರ್ಯಕರ್ತರು ಅಂದರೆ ಸರ್ಕಾರಿ ಶಾಲೆಗಳಲ್ಲಿ ಅಡುಗೆ ಮಾಡುವವರಿಗೆ ಪ್ರತಿ ತಿಂಗಳು ಸರ್ಕಾರ 3700  ರೂಪಾಯಿಗಳನ್ನು ನೀಡುತ್ತಿದೆ. ಇದನ್ನು ಸಂಬಳ ಎನ್ನದೆ ಗೌರವಧನ ಎಂದು ಕರೆಯಲಾಗುತ್ತದೆ.

Image