ಮನದ ಭಾವನೆ
ಮನದ ಭಾವನೆ ಹೇಳಿ ಸಾಗಲೆ
- Read more about ಮನದ ಭಾವನೆ
- Log in or register to post comments
ಮನದ ಭಾವನೆ ಹೇಳಿ ಸಾಗಲೆ
ಶ್ರೀಮಂತಿಕೆಯ ಜೊತೆಯಲ್ಲಿ ಸರಳತೆಯನ್ನು ಮೈಗೂಡಿಸಿಕೊಂಡು ಕೃಷಿಗೆ ಹೆಸರಾದ ಬೆಳಗಾವಿ ಜಿಲ್ಲೆಯಲ್ಲಿ ಭೂಮಿಯನ್ನು ಪ್ರೀತಿಸುವ, ಪೂಜಿಸುವ ಅಪರೂಪದ ಕೃಷಿ ಮಹಿಳೆಯೊಬ್ಬರ ಯಶೋಗಾಥೆಯಿದು.
ಸಾಮಾಜಿಕ ಶಾಂತಿಗೆ ಬಹುದೊಡ್ಡ ಬೆದರಿಕೆ ಹಾಗೂ ಕಳಂಕವಾಗಿರುವ ಕೋಮು ಹಿಂಸಾಚಾರ ಎಲ್ಲಿಯೂ ಘಟಿಸಬಾರದು, ದುರದೃಷ್ಟವೆಂದರೆ, ದೇಶದಲ್ಲಿ ಒಂದಲ್ಲಾ ಒಂದು ಭಾಗದಲ್ಲಿ ಮರುಕಳಿಸುತ್ತ ನಾಗರಿಕ ವ್ಯವಸ್ಥೆಯನ್ನು ತಲೆತಗ್ಗಿಸುವಂತೆ ಮಾಡುತ್ತಿರುವುದು ಆಘಾತಕಾರಿ.
ಡೊನಾಲ್ಡ್ ಟ್ರಂಪ್ ಅಹಂಕಾರ ಮತ್ತು ತಿಕ್ಕಲುತನಕ್ಕೆ ಅಮೆರಿಕದ ಮತದಾರರೇ ಹೊಣೆ. ಯಾವುದೇ ಪ್ರಜಾಪ್ರಭುತ್ವ ದೇಶದಲ್ಲಿ ಆ ದೇಶದ ಜನಪ್ರತಿನಿಧಿಗಳಾಗಿ ಅಥವಾ ಆ ದೇಶದ ಮುಖ್ಯಸ್ಥರಾಗಿ ಪ್ರಧಾನಿ ಅಥವಾ ಅಧ್ಯಕ್ಷರನ್ನು ಚುನಾವಣೆ ಮೂಲಕ ಆಯ್ಕೆ ಮಾಡುವಾಗ ಮತದಾರರು ಸಮಗ್ರವಾಗಿ ಪಕ್ಷ ಮತ್ತು ಅಭ್ಯರ್ಥಿಗಳ ಬಗ್ಗೆ ಚಿಂತಿಸಿ ಮತ ಚಲಾಯಿಸಬೇಕಾಗುತ್ತದೆ.
ಸಾಗುವ ದಾರಿ ಒಂದೇ. ದಾರಿಯಲ್ಲಿ ಒಂದಷ್ಟು ಬದಲಾವಣೆಗಳಾಗಿದ್ದವು ಮಾತ್ರ. ಮೊದಲು ಆ ಊರಿಗೆ ಆ ದಾರಿಯಲ್ಲಿ ಸಾಗುವಾಗ ಶಿಕ್ಷಣ ಪಡೆಯುವ ಹಂಬಲ ಹೆಜ್ಜೆಗಳಲ್ಲಿತ್ತು. ಹೊಸದೇನಾದ್ರು ಸಾಧಿಸಬೇಕು ಅನ್ನುವ ಆಸೆ ಇತ್ತು. ಹಾಗೆ ಹೆಜ್ಜೆಗಳು ತುಂಬಾ ಧೈರ್ಯದಿಂದ ಉತ್ಸಾಹದಿಂದ ಸಾಗಿದ್ದವು. ಶಿಕ್ಷಣ ಮುಗಿದು ಮತ್ತೆ ಅದೇ ದಾರಿಯಲ್ಲಿ ಕೆಲಸ ಹುಡುಕುವುದಕ್ಕೆ ಹೆಜ್ಜೆಗಳನ್ನ ಇಡಬೇಕಾಯಿತು.
"ಮೇಡಂ ನಿಮ್ಮ ಶಾಲೆಯಲ್ಲಿ ಪಾಠವೇನೋ ಚೆನ್ನಾಗಿದೆ, ಆದರೆ ಇಲ್ಲಿನ ಮಕ್ಕಳಲ್ಲಿ ಶಿಸ್ತು ಮಾತ್ರ ತುಂಬಾ ಕಡಿಮೆ, ಈ ವಿಚಾರದಲ್ಲಿ ನನಗೆ ಬಹಳ ಬೇಜಾರು", ಎಂದು ಇತ್ತೀಚೆಗೆ ಮದುವೆ ಸಮಾರಂಭದಲ್ಲಿ ಮಾತುಕತೆ ಗೆ ಸಿಕ್ಕ ನನ್ನ ವಿದ್ಯಾರ್ಥಿಯ ತಂದೆಯು ನಮ್ಮ ಶಾಲೆಯ ಬಗ್ಗೆ ಪ್ರಾಮಾಣಿಕ ಅಭಿಪ್ರಾಯವನ್ನು ನನ್ನೊಂದಿಗೆ ಹಂಚಿಕೊಂಡರು.
ಬಂತು ಬಂತು ವಿಷುವು ನೋಡು
ತೆಂಗಿನಕಾಯಿಗೆ ಕಲ್ಪವೃಕ್ಷ ಎಂಬ ಹೆಸರಿರುವುದು ನಿಜ ತಾನೇ? ಮೊದಲಿನವರು ಅದರ ಎಲ್ಲಾ ಭಾಗಗಳು ನಮಗೆ ಉಪಕಾರಿ ಎನ್ನುವ ದೃಷ್ಟಿಯಲ್ಲಿ ಆ ಹೆಸರು ಇರಿಸಿದ್ದಿರಬಹುದು. ಅಂದರೆ ಕಾಂಡ, ಕಾಯಿ, ಎಲೆ ಎಲ್ಲಾ ಭಾಗಗಳು ಪ್ರಯೋಜನಕ್ಕೆ ಬರುತ್ತವೆ. ಆದರೆ ಈಗ ತೆಂಗಿನಕಾಯಿಯ ಬೆಲೆ ಗಗನಕ್ಕೇರಿದೆ. ಆ ಕಾರಣದಿಂದ ನಿಜಕ್ಕೂ ಕಲ್ಪವೃಕ್ಷವೇ ಆಗಿದೆ. ಸಾಮಾನ್ಯ ಜನರ ಕೈಗೆ ದೊರೆಯದ ವಸ್ತುವಾಗುತ್ತಿದೆ.
“ಇದೊಂದು ರೋಚಕ ಕತೆ. ಕೇವಲ ರೋಚಕ ಕತೆ ಮಾತ್ರವಲ್ಲ ಸತ್ಯ ಕತೆ. ಲೇಖಕ ಸುರೇಶ ಸೋಮಪುರ ಸ್ವತಃ ಕರ್ಣ-ಪಿಶಾಚಿನಿಯನ್ನು ಸಾಕ್ಷಾತ್ಕಾರ ಮಾಡಿಕೊಳ್ಳಲು ಮನೆ-ಮಠ, ಹೆಂಡತಿ-ಮಕ್ಕಳು, ಬಂಧುಗಳು ಎಲ್ಲರನ್ನೂ ಬಿಟ್ಟು ದೀದಿ ಅಂಬಿಕಾದೇವಿಯ ಸಹಾಯದಿಂದ ಶ್ರೀ ಚೈತನ್ಯಾನಂದರನ್ನು ಭೇಟಿಯಾಗುತ್ತಾರೆ. ಅವರ ಮಾರ್ಗದರ್ಶನದಲ್ಲಿ ತಂತ್ರ-ಮಂತ್ರ, ಶವಸಾಧನೆ ಇತ್ಯಾದಿ ನಡೆಸುತ್ತಾರೆ.