ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ನಿಷ್ಪಾಪಿ ಸಸ್ಯಗಳು (ಭಾಗ ೭೨) - ಭೃಂಗರಾಜ

ನಾನು ಬಾಲ್ಯದಲ್ಲಿ ನಮ್ಮತ್ತೆ ಸ್ನಾನಕ್ಕೆ ಹೊರಡುವ ಕ್ರಮವನ್ನು ಗಮನಿಸುತ್ತಿದ್ದೆ. ಸ್ನಾನ ಮಾಡುವ ಅರ್ಧ ಮುಕ್ಕಾಲು ಗಂಟೆಯ ಮೊದಲು ಅವರು ಗದ್ದೆಯ ಬದುವಿಗೆ ಹೋಗಿ ಗರುಗ (ಗರ್ಗ) ಅನ್ನುವ ಸೊಪ್ಪನ್ನು ಹುಡುಕಿ ತಂದು ಅಂಗೈಯಲ್ಲಿ ಹಾಕಿ ತಿಕ್ಕಿ ಬಂದ ರಸವನ್ನು ತಲೆಗೆ ಹಾಕುತ್ತಿದ್ದರು. ಆ ಸೊಪ್ಪಿನ ರಸದಿಂದ ಅಂಗೈಗಳು ಕಪ್ಪಾಗುತ್ತಿದ್ದವು.

Image

ಬಿಡುಗಡೆಯ ಹಾಡುಗಳು (ಭಾಗ ೬) - ತಿರುಮಲೆ ರಾಜಮ್ಮ

ತಿರುಮಲೆ ರಾಜಮ್ಮ (ಭಾರತಿ) ೧೯೦೦ ನವೆಂಬರ್‌ ೨೦ರಂದು ತುಮಕೂರಿನಲ್ಲಿ ಜನಿಸಿದರು. ಕಳೆದ ಶತಮಾನದ ಪ್ರಸಿದ್ಧ ಬರಹಗಾರ್ತಿಯರಲ್ಲಿ ಒಬ್ಬರೆನಿಸಿದ್ದಾರೆ. ನಾಟಕ, ಗೀತೆ ಹಾಗೂ ಪ್ರಬಂಧಗಳು. ಅದರಲ್ಲೂ ನಾಟಕದಲ್ಲಿ ಈಗಲೂ ಲೇಖಕಿಯರ ಸಂಖ್ಯೆ ಬೆರಳೆಣಿಕೆಯಷ್ಟು ಇಲ್ಲವೆಂಬುದನ್ನು ನೆನೆದಾಗ ಇನ್ನಷ್ಟು ಅಚ್ಚರಿ ಎನಿಸುತ್ತದೆ.

Image

ದೀಪಾವಳಿ ಸಡಗರದಲ್ಲಿ ಪರಿಸರ ಹಿತವಿರಲಿ

ದೀಪಾವಳಿ ಎಂದರೆ ಪಟಾಕಿ, ಪಟಾಕಿಯೆಂದರೆ ದೀಪಾವಳಿ ಎನ್ನಿಸುವಷ್ಟು ಈ ಹಬ್ಬ ಪಟಾಕಿ ಜತೆಗೆ ಅವಿನಾಭಾವ ಸಂಬಂಧವನ್ನು ಹೊಂದಿದೆ. ಆದರೆ, ಪರಿಸರ ಮಾಲಿನ್ಯದ ಘನಘೋರ ಸವಾಲನ್ನು ಎದುರಿಸುತ್ತಿರುವ ಈ ದಿನಗಳಲ್ಲಿ ರಾಸಾಯನಿಕಯುಕ್ತ ಪಟಾಕಿಗಳ ಹೊಗೆ, ವಾಯುಮಾಲಿನ್ಯಕ್ಕೂ ಕೊಡುಗೆ ನೀಡುತ್ತಿರುವುದು ಒಂದು ಗಂಭೀರ ವಿಚಾರ.

Image

ಜ್ಞಾನದ ಮರು ಪೂರಣ…!

ಬೆಳಕಿನ ಹಬ್ಬದ ಸಂದರ್ಭದಲ್ಲಿ ಜ್ಞಾನದ ಜ್ಯೋತಿ ಬೆಳಗಲಿ, ಬೆಂಕಿಯ ಜ್ವಾಲೆಯಲ್ಲ, ಜ್ಞಾನದ ಮರು ಪೂರಣ. ಜ್ಞಾನ - ಬುದ್ದಿ - ತಿಳಿವಳಿಕೆ… ಎಂಬ ಸಾಮಾನ್ಯ ಅರ್ಥದ ಅನುಭವ ಅಥವಾ ಅನುಭಾವ ಮುಗಿದು ಹೋಗುವ ವಸ್ತುಗಳ ಪಟ್ಟಿಯಲ್ಲಿ ಸೇರುತ್ತದೆ. ಸಾಮಾನ್ಯವಾಗಿ ಪ್ರಕೃತಿಯಲ್ಲಿ ಎರಡು ರೀತಿಯ ವಸ್ತುಗಳನ್ನು ಪಟ್ಟಿ ಮಾಡಲಾಗಿದೆ.

Image

ಸ್ಟೇಟಸ್ ಕತೆಗಳು (ಭಾಗ ೧೧೨೫)- ಮುಪ್ಪು

ಸೂರ್ಯ ಬಾನಿನಿಂದ ಹಿಡಿದು ಸಮುದ್ರದ ದಡದಲ್ಲಿ ಆ ದಿನದ ವಿಶ್ರಾಂತಿಗಾಗಿ ಜಾರುತ್ತಿದ್ದಾನೆ. ಆತನ ಮಂದ ಬೆಳಕು ಮರಳಿನ ಮೇಲೆ ಬಿದ್ದು ಅಲ್ಲೂ ಸಂಜೆಯ ಪ್ರಶಾಂತತೆ ಹರಡಿದೆ. ಇಳಿ ಸಂಜೆ ಹೊತ್ತಲ್ಲಿ ಇಳಿಯ ವಯಸ್ಸಿನ, ಮುಖದ ಮೇಲೆ ನೆರಿಗೆಯನ್ನು ಹೊಂದಿಸಿಕೊಂಡು ಜೀವನ ಅಸ್ತಂಗತವಾಗುವ ಕೊನೆಯ ಒಂದಷ್ಟು ದಿನಗಳನ್ನು ಎಣಿಸುತ್ತಿರುವ ಅಜ್ಜಿ ಒಬ್ಬರು ನಿಂತಿದ್ದಾರೆ.

Image

ಅದೃಷ್ಟವಂತರು

ಜನರು ಅದೃಷ್ಟದ ಬಗ್ಗೆ ಮಾತನಾಡುವುದನ್ನು ಕೇಳಿದ್ದೇವೆ. ಬೆಂಗಳೂರಿನ ಮೀನು ವ್ಯಾಪಾರಿ ಕೇರಳದ ಲಾಟರಿ ಗೆದ್ದ. ಅವನಿಗೆ ಇಪ್ಪತ್ತೈದು ಲಕ್ಷ ರೂಪಾಯಿ ಬಹುಮಾನ. ಆತ ಬಹಳ ಅದೃಷ್ಟವಂತ. ನಮಗೆ ಹೊಸ ಮನೆ ಕಟ್ಟಿಸುವ ಆಸೆ. ಅದೃಷ್ಟ ಯಾವಾಗ ಕೈಗೂಡುತ್ತದೋ ಭಗವಂತನೇ ಬಲ್ಲ. ಚುನಾವಣೆಯಲ್ಲಿ ಗೆಲ್ಲಲು ಅದೃಷ್ಟ ಬೇಕಲ್ಲ! ಹೀಗೆ ಅದೃಷ್ಟವನ್ನು ನಂಬುವ ಅಸಂಖ್ಯರಲ್ಲಿ ನಾವೂ ಒಬ್ಬರು. ಅದೃಷ್ಟ ಎಂಬುದೊಂದು ಇದೆಯೇ?

Image

ಜಲ ಶೋಧನೆಯ ಪಾರಂಪರಿಕ ಜ್ಞಾನ.

ಅನಾದಿ ಕಾಲದಿಂದಲೂ ನೀರಿನ ಶೋಧನೆ ಎಂಬುದು ಕೆಲವು ಸಾಂಪ್ರದಾಯಿಕ ವಿಧಾನಗಳ ಮೂಲಕ ನಡೆದು ಬಂದಿದೆ. ಈಗಲೂ ಇದರ ಸ್ಥಾನವನ್ನು ವೈಜ್ಞಾನಿಕ ವಿಧಾನ ಓವರ್ ಟೇಕ್ ಮಾಡಿಲ್ಲ. ಪ್ರತೀ ಹಳ್ಳಿಗಳಲ್ಲೂ ನೀರಿನ ಸೆಳೆಯನ್ನು ಗುರುತಿಸಿ ಇಲ್ಲಿ ಬಾವಿ ತೋಡಿ, ಇಂತಿಷ್ಟು ಆಳಕ್ಕೆ ನೀರು ಬರುತ್ತದೆ ಎಂದು ಹೇಳುವ ಜನ ಇದ್ದಾರೆ. ಈ ವಿಧಾನದ ನೀರು ಶೋಧನೆಗೆ ನೂರಾರು ವರ್ಷಗಳ ಇತಿಹಾಸ ಇದೆ.

Image

ಅಕ್ಷರ

ಪುಸ್ತಕದ ಲೇಖಕ/ಕವಿಯ ಹೆಸರು
ಮೂಲ: ಪ್ರೊ. ಒ ಎನ್ ವಿ ಕುರುಪ್, ಕನ್ನಡಕ್ಕೆ: ಡಾ. ಸುಷ್ಮಾ ಶಂಕರ್
ಪ್ರಕಾಶಕರು
ದ್ರಾವಿಡಿಯಂ ಪಬ್ಲಿಕೇಷನ್ಸ್,
ಪುಸ್ತಕದ ಬೆಲೆ
ರೂ. ೧೫೦.೦೦, ಮುದ್ರಣ: ೨೦೨೩

ಜ್ಞಾನಪೀಠ ಪುರಸ್ಕೃತ ಮಲಯಾಳಂ ಕವಿ ಪ್ರೊ.ಒ ಎನ್ ವಿ ಕುರುಪ್ ಅವರು ಬರೆದ ಕೃತಿಯನ್ನು ‘ಅಕ್ಷರ' ಎನ್ನುವ ಹೆಸರಿನಲ್ಲಿ ಕನ್ನಡಕ್ಕೆ ಅನುವಾದ ಮಾಡಿದ್ದಾರೆ ಡಾ. ಸುಷ್ಮಾ ಶಂಕರ್. ಈ ೧೦೨ ಪುಟಗಳ ಪುಟ್ಟ ಕೃತಿಗೆ ಮುನ್ನುಡಿಯನ್ನು ಬರೆದಿದ್ದಾರೆ ಖ್ಯಾತ ಸಾಹಿತಿ ಡಾ. ಚಂದ್ರಶೇಖರ ಕಂಬಾ ಇವರು ಸೊಗಸಾದ ಮುನ್ನುಡಿಯನ್ನು ಬರೆದಿದ್ದಾರೆ.