ಎರಡು ಗಝಲ್ ಗಳು....

ಎರಡು ಗಝಲ್ ಗಳು....

ಕವನ

ಗಝಲ್ ೧

ಉಸಿರ ಕೊಡುತ ನಮಗೆ ಬದುಕ ನೀಡಿದ್ದೇ ಗಾಳಿ

ಬಿರುಗಾಳಿ ಬೀಸಿ ಬಾಳ ಮಣ್ಣು ಮಾಡಿದ್ದೇ ಗಾಳಿ

 

ಸಂಜೆಗೆ ಗಿಡಮರದ ಅಲುಗಾಟ ಜೋರಾಯಿತೇಕೆ

ಈ ಸುಂದರ ನೋಟಕ್ಕೆ ಸಂಗೀತ ಹಾಡಿದ್ದೇ ಗಾಳಿ

 

ಬನದ ಕಲರವದ ನಡುವೆಯೇ ಹುಡುಗಾಟವು

ಮುರಳಿಯ ಮೋಹದ ನಾದವ ಕಾಡಿದ್ದೇ ಗಾಳಿ

 

ಜಾತಿ ಬಣ್ಣದ ನಡುವೆಯೇ ಸುಣ್ಣವ ಮೆತ್ತಬೇಡ

ತನುವ ಬೆಸೆದಿರುವ ಪ್ರೀತಿಯನು ನೋಡಿದ್ದೇ ಗಾಳಿ

 

ಚಿಂತೆಯಾ ಮನದಲಿ ಬಯಕೆ ಇದೆಯಾ ಈಶ

ಮತ್ಸರದ ಮನವ ಇಂದು ಹೊರಗೆ ದೂಡಿದ್ದೇ ಗಾಳಿ

***

ಗಝಲ್ ೨

ಹಸಿರು ಸೀರೆಯ ಉಟ್ಟು ,ಮಲಗಿಹಳು ದಾತೆ

ಜಲರಾಶಿಯ ಜೊತೆಗೆ ,ಆಡಿಹಳು ದಾತೆ

 

ನೆಲದಗಲ ಅಗೆದು, ಖನಿಜವ ,ದೋಚುವರು

ಸಿರಿಯ ನಾಶವನು ತಡೆದು, ಗುಡುಗಿಹಳು ದಾತೆ

 

ನೋವು ಕೊಟ್ಟವರಿಗೆ, ಐಶ್ವರ್ಯದ ಭಾಗ್ಯ

ಕಣ್ಣಿದ್ದೂ ಕುರುಡರ, ಜರೆದಿಹಳು ದಾತೆ

 

ಬೆಟ್ಟದಾ ಮೇಲೆ, ಬರೀ ಕಲ್ಲುಗಳ ಒಡನಾಟ

ಕೆಟ್ಟ ಮೇಲೆ ಬುದ್ಧಿ ಬರಬಹುದು , ಮರುಗಿದಳು ದಾತೆ

 

ಗತಿ ದರ್ಗತಿಗಳ ನಡುವೆ, ಎಲ್ಲಿರುವನೋ ಈಶ

ಸೋತವರ ಹಿಡಿದೆತ್ತಿ , ತಾನೂ ಬೆಳೆದಿಹಳು ದಾತೆ

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ 

ಚಿತ್ರ್