ಸ್ಟೇಟಸ್ ಕತೆಗಳು (ಭಾಗ ೧೨೯೧) - ತಪ್ಪಲ್ಲವೇ?

ಸ್ಟೇಟಸ್ ಕತೆಗಳು (ಭಾಗ ೧೨೯೧) - ತಪ್ಪಲ್ಲವೇ?

ನೀನು ಯಾಕೆ ಹೀಗಾದೆ ನಿನಗೆ ಈ ಬುದ್ಧಿಯನ್ನ ನಾನು ಮನೆಯಲ್ಲಿ ಕಲಿಸಿಲ್ಲ ಆದರೂ ನೀನು ಮಾಡಿದ್ದು ಸರಿಯಾ. ನಿನ್ನ ಕಣ್ಣ ಮುಂದೆ ನಿನ್ನ ಮನಸ್ಸಿಗೆ ಇಷ್ಟವಾದವರು ಸಿಕ್ಕಿದ್ದಾರೆ ಅನ್ನುವ ಕಾರಣಕ್ಕೆ ಒಬ್ಬರನ್ನ ಪ್ರೀತಿಸಿದ್ದೀಯ. ಅದೇ ಪ್ರೀತಿಯನ್ನು ಬೇರೆ ಯಾರಿಗೂ ತಿಳಿಸದೆ ಇನ್ನೊಬ್ಬರನ್ನು ನಿನ್ನ ಪ್ರೀತಿಯ ಬಲೆಯ ಒಳಗೆ ಎಳೆದುಕೊಂಡಿದ್ದೀಯಾ ಇಬ್ಬರಲ್ಲೂ ಪ್ರೀತಿಯ ನಾಟಕ ಮಾಡುತ್ತಾ ಒಳ್ಳೆಯವನಾಗಿ ಉಳಿದುಬಿಟ್ಟಿದಿಯ ಆದ್ರೆ ನಿನಗೆ ಮನೆಯಲ್ಲಿ ನಾನ್ಯಾವತ್ತೂ ಮೋಸ ಮಾಡುವುದನ್ನು ಹೇಳಿಕೊಟ್ಟಿಲ್ಲ ಯಾರದೋ ಭಾವನ ಜೊತೆ ಆಟ ಮಾಡುವುದನ್ನು ಹೇಳಿಕೊಟ್ಟಿಲ್ಲ ಸದಾ ಒಳಿತಾಗಲಿ ಎಂದು ತಂಡವು ತನ್ನ ಬೆಲೆ ಜೀವನ ಉದ್ಧಾರ ಅಂತ ಹೇಳಿ ಕೊಟ್ಟವರು ನಾನು ಆದರೂ ನೀನು ಹಾಗೆ ಮಾಡದೆ ಆ ಎರಡು ಮುಕ್ತ ಜೀವಗಳು ನೋವಿನಿಂದ ನರಳುವ ಹಾಗೆ ಮಾಡಿದ್ದೀಯಾ? ಇದಿಷ್ಟು ಸರಿಯಾ ನಿನ್ನನ್ನ ಮತ್ತೊಮ್ಮೆ ಪ್ರಶ್ನೆ ಮಾಡ್ಕೋ, ನಿನ್ನಿಂದ ನೋವುಗಳು ಮುಂದುವರೆದಿದ್ದವಾ ಅಂತ. ಅಪ್ಪನ ಪ್ರಶ್ನೆ ಮಗನ ಸ್ವರವನ್ನ ಮೌನವಾಗಿಸಿತು.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ