ಮನದ ಭಾವನೆ
ಕವನ
ಮನದ ಭಾವನೆ ಹೇಳಿ ಸಾಗಲೆ
ಮನದಿ ನೋವನು ಕಂಡು ತುಡಿಯಲೆ
ಮನಕೆ ತಿಳಿದಿಹ ಕಷ್ಟ ತಿಳಿಯುತ ನಿನ್ನ ಸೇರುವೆನು
ಮನಸ ಹುಳುಕನು ತೊರೆದು ಹೋಗಲೆ
ಮನಸ ಒಳಗಡೆ ಭಜನೆ ಮಾಡಲೆ
ಮನವ ತೆಗಳುತ ದೂರ ಸರಿಯುತ ನಿನ್ನ ಸೇರುವೆನು
ತಿನಿಸು ಬಂದರೆ ದೇಹ ಬೆಳೆವುದು
ತಿನುವ ಹಂತದಿ ಪಾಚಿ ಮೆತ್ತಲು
ತನುವ ದೂರಲು ಮುಂದೆ ಬಾಗುತ ನಿನ್ನ ಸೇರುವೆನು
ಕನಸು ಕಾಣುವ ಹಂತ ದಾಟಲು
ಕನಲಿ ಹೋದೆನು ಮೌನ ತೊರೆಯಲು
ನನಸು ಸಿಗದೆಲೆ ಮೇರೆ ಮೀರಲು ನಿನ್ನ ಸೇರುವೆನು
ಚಿಂತೆ ಸೋತಿದೆ ಮನವು ಬಿರಿದಿದೆ
ಕಂತೆ ಸಂತೆಯ ನಡುವೆ ಸೇರಿದೆ
ಕುಂತೆ ಬಾಡಲು ಹಳತು ವಿಷಯವು ನಿನ್ನ ಸೇರುವೆನು
ಕಂತು ಕಂತಿನ ನೋಟು ಸೆಳೆಯಲು
ಬಂತು ಸಡಗರ ಖುಷಿಯ ಪಡೆಯಲು
ಸಂತ ಬರದಿರೆ ಕಡಲ ಹುಮ್ಮಸು ನಿನ್ನ ಸೇರುವೆನು
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
