ವಿಷುಕಣಿ ಹಬ್ಬವು ಬಂದಿತು
ಬಂತು ಬಂತು ವಿಷುವು ನೋಡು
ನಮ್ಮ ಹಬ್ಬ ವಿಷ್ಣು ಕನಿಯ ಹಾಡು
ಸೂರ್ಯನಿಂದು ಬರುವನು ಮೇಷರಾಶಿಗೆ
ವಿಷು ಕಣಿಯ ಹೆಸರಲಿ ಸಂಕ್ರಾತಿಗೆ!
ಬೆಳಗನೆದ್ದು ಮೀಯುತ
ಸೂರ್ಯನಿಗೆ ನಮಿಸುತ
ಸೌರಮಾನ ಯುಗಾದಿಯ
ಹರುಷದಿಂದ ಆಚರಿಸುತ
ಮಡಿಯನುಟ್ಟು ಪೂಜೆ ಮಾಡಿ
ಭಕ್ತಿಯಿಂದ ಕೈಯ ಮುಗಿಯುತ
ಸಾತ್ವಿಕ ಆಹಾರ ಸೇವನೆಯ ಮಾಡುತ
ಮನೆಯಲ್ಲೇ ದಿನವೆಲ್ಲ ಇರುತ!
ಉರುಳಿಯನ್ನು ತೆಗೆದುಕೊಂಡು
ದವಸ ಧಾನ್ಯ ತುಂಬಿಕೊಂಡು
ಬೆಳೆದ ಬೆಳೆಗಳನೆಲ್ಲ ಇಟ್ಟು
ಮೇಲೆ ಇರಿಸಿ ಕನ್ನಡಿಯು
ಧಾರ್ಮಿಕ ಪಂಚಾಂಗ ಇಟ್ಟು
ದೇವರ ಮುಂದೆ ಇಡುವೆವು
ನಿಲವಿಲಕ್ಕು ದೀಪ ಉರಿಸುವೆವು
ಭಕ್ತಿಯಿಂದ ನಮಿಸುವೆವು!
ಮುಂಜಾವಿನ ಸಮಯದಲ್ಲಿ
ಬೇಗ ಯಾರು ನೋಡುವರೊ
ವರುಷವೆಲ್ಲ ಹರುಷದಿಂದ
ಜಯವು ಸಿಗುವುದವರಿಗೆ
ಹತ್ತಿಯ ದೋತಿ ನೋಡೆ
ನಾಣ್ಯ ನೋಟುಗಳನು ನೋಡೆ
ವಿಷ್ಣು ಮೂರ್ತಿಯನ್ನು ನೋಡೆ
ಸುಖ ಶಾಂತಿಯು ನೆಲೆಸುವುದು!
ತಮಿಳು ನಾಡು ಪುಟ್ಟಂಡ
ಅಸ್ಸಾಂಲ್ಲಿ ಬಿಹು ಹಬ್ಬ
ಬಂಗಾಳದಲ್ಲಿ ನಾಬಾ ಬಾರ್ಷಾ
ಪಂಜಾಬಿನಲ್ಲಿ ವೈಶಾಖ
ದಕ್ಷಿಣ ಕರಾವಳಿಯಲ್ಲಿ ಬಿಸು ಹಬ್ಬ
ಎಲ್ಲರಿಗೂ ಪ್ರೀತಿ ವಿಷು ಹಬ್ಬ
ಹೊಸಬಟ್ಟೆ ಉಡುವರಿಂದು
ಪಟಾಕಿಗಳ ಸಿಡುಸುವರಿಂದು !
ಹಿರಿಯರ ಆಶೀರ್ವಾದ ಪಡೆದು
ಕೈನಿಟಮ್ ಆಚರಿಸುವರು
ಸೂರ್ಯ ಮೇಲೇರಿ ಬಂದು
ಸಮಭಾಜಕ ವೃತ್ತಕ್ಕೆ ಬರುವನು
ಜನರೆಲ್ಲ ಬಕುತಿಯಿಂದ
ಪೂಜೆಗಳನು ಮಾಡುವರು
ವಸಂತಮಾಸ ವಿಷ್ಣು ತರುವನು
ಜನರು ನಂಬಿಕೆಯಿಂದ ಬದುಕುವರು !
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
