ನನ್ನೊಲವೆ ನೀನಿರದೆ

ನನ್ನೊಲವೆ ನೀನಿರದೆ

ಕವನ

ನನ್ನೊಲವೆ ನೀನಿರದೆ

ಮುರಳಿ ಗಾನವು ಹೊಮ್ಮದೆ

ಕೃಷ್ಣನಂತೆಯೆ ಕಾದು ಕುಳಿತಿಹೆ

ರಾಧೆ ರಮಣಿಯೆ ಎಲ್ಲಿಹೆ 

 

ಮಧುರ ಭಾವವು ಚಿಮ್ಮಿ ಹೊಮ್ಮಿದೆ

ಮನಸು ಬಾರದೆ ಯಾಮಿನಿ

ಕೈಯ ಮುಗಿಯುತ ಬೇಡಿ ಕಾಡಿದೆ

ಸನಿಹ ನಿಲ್ಲೆಯ ಭಾಮಿನಿ

 

ಬಾನ ತಾರೆಯ ಅಂದ ಚೆಂದಕೆ

ನಿನ್ನ ಹೋಲಿಕೆ ಮಾಡಿಹೆ

ಮಿನುಗುವಂದದ ರಶ್ಮಿಯಂತೆಯೆ

ಮೊಗದ ಕಣ್ಣದು ಎಂದಿಹೆ

 

ಹೃದಯದೊಲವಿನ ಸವಿಯ ಮಾತನು

ಆಲಿಸುತ ನೀ ಬಾರೆಯಾ

ಪುಟ್ಟ ತನುವಲಿ ನೆಲೆಯ ನಿಲ್ಲುತ

ಮನಕೆ ಸಂತಸ ತಾರೆಯಾ

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ 

ಚಿತ್ರ್